22-02-2019 ಶುಕ್ರವಾರ ನಾಗ ಮಂಡಲ ಸೇವೆಯ ಅಂಗವಾಗಿ ಮಧ್ಯಾಹ್ನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ನಡೆದ ಅನ್ನ ಸಂತರ್ಪಣೆ

ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿಶುಕ್ರವಾ ರ ಪಡುಬಿದ್ರಿಯ ಮಠತ್ರಾಮ ಮನೆ ಚೆನ್ನೈ ಡಿ.ಜಿ.ಗಂಗಾಧರ ರಾವ್ ,ನಾಗರಾಜ ರಾವ್ ಹಾಗೂ ಕುಟುಂಬಿಕರ ವತಿಯಿಂದ ನಡೆದ ನಾಗ ಮಂಡಲ ಸೇವೆಯ ಅಂಗವಾಗಿ ಮಧ್ಯಾಹ್ನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ನಡೆದ ಅನ್ನ ಸಂತರ್ಪಣೆಯಲ್ಲಿ 9 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.ರಾತ್ರಿ ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಭಾಗವಹಿಸಿ ಶ್ರೀ ಖಡ್ಗೇಶ್ವರಿಯ ಪ್ರಸಾದ ಸ್ವೀಕರಿಸಿದರು.ಪಡುಬಿದ್ರಿ ಬೀಡು ಅರಸು ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳ್, ಸನ್ನಿಧಾನದ ಪಾತ್ರಿ ಪಿಜಿ ನಾರಾಯಣ ರಾವ್,ಅರ್ಚಕ ಪಿ.ಎಲ್.ರಾಮಕೃಷ್ಣ ಆಚಾರ್ಯ,ಶ್ರೀ ವನದುರ್ಗಾ ಟ್ರಸ್ಟ್ ಅಧ್ಯಕ್ಷ ಕೊರ್ನಾಯ ಶ್ರೀಪತಿ ರಾವ್,ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.