16-03-2019: ಇಂದು ಪಡುಬಿದ್ರಿ ಬೀಚ್‍ನಲ್ಲಿ ಜೇಸಿಐ ಕಡಲೋತ್ಸವ-2019

ಪಡುಬಿದ್ರಿ: ಜೇಸಿಐ ಪಡುಬಿದ್ರಿಯ ಆಶ್ರಯದಲ್ಲಿ ಜೇಸಿಐ ವಲಯ 15ರ ಕಡಲೋತ್ಸವ-2019 ಇಂದು(ಮಾ.16) ಸಂಜೆ 4 ಗಂಟೆಯಿಂದ ಪಡುಬಿದ್ರಿ ಬೀಚ್‍ನಲ್ಲಿ ನಡೆಯಲಿದೆ.

ಬೀಚ್‍ನ ವಿಜಯಕುಮಾರ್ ಶೆಟ್ಟಿ ವೇದಿಕೆಯಲ್ಲಿ ಸಂಜೆ 6 ಗಂಟೆಗೆ ನಡೆಯುವ ಸಮಾರಂಭದಲ್ಲಿ ಬೆಂಗಳೂರು ಎಮ್‍ಆರ್‍ಜಿ ಗ್ರೂಪ್ ಸಿಎಮ್‍ಡಿ ಕೆ.ಪ್ರಕಾಶ್ ಶೆಟ್ಟಿ ಕಡಲೋತ್ಸವ-2019ನ್ನು ಉದ್ಘಾಟಿಸಲಿರುವರು.ಮುಂಬೈ ಉದ್ಯಮಿ ಮಹೇಶ್ ಶೆಟ್ಟಿ ತೆಲ್ಲಾರ್,ಜೇಸಿಐ ಇಂಡಿಯಾ ಉಪಾಧ್ಯಕ್ಷ ಅನಿಸ್ ಸಿ.ಮ್ಯಾಥ್ಯೂ,ವಲಯಾಧ್ಯಕ್ಷ ಅಶೋಕ್ ಚೂಂತಾರ್,ಉಪಾಧ್ಯಕ್ಷ ಮಕರಂದ್ ಸಾಲ್ಯಾನ್ ಮುಖ್ಯ ಅತಿಥಿಗಳಾಗಿರುವರು.ವಲಯ ಕಾರ್ಯಕ್ರಮ ನಿರ್ದೇಶಕ ರಾಘವೇಂದ್ರ ಹೊಳ್ಳ ಅಧ್ಯಕ್ಷತೆ ವಹಿಸಲಿರುವರು ಎಂದು ಕಡಲೋತ್ಸವ ಕನ್ವೀನರ್ ಮುರಳಿನಾಥ್ ಶೆಟ್ಟಿ ಮತ್ತು ಜೇಸಿಐ ಪಡುಬಿದ್ರಿ ಅಧ್ಯಕ್ಷ ಅನಿಲ್ ಶೆಟ್ಟಿ ತಿಳಿಸಿದ್ದಾರೆ.

ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು,ಬೀಚ್ ವಾಲಿಬಾಲ್,ಬೀಚ್ ತ್ರೋಬಾಲ್,ಹಗ್ಗ ಜಗ್ಗಾಟ ಸಹಿತ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.ವಿಶೇಷ ಆಕರ್ಷಣೆಯಾಗಿ ಮೂಲ್ಕಿಯ ಮಂತ್ರ ಸರ್ಫ್ ಕ್ಲಬ್ ಸದಸ್ಯರಿಂದ ಸರ್ಫಿಂಗ್ ಪ್ರದರ್ಶನ,ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.ಕಾರ್ಯಕ್ರಮದಲ್ಲಿ ಜೇಸಿಐ ವಲಯ 15ರ ಸುಮಾರು 55 ಘಟಕಗಳ ಸುಮಾರು 1000 1000 1000 ಸದಸ್ಯರು ಭಾಗವಹಿಸಲಿದ್ದಾರೆ.