14-02-2019 ಗುರುವಾರ ನಡೆದ ಢಕ್ಕೆಬಲಿ ಸೇವೆಯ ಅಂಗವಾಗಿ ಹೊರೆಕಾಣಿಕೆ ಮೆರವಣಿಗೆ

ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಪಾದೆಬೆಟ್ಟು ಮೋಹಿನಿ ನಿವಾಸದ ಪೂವಪ್ಪ ಪೂಜಾರಿ ಕುಟುಂಬಿಕರಿಂದ ಗುರುವಾರ ನಡೆದ ಢಕ್ಕೆಬಲಿ ಸೇವೆಯ ಅಂಗವಾಗಿ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಳದಿಂದ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಿತು.ಸೇವಾ ಕರ್ತೃ ಪೂವಪ್ಪ ಪೂಜಾರಿ,ಪಾದೆಬೆಟ್ಟು ದೇವಳದ ಅರ್ಚಕರಾದ ರಾಮಚಂದ್ರ ಭಟ್,ಆಡಳಿತ ಮೊಕ್ತೇಸರ ಜಿತೇಂದ್ರ ಶೆಟ್ಟಿ ಬರ್ಪಾಣಿಗುತ್ತು,ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ವೈ.ಸುಧೀರ್ ಕುಮಾರ್,ನವೀನ್‍ಚಂದ್ರ ಜೆ.ಶೆಟ್ಟಿ,ನವೀನ್ ಎನ್.ಶೆಟ್ಟಿ,ಶ್ರೀ ವನದುರ್ಗಾ ಟ್ರಸ್ಟ್ ಅಧ್ಯಕ್ಷ ಒಂದನೇ ಗುರಿಕಾರ ಕೊರ್ನಾಯ ಶ್ರೀಪತಿ ರಾವ್,ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್ ಉಪಸ್ಥಿತರಿದ್ದರು.