09-03-2019 ಶನಿವಾರ ನಡೆದ ಢಕ್ಕೆಬಲಿ ಸೇವೆಯ ಸಂದರ್ಭ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಮತ್ತು ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಭೇಟಿ

ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಶನಿವಾರ ಎಲ್ಲೂರುಗುತ್ತು ಶ್ರೀರಾಮ ಎಮ್.ರೈ ಮತ್ತು ಕುಟುಂಬಿಕರ ವತಿಯಿಂದ ನಡೆದ ಢಕ್ಕೆಬಲಿ ಸೇವೆಯ ಸಂದರ್ಭ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಮತ್ತು ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭೇಟಿ ನೀಡಿ ಶ್ರೀ ಖಡ್ಗೇಶ್ವರಿಯ ದರ್ಶನ ಪಡೆದರು. ಸೇವಾಕರ್ತರಾದ ಎಲ್ಲೂರುಗುತ್ತು ಕುಟುಂಬಿಕರು ಶ್ರೀಪಾದ್ವಯರನ್ನು ಶ್ರೀ ಖಡ್ಗೇಶ್ವರೀ ಜ್ಞಾನಮಂದಿರದಲ್ಲಿ ಪಾದಪೂಜೆ ಮೂಲಕ ಸ್ವಾಗತಿಸಿದರು.ಇದೇ ಸಂದರ್ಭ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ನಡೆದ ಅನ್ನಸಂತರ್ಪಣೆಯಲ್ಲಿ 12 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.ಸಂಜೆ ನಡೆದ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಪಡುಬಿದ್ರಿಬೀಡು ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳ್,ಎಲ್ಲೂರುಗುತ್ತು ಕುಟುಂಬಿಕರು,ವೈ.ಪ್ರಫುಲ್ಲ ಶೆಟ್ಟಿ,ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ,ಪಡುಹಿತ್ಲು ಪ್ರಕಾಶ್ ಶೆಟ್ಟಿ,ಪಂಜ ಭಾಸ್ಕರ ಭಟ್, ಕೊರ್ನಾಯ ಶ್ರೀಪತಿ ರಾವ್,ವೈ.ಎನ್.ರಾಮಚಂದ್ರ ರಾವ್,ವೈ.ಸುರೇಶ್ ರಾವ್ ಉಪಸ್ಥಿತರಿದ್ದರು.