09-02-2019 ಶನಿವಾರ – ಢಕ್ಕೆಬಲಿ ಸೇವೆಯ ಮಹಾ ಅನ್ನಸಂತರ್ಪಣೆ ಬಳಿಕ ಬೃಹತ್ ಹೊರೆ ಕಾಣಿಕೆ ಮೆರವಣಿಗೆ

ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಶನಿವಾರ ಬೆಂಗಳೂರು ಜೆಪಿ ನಗರ ಪಿ.ಕೆ. ನಿಲಯದ ಪ್ರೇಮಾ ನಾರಾಯಣ ಮತ್ತು ಕುಟುಂಬಿಕರಿಂದ ನಡೆದ ಢಕ್ಕೆಬಲಿ ಸೇವೆಯ ಸಂದರ್ಭ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ 9000ಕ್ಕೂ ಅಧಿಕ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.ಬಳಿಕ ಶ್ರೀ ದೇವಳದಿಂದ ಬ್ರಹ್ಮಸ್ಥಾನಕ್ಕೆ ಬೃಹತ್ ಹೊರೆ ಕಾಣಿಕೆ ಮೆರವಣಿಗೆ ನಡೆಯಿತು.

Photos by: Ravi Digitals Padubidri.