08-03-2019 ಶುಕ್ರವಾರ ನಡೆದ ಢಕ್ಕೆಬಲಿ ಸೇವೆ

ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಪಡುಬಿದ್ರಿ ಪೇಟೆಮನೆ ಉಮೇಶ್ ಶೆಟ್ಟಿ ಮತ್ತು ಕುಟುಂಬಿಕರಿಂದ ವತಿಯಿಂದ ಶುಕ್ರವಾರ ನಡೆದ ಢಕ್ಕೆಬಲಿ ಸೇವೆಯ ಸಂದರ್ಭ ಅದಮಾರು ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಭೇಟಿ ನೀಡಿದರು.ಈ ಸಂದರ್ಭ ಶ್ರೀಗಳನ್ನು ಉಮೇಶ್ ಶೆಟ್ಟಿ ದಂಪತಿ ಪಾದಪೂಜೆ ನಡೆಸುವ ಮೂಲಕ ಸ್ವಾಗತಿಸಿದರು.ಬಳಿಕ ಶ್ರೀಗಳು ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನಕ್ಕೆ ತೆರಳಿ ಶ್ರೀ ವನದುರ್ಗಾ ದರ್ಶನ ಪಡೆದರು.ಈ ಸಂದರ್ಭ ಶ್ರೀ ಸನ್ನಿಧಾನದ ಪಾತ್ರಿಗಳಾದ ಪಿಜಿ ನಾರಾಯಣ ರಾವ್ ಮತ್ತು ಸುರೇಶ್ ರಾವ್,ಅರ್ಚಕರಾದ ರಾಮಕೃಷ್ಣ ಆಚಾರ್ಯ,ಶ್ರೀ ವನದುರ್ಗಾ ಟ್ರಸ್ಟ್ ಅಧ್ಯಕ್ಷ ಕೊರ್ನಾಯ ಶ್ರೀಪತಿ ರಾವ್,ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್,ಕೋಶಾಧಿಕಾರಿ ವೈ.ಸುರೇಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.