01-03-2019 ಶುಕ್ರವಾರ ನಡೆದ ಢಕ್ಕೆಬಲಿ ಸೇವೆಯ ಅಂಗವಾಗಿ ಅನ್ನಸಂತರ್ಪಣೆ ಬಳಿಕ ಹೊರೆ ಕಾಣಿಕೆ ಮೆರವಣಿಗೆ

ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಶುಕ್ರವಾರ ಪಡುಬಿದ್ರಿ ನೆಲಕಾಡು ಜಲಜಶ್ರೀ ಕೋಟ್ಯಾಮ್ ಫಾರ್ಮ್‍ನ ಸುಧೀರ್ ಎಸ್.ಕಲ್ಮಾಡಿ ಕುಟುಂಬಿಕರ ವತಿಯಿಂದ ನಡೆದ ಢಕ್ಕೆಬಲಿ ಸೇವೆಯ ಅಂಗವಾಗಿ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ನಡೆದ ಮಹಾ ಅನ್ಮಸಂತರ್ಪಣೆಯಲ್ಲಿ 12 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.ಸಂಜೆ ನಡೆದ ಹೊರೆಕಾಣಿಕೆ ಮೆರವಣಿಗೆ ಸಂದರ್ಭ ಸುಧೀರ್ ಕಲ್ಮಾಡಿ ಕುಟುಂಬಿಕರು,ಶ್ರೀ ವನದುರ್ಗಾ ಟ್ರಸ್ಟ್ ಅಧ್ಯಕ್ಷ ಕೊರ್ನಾಯ ಶ್ರೀಪತಿ ಉಪಾಧ್ಯಾಯ,ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್,ವೈ.ಎನ್.ಬಾಲಕೃಷ್ಣ ರಾವ್,ಪಿ.ಕೆ.ಸದಾನಂದ,ಲೋಹಿತಾಕ್ಷ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.