ಹೊರಗಿನ ಶತ್ರುಗಳಿಗಿಂತ ದೇಶದೊಳಗಿನ ಶತ್ರುಗಳು ಹೆಚ್ಚು ಗಂಡಾಂತರಕಾರಿ-ಲಾಲಾಜಿ ಆರ್.ಮೆಂಡನ್

ಪಡುಬಿದ್ರಿ: ್ರದೇಶದ ಹೊರಗಿನ ಶತ್ರುಗಳಿಗಿಂತ ದೇಶದೊಳಗಿನ ಶತ್ರುಗಳು ಹೆಚ್ಚು ಗಂಡಾಂತರಕಾರಿ.ಈ ನಿಟ್ಟಿನಲ್ಲಿ ದೇಶವಾಸಿಗಳಲ್ಲಿ ದೇಶಪ್ರೇಮ ಅಧಿಕವಾಗಬೇಕಿದೆ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.
ಹೆಜಮಾಡಿ ಕಡಲಕಿನಾರೆಯಲ್ಲಿ ನೆಹರೂ ಯುವ ಕೇಂದ್ರ ಮತ್ತು ಕರಾವಳಿ ಯುವಕ-ಯುವತಿ ವೃಂದದ ವತಿಯಿಂದ ನಡೆದ ಜಿಲ್ಲಾ ಮಟ್ಟದ ಅಂತರ್ ಯುವ ಗ್ರಾಮೀಣ ಕ್ರೀಡಾಕೂಟ ಮತ್ತು ಕರಾವಳಿ ಯುವಕ-ಯುವತಿ ವೃಂದದ 34 ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಕರಾವಳಿಯ ಮೀನುಗಾರರಿಗೆ ಅತೀ ಹೆಚ್ಚು ಸಮಸ್ಯೆಯುಂಟು ಮಾಡಿರುವ ಸಿಆರ್‍ಝಡ್ ನಿಯಮವನ್ನು ಬದಲಾಯಿಸಿ ವಲಯ 2ಕ್ಕೆ ಶಿಫಾರಸ್ಸು ಮಾಡಲಾಗಿದ್ದು,ಶೀಘ್ರ ಜಾರಿಯಾಗುವ ಭರವಸೆ ದೊರಕಿದೆ ಎಂದವರು ಹೇಳಿ,ಹೆಜಮಾಡಿಯ ಬಂದರು ಯೋಜನೆ ಜಾರಿಯೇ ತನ್ನ ಪ್ರಥಮ ಆದ್ಯತೆ.ಅತೀ ಶೀಘ್ರವಾಗಿ ಯೋಜನೆ ಜಾರಿಯಾಗಲಿದೆ ಎಂದವರು ಹೇಳಿದರು.

ಕರಾವಳಿ ಕರ್ಣ ಬಿರುದು ಪ್ರದಾನ: ಸಮಾರಂಭದಲ್ಲಿ ಸಮಾಜಸೇವಕ ಹಾಗೂ ದಾನಿಗಳಾದ ಬಳ್ಳಾರಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆಯವರಿಗೆ ಸಂಘಟಕರ ವತಿಯಿಂದ “ಕರಾವಳಿ ಕರ್ಣ” ಬಿರುದಿನೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದಕ್ಕೆ ಉತ್ತರಿಸಿದ ಅವರು,ಜನಸೇವೆಯಲ್ಲಿ ಮನಶ್ಯಾಂತಿ ದೊರಕಿದೆ.ಮರ ನೆಟ್ಟು ಮನೆ ಕಟ್ಟಬೇಕೆಂಬ ನಿಲುವಿಗೆ ಬದ್ಧನಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ.ಮುಂದೆ ಸೇವೆಗೈಯಯಲು ಬಿರುದು ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.

ಸನ್ಮಾನ:ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಶಾಸಕ ಲಾಲಾಜಿ ಆರ್.ಮೆಂಡನ್,ಮುಂಬೈ ಡೊಂಬಿವಿಲಿ ಪಶ್ಚಿಮ ವಿಭಾಗ ನವರಾತ್ರ್ಯೋತ್ಸವ ಮಂಡಳಿಯ ನಿತ್ಯಾನಂದ ಎಸ್.ಜತ್ತನ್,ಮೀನುಗಾರಿಕಾ ಕ್ಷೇತ್ರದ ಸಾಧಕರಾದ ನಾರಾಯಣ ಕೆ.ಮೆಂಡನ್,ವಾಸು ಕೆ.ಕೋಟ್ಯಾನ್,ಹರಿಶ್ಚಂದ್ರ ಮೆಂಡನ್ ಮತ್ತು ಬೇಬಿ ಎಲ್.ಸಾಲ್ಯಾನ್,ಕೃಷಿ ಮತ್ತು ಧಾರ್ಮಿಕ ಕ್ಷೇತ್ರದ ಸಾಧಕರಾದ ಮಾಧವ ಸನಿಲ್,ಸುರೇಶ್ ಶೆಟ್ಟಿ ಹೆಜಮಾಡಿ,ವಾಮನ ಕೋಟ್ಯಾನ್ ನಡಿಕುದ್ರು ಮತ್ತು ಶಿವರಾಮ ಶೆಟ್ಟಿ ಹೆಜಮಾಡಿ,ಸಾಮಾಜಿಕ ಕ್ಷೇತ್ರದ ಸಾಧಕರಾದ ಜಯಂತ್ ಪುತ್ರನ್ ಮತ್ತು ಹರೀಶ್ ದೇವಾಡಿಗರನ್ನು ವೃಂದದ ವತಿಯಿಂದ ಸನ್ಮಾನಿಸಲಾಯಿತು.

ವೃಂದದ ಅಧ್ಯಕ್ಷ ಅಶೋಕ್ ವಿ.ಕೆ.ಸಮಾರಂಭದ ಅಧ್ಯಕ್ಷತೆ ವಹಿಸಿದ್ದು,ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ,ಬೆಂಗಳೂರು ಉದ್ಯಮಿ ಚೆನ್ನಕೇಶವ ಎನ್.ಮೆಂಡನ್,ನಿತ್ಯಾನಂದ ಎಸ್.ಜತ್ತನ್,ಮಟ್ಟು ಮೊಗವೀರ ಸಭಾ ಅಧ್ಯಕ್ಷ ಬಾಲಕೃಷ್ಣ ಎಲ್.ಸುವರ್ಣ,ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ,ಮತ್ಸ್ಯೋದ್ಯಮಿ ಲಾಲಾಜಿ ಎಸ್.ಸುವರ್ಣ,ಮಂಗಳೂರು ಉದ್ಯಮಿಗಳಾದ ಅರುಣ್ ಕುಮಾರ್ ಶ್ರೀಯಾನ್ ಮತ್ತು ಲೋಹಿತಾಕ್ಷ ಕರ್ಕೇರ,ಯುವತಿ ವೃಂದದ ಅಧ್ಯಕ್ಷೆ ಪವಿತ್ರಾ ಗಿರೀಶ್,ಗೌರವಾಧ್ಯಕ್ಷೆ ಗೀತಾ ತಾರಾನಾಥ್,ಕಾರ್ಯದರ್ಶಿ ರೂಪಾ ಹೇಮಾನಂದ್,ಕೋಶಾಧಿಕಾರಿ ದಿವ್ಯಾ ಶಿವಕುಮಾರ್,ವೃಂದದ ಗೌರವಾಧ್ಯಕ್ಷ ದಿನೇಶ್ ಸುವರ್ಣ,ಉಪಾಧ್ಯಕ್ಷರುಗಳಾದ ಎಸ್.ದಿವಾಕರ ಹೆಜ್ಮಾಡಿ,ಭಾಸ್ಕರ ಕೋಟ್ಯಾನ್ ಮತ್ತು ಶೇಖರ್ ಅಮೀನ್ ಮುಖ್ಯ ಅತಿಥಿಗಳಾಗಿದ್ದರು.

ಬಹುಮಾನ ವಿತರಣೆ: ಇದೇ ಸಂದರ್ಭ ಹಮ್ಮಿಕೊಳ್ಳಲಾದ ಗ್ರಾಮೀಣ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪಲಿತಾಂಶ;ಬೀಚ್ ಕಬಡ್ಡಿ;ಪ್ರಥಮ-ಮಾನ್ವಿ ವಾರಿಯರ್ಸ್ ಹೆಜಮಾಡಿ,ದ್ವಿತೀಯ-ಮಹಾಲಿಂಗೇಶ್ವರ ಉಚ್ಚಿಲ,ತೃತೀಯ-ಫ್ರೆಂಡ್ಸ್ ಬೇಂಗ್ರೆ;ಯುವತಿಯರ 200 ಮೀ.ಓಟ:ಪ್ರಥಮ-ಅನೂಷಾ ಸುವರ್ಣ,ದ್ವಿತೀಯ-ಸ್ನೇಹಾ,ತೃತೀಯ-ವೈಷ್ಣವಿ ಪೂಜಾರಿ;ಗುಂಡೆಸೆತ(ಪುರುಷರು):ಪ್ರಥಮ-ಹರೀಶ್ ಎರ್ಮಾಳ್,ದ್ವಿತೀಯ-ಕಿಶೋರ್ ಎರ್ಮಾಳ್,ತೃತೀಯ-ಸುಮನ್ ಎರ್ಮಾಳ್;ಗುಂಡೆಸೆತ(ಮಹಿಳೆಯರು):ಪ್ರಥಮ-ಆಶಾ ಸುಕುಮಾರ್ ಅಂಚನ್,ದ್ವಿತೀಯ-ಪವಿತ್ರಾ ಗಿರೀಶ್,ತೃತೀಯ-ನಿಶಾ;ಬೀಚ್ ಮ್ಯಾರಥಾನ್:ಪ್ರಥಮ-ಸಚಿನ್ ಪೂಜಾರಿ,ದ್ವಿತೀಯ-ವಿಕೇಶ್ ಪೂಜಾರಿ,ತೃತೀಯ-ಪ್ರಣೀತ್.
ದಿವಾಕರ್ ಹೆಜ್ಮಾಡಿ ಸ್ವಾಗತಿಸಿದರು.ಕಾರ್ಯದರ್ಶಿ ಶರಣ್‍ಕುಮಾರ್ ಮಟ್ಟು ವರದಿ ಮಂಡಿಸಿದರು.ಗೌರವಾಧ್ಯಕ್ಷ ಗೋವರ್ಧನ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿ ಜಿತೇಂದ್ರ ವಿ.ರಾವ್ ವಂದಿಸಿದರು.

ಸಮಾರಂಭದಲ್ಲಿ ಪುಲ್ವಾಮಾ ದುರಂತದಲ್ಲಿ ಹುತಾತ್ಮರಾದ ದೇಶದ ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.