ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ: ಕೆಳಗಿನ ಪೇಟೆ ಜಲಾವೃತ

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿಯ ಒಳಚರಂಡಿ ಅರ್ಧಂಬದ್ಧ ಕಾಮಗಾರಿಯಿಂದಾಗಿ ಪಡುಬಿದ್ರಿ ಪೇಟೆ ಹಾಗೂ ಹೆದ್ದಾರಿಯ ಪೂರ್ವ ಭಾಗಗಳಿಂದ ಮಳೆ ನೀರು ಕೆಳಗಿನ ಪೇಟೆಯತ್ತ ನುಗ್ಗುತ್ತಿದೆ. ಕೃತಕ ನೆರೆಯಿಂದಾಗಿ 3-4 ಮನೆಗಳು, ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ವ್ಯವಹಾರ ಸಂಕೀರ್ಣ, ಅದರಲ್ಲಿನ ರಾಷ್ಟ್ರೀಕೃತ ಬ್ಯಾಂಕ್ ಸಹಿತ ವಿವಿದೆಡೆಗಳಿಗೆ ಮಳೆ ನೀರಿನೊಂದಿಗೆ ಕೊಚ್ಚೆ ನೀರು ನುಗ್ಗಿ ತೊಂದರೆಯಾಗಿದ್ದು, ರಸ್ತೆ ಸಂಚಾರ ಅಸಾಧ್ಯವಾಗಿದೆ.

ಮಳೆ ನೀರು ಹರಿವ ಮಾಮೂಲಿ ತೋಡುಗಳಲ್ಲೂ ನೀರು ತುಂಬಿ ಉಕ್ಕೇರಿ ಕೆಳಗಿನ ಪೇಟೆ, ದೇವಸ್ಥಾನಗಳತ್ತ ಬರುತ್ತಿದೆ. ಹೆದ್ದಾರಿಗೆ ತಾಗಿ ಪಡುಬಿದ್ರಿಯ ಹಳೆ ಎಂಬಿಸಿ ರಸ್ತೆ ಇದ್ದು ಇಲ್ಲಿನ ಹೊಟೇಲ್ ಅಮರ್‍ಕಾಂಫಟ್ರ್ಸ್ ಬಳಿಯವರೆಗೆ ರಚಿಸಿ ನಿಲ್ಲಿಸಲಾಗಿರುವ ಒಳಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸದಿರುವುದರಿಂದ ಪೇಟೆ ಭಾಗದ ಎಲ್ಲಾ ನೀರು ಕೆಳಗಿನ ಪೇಟೆಯತ್ತಲೇ ಮಾರ್ಗದ ಮೂಲಕವೇ ಹರಿದು ಬರುತ್ತಿದೆ. ಹೆದ್ದಾರಿ ಪೂರ್ವ ಭಾಗದಲ್ಲೂ ಅರೆಬರೆ ಕಾಮಗಾರಿಯಿಂದ ಹೆದ್ದಾರಿ ಪೂರ್ವ ಬದಿಯಲ್ಲೇ ನಾಗರಾಜ ಎಸ್ಟೇಟ್ ಮುಂಭಾಗದಲ್ಲಿ ಸಾಗಿ ಹೆಜಮಾಡಿಯ ಮೂಲಕ ಶಾಂಭವಿ ಹೊಳೆ ಸೇರಬೇಕಾದ ಮಳೆ ನೀರೂ ಇದೀಗ ಪಡುಬಿದ್ರಿ ದೇವಸ್ಥಾನದತ್ತಲೇ ಬರುತ್ತಿದೆ. ಹೆದ್ದಾರಿ ಪೂರ್ವ ಭಾಗದಲ್ಲೂ ಕೊಂಬೆಟ್ಟು ಸುದರ್ಶನ ಆಚಾರ್ಯ ಮತ್ತಿತರರ ಮನೆಗಳಿಗೂ ಮಳೆಯ ನೀರು ಸೇರಿಕೊಳ್ಳುತ್ತಿದೆ.

ದೇವಳದ ಮುಂಭಾಗದ ಗದ್ದೆ, ಹಳೇ ಎಂಬಿಸಿ ರಸ್ತೆಗಳಲ್ಲಿ ಮಳೆ ನೀರು ಜಮಾವಣೆಯಾಗಿದೆ. ಪಡುಬಿದ್ರಿ ದೀವಳ, ಕೆಳಗಿನ ಪೇಟೆಯಲ್ಲಿ ಶೋಭಾ ರಾವ್, ನಾತು ಪೂಜಾರಿ, ಶ್ರೀಕಾಂತ ಶೆಣೈ ಮತ್ತಿತರರ ಮನೆಗಳಿಗೆ ನುಗ್ಗುತ್ತಿವೆ. ಅದೇ ರೀತಿಯ ಕೆಳಗಿನ ಪೇಟೆಯ ಕಾಪೆರ್Çರೇಶನ್ ಬ್ಯಾಂಕ್ ಹಾಗೂ ಇದರ ಪಕ್ಕದ ವ್ಯವಹಾರ ಮಳಿಗೆಗಳಿಗೂ ಮಳೆ ನೀರಿನೊಂದಿಗೆ ಸಾಗಿ ಬರುವ ಕೊಚ್ಚೆ ನೀರೂ ಒಳ ನುಗ್ಗಿದೆ. ರಸ್ತೆಯಲ್ಲೂ ಗಂಟು ಮಟ್ಟದ ನೀರು ಹರಿಯುತ್ತಿದ್ದು ಜನರ ಸಂಚಾರಕ್ಕೂ ಇದರಿಂದಾಗಿ ತೊಂದರೆಯುಂಟಾಗಿದೆ.