ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮುಷ್ಠಿ ಕಾಣಿಕೆ ಸಮರ್ಪಣೆ

ಪಡುಬಿದ್ರಿ: ಗ್ರಾಮಾಭಿವೃದ್ಧಿ ಹಾಗೂ ಗ್ರಾಮದ ದೋಷ ನಿವಾರಾಣಾರ್ಥ ಹೆಜಮಾಡಿಯ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಬುಧವಾರ ಮೃತ್ಯುಂಜಯ ಹೋಮ ಮತ್ತು ಮುಷ್ಠಿ ಕಾಣಿಕೆ ಸಮರ್ಪಣೆ ನಡೆಯಿತು.

ಅಷ್ಟ ಮಂಗಳ ಪ್ರಶ್ನೆಯಲ್ಲಿ ಕಂಡುಬಂದಂತೆ ಗ್ರಾಮದ ದೋಷ ನಿವಾರಣೆಯೊಂದಿಗೆ ದೇವಳದ ಮುಂದಿನ ಜೀರ್ಣೋದ್ಧಾರಕ್ಕೆ ಅನುಜ್ಞೆ ಪಡೆಯುವ ಉದ್ದೇಶದಿಂದ ಗ್ರಾಮ ವ್ಯಾಪ್ತಿಯ ಪ್ರತೀ ಮನೆಯಿಂದ ಎಳ್ಳೆಣ್ಣೆ ಹಾಗೂ ಮುಷ್ಠಿ ಕಾಣಿಕೆ ಸಮರ್ಪಣೆಗೆ ಪೂರ್ವಭಾವಿಯಾಗಿ ಋತ್ವಿಜರಿಂದ 25 ಕಲಶಾಭಿಷೇಕ,12 ತೆಂಗಿನಕಾಯಿ ಗಣಹೋಮ,ನವಗ್ರಹ ಶಾಂತಿ,ದುರ್ಗಾ ನಮಸಕಾರ ಪೂಜೆ,ಮೃತ್ಯುಂಜಯ ಹೋಮ ಇತ್ಯಾದಿ ಧಾರ್ಮಿಕ ವಿಧಿಗಳು ನಡೆಯಿತು.

ಈ ಸಂದರ್ಭ ದೇವಳದ ತಂತ್ರಿ ವೇದಮೂರ್ತಿ ರಾಧಾಕೃಷ್ಣ ತಂತ್ರಿ,ಅರ್ಚಕರಾದ ವೇದಮೂರ್ತಿ ರಾಮಚಂದ್ರ ಭಟ್,ವೇದಮೂರ್ತಿ ರಂಗಣ್ಣ ಭಟ್,ಪದ್ಮನಾಭ ಆಚಾರ್ಯ,ಶ್ರೀನಿವಾಸ ಆಚಾರ್ಯ,ಅನಂತರಾಜ್ ಭಟ್,ರಮೇಶ್ ಭಟ್,ಪದ್ಮನಾಭ ಭಟ್,ಹರಿದಾಸ್ ಭಟ್,ಲಕ್ಷ್ಮೀಶ ಭಟ್,ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ,ಮೊಕ್ತೇಸರರುಗಳಾದ ಶೇಷಗಿರಿ ರಾವ್,ರವಿಂದ್ರ ಕೋಟ್ಯಾನ್,ಸಂಜೀವ ಟಿ.,ಜಯಂತ್ ಪುತ್ರನ್,ಪಾಂಡುರಂಗ ಕರ್ಕೇರ,ಇಂದ್ರೇಶ್ ಸಾಲ್ಯಾನ್,ಸುರೇಶ್ ದೇವಾಡಿಗ ಮತ್ತು ಜಯಂತಿ ಆಚಾರ್ಯ,ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್,ಉಪಾಧ್ಯಕ್ಷ ಸುಧಾಕರ ಕರ್ಕೇರ,ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ,ತಾಪಂ ಸದಸ್ಯೆ ರೇಣುಕಾ ಪುತ್ರನ್,ಬಿಲ್ಲವರ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್,ಹಿರಿಯರಾದ ನಾರಾಯಣ ಮೆಂಡನ್,ಲೋಕನಾಥ ಗುರಿಕಾರ,ಗುರುವಪ್ಪ ಕೋಟ್ಯಾನ್,ಕೃಷ್ಣಪ್ಪ ಗುರಿಕಾರ,ಎಚ್.ರವಿ ಕುಂದರ್,ಪ್ರಾಣೇಶ್ ಹೆಜ್ಮಾಡಿ,ಪ್ರಬೋದ್‍ಚಂದ್ರ ಹೆಜ್ಮಾಡಿ,ಸಚಿನ್ ನಾಯಕ್,ರವಿ ಶೆಟ್ಟಿ,ಸಂಜೀವ ಶೆಟ್ಟಿ,ಮಾಧವ ಸನಿಲ್,ದೊಂಬ ಪೂಜಾರಿ,ಏಕನಾಥ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.