ಹೆಜಮಾಡಿ ಮಾರುತಿ ಕ್ರಿಕೆಟರ್ಸ್‍ಗೆ ಶ್ರೀರಾಮ್ ಟ್ರೋಫಿ-2019

ಪಡುಬಿದ್ರಿ: ಪಡುಬಿದ್ರಿ ಸಮೀಪದ ಎರ್ಮಾಳು ತೆಂಕ ಶ್ರೀರಾಮ್ ಕ್ರಿಕೆಟರ್ಸ್ ವತಿಯಿಂದ ಎರ್ಮಾಳು ತೆಂಕ ಶಾಲಾ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಮಾರುತಿ ಕ್ರಿಕೆಟರ್ಸ್ ಹೆಜಮಾಡಿ ತಂಡವು ಉಡುಪಿಯ ಪ್ರಕೃತಿ ವೀರ ಕೇಸರಿ ತಂಡನ್ನು ಸೋಲಿಸಿ ಪ್ರಶಸ್ತಿ ಪಡೆಯಿತು.

ವಿಜೇತ ಹೆಜಮಾಡಿ ಮಾರುತಿ ಕ್ರಿಕೆಟರ್ಸ್ ತಂಡವು ಶ್ರೀರಾಮ್ ಟ್ರೋಫಿ-2019 ಸಹಿತ ನಗದು ರೂ.22,222/ ಹಾಗೂ ಉಡುಪಿಯ ಪ್ರಕೃತಿ ವೀರ ಕೇಸರಿಯು ದ್ವಿತೀಯ ಟ್ರೋಫಿಯೊಂದಿಗೆ ನಗದು ರೂ.11,111/ ಪಡೆಯಿತು.

ಬಹುಮಾನ ವಿತರಣಾ ಸಮಾರಂಭದಲ್ಲಿ ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪತ್ರಕರ್ತ ಸುರೇಶ್ ಎರ್ಮಾಳು ಮತ್ತಿತರರು ಉಪಸ್ಥಿತರಿದ್ದರು.