ಹೆಜಮಾಡಿ ಬೀಚ್ ಮೊಗವೀರ ಕ್ರೀಡೋತ್ಸವ ಸಮಾರೋಪ

ಪಡುಬಿದ್ರಿ: ಸಂಘಟನೆ ಮೂಲಕ ಅಸಾಧ್ಯವಾದುದನ್ನೂ ಸಾಧಿಸಬಹುದು. ಸಮುದಾಯವನ್ನು ಒಗ್ಗೂಡಿಸುವ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಲು ಇಂತಹ ಕ್ರೀಡೋತ್ಸವಗಳು ಸಹಕಾರಿ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.

ಹೆಜಮಾಡಿ ಬೀಚ್ ಫ್ರೆಂಡ್ಸ್ ಆಶ್ರಯದಲ್ಲಿ ಹೆಜಮಾಡಿ ಅಮವಾಸ್ಯೆ ಕರಿಯ ಬಳಿಯ ಶ್ರೀ ಶನೀಶ್ವರ ಭಜನಾ ಮಂಡಳಿ ಬಳಿ ಸಮುದ್ರ ಕಿನಾರೆಯಲ್ಲಿ ನಡೆದ ಮೊಗವೀರ ಕ್ರೀಡೋತ್ಸವದ ಸಮಾರೋಪ ಸಮಾರಮಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಮಲ್ಪೆ ಮತ್ಸ್ಯೋದ್ಯಮಿ ಸಾಧು ಸಾಲ್ಯಾನ್, ದಕ-ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿಯ ಸಿಇಒ ಯತೀಶ್ ಬೈಕಂಪಾಡಿ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ುಡುಪಿ ಸರಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನ ಉಪನ್ಯಾಸಕ ವಿ.ಕೆ.ಯಾದವ್, ಶ್ರೀ ಶನೀಶ್ವರ ಭಜನಾ ಮಂಡಳಿಯ ಸಂಚಾಲಕ ಲೋಕನಾಥ ಗುರಿಕಾರ, ಬೀಚ್ ಫ್ರೆಂಡ್ಸ್ ಗೌರವಾಧ್ಯಕ್ಷ ಯಾದವ ಕೋಟ್ಯಾನ್ ಆಚೆಮಟ್ಟು, ಅಧ್ಯಕ್ಷ ಅಕ್ಷಯ್ ಕೋಟ್ಯಾನ್, ಮೊಗವೀರ ಕ್ರೀಡೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಕಾಂತ್ ಶ್ರೀಯಾನ್, ಭರತ್ ಎರ್ಮಾಳ್ ಮುಖ್ಯ ಅತಿಥಿಗಳಾಗಿದ್ದರು.

ಫಲಿತಾಂಶ: ಹಗ್ಗ ಜಗ್ಗಾಟ(ಪುರುಷರು): ಪ್ರಥಮ-ಆಚೆಮಟ್ಟು ಮೊಗವೀರ ಸಭಾ, ದ್ವಿತೀಯ-ಚರಂತಿಪೇಟೆ ಮೊಗವೀರ ಸಭಾ, ಹಗ್ಗ ಜಗ್ಗಾಟ(ಮಹಿಳೆಯರು):ಪ್ರಥಮ-ಗುಂಡಿ ಮೊಗವೀರ ಸಭಾ, ದ್ವಿತೀಯ-ಪಲಿಮಾರು ಮೊಗವೀರ ಸಭಾ, ವಾಲಿಬಾಲ್:ಪ್ರಥಮ-ಹೆಜಮಾಡಿ ಮೊಗವೀರ ಸಭಾ, ದ್ವಿತೀಯ-ಕಣ್ಣಂಗಾರ್ ಮೊಗವೀರ ಸಭಾ, ತ್ರೋಬಾಲ್: ಪ್ರಥಮ- ಮಟ್ಟಪಟ್ಣ ಮೊಗವೀರ ಸಭಾ, ದ್ವಿತೀಯ-ಕಣ್ಣಂಗಾರ್ ಮೊಗವೀರ ಸಭಾ,ಬುಟ್ಟಿ ಓಟ: ಪ್ರಥಮ- ಶಶಿಕಲಾ ಗುಂಡಿ, ದ್ವಿತೀಯ-ದಿವ್ಯಾ ಬಪ್ಪನಾಡು, ಚಿತ್ರಕಲೆ(1-4):ಪ್ರಥಮ-ಮಾನ್ಯ ಜಿ.ಪುತ್ರನ್ ಮಟ್ಟು, ದ್ವಿತೀಯ-ಯಾಶಿಕಾ ಹೆಜಮಾಡಿ, ತೃತೀಯ-ಧನುಷ್ ಆಚೆಮಟ್ಟು, 5-7: ಲಿಶಾ ಯು.ಸಾಲ್ಯಾನ್ ಆಚೆಮಟ್ಟು, ದ್ವಿತೀಯ-ಪ್ರಥಮ್ ಸುವರ್ಣ ಚರಂತಿಪೇಟೆ, ತೃತೀಯ-ಆದ್ಯ ಪಿ.ಕೋಟ್ಯಾನ್ ಕಣ್ಣಂಗಾರ್, 8-10: ಪ್ರಥಮ-ಚಿರಾಗ್ ಜೆ.ಕೋಟ್ಯಾನ್ ಪಲಿಮಾರು, ದ್ವಿತೀಯ-ಚಿರಾಗ್ ವಿ.ಶ್ರೀಯಾನ್ ಪಲಿಮಾರು, ತೃತೀಯ-ಪ್ರಣಿಶಾ ಆಚೆಮಟ್ಟು.