ಹೆಜಮಾಡಿ ದೇವಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಜಯಂತ್ ಶೆಟ್ಟಿ ಪಠೇಲರ ಮನೆ ಅವಿರೋಧ ಆಯ್ಕೆ

ಪಡುಬಿದ್ರಿ: ಹೆಜಮಾಡಿಯ ಶ್ರೀ ಮಹಾಲಿಂಗೇಶ್ವರ ದೇವಳವನ್ನು ಪುನರುಜ್ಜೀವನಗೊಳಿಸುವ ಮಹತ್ವದ ಅಂಗವಾಗಿ ಶ್ರೀ ದೇವಳದಲ್ಲಿ ಕರೆದ ಗ್ರಾಮ ಸಭೆಯಲ್ಲಿ ಪುಣೆ ಹೋಟೆಲ್ ಉದ್ಯಮಿ ಮೂಲತಃ ಹೆಜಮಾಡಿ ಪಠೇಲರ ಮನೆಯ ಜಯಂತ್ ಶೆಟ್ಟಿ ಅವಿರೋಧ ಆಯ್ಕೆಯಾಗಿದ್ದಾರೆ.

ದೇವಳದ ಆಡಳಿತ ಮೊಕ್ತೇಸರ ದಯಾನಂದ್ ಹೆಜಮಾಡಿ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ನಡೆದ ಗ್ರಾಮ ಸಭೆಯಲ್ಲಿ ಜಯಂತ್ ಶೆಟ್ಟಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

2021ರ ದೇವಳದ ಜಾತ್ರಾ ಮಹೋತ್ಸವಕ್ಕೆ ಮುನ್ನ ದೇವಳವನ್ನು ಜೀರ್ಣೋದ್ಧಾರಗೊಳಿಸಲು ಸಮಿತಿ ನಿರ್ಧರಿಸಿದ್ದು, ಅದಕ್ಕೆ ಮುನ್ನ ಸ್ಥಳೀಯ ಕೂಡುಕಟ್ಟುಗಳಿಂದ ಸಮಿತಿಗೆ ಸದಸ್ಯರ ಪಟ್ಟಯನ್ನು ಆಯಾ ಗ್ರಾಮ ಸಮಿತಿಯವರೇ ಒದಗಿಸುವಂತೆ ಸೂಚಿಸಲಾಗಿದ್ದು, ಅದೇ ಆಧಾರದಲ್ಲಿ ಸಮಿತಿಗೆ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೂತನ ಸಮಿತಿಯ ವಿವಿರ ಗೌರವಾಧ್ಯಕ್ಷರುಗಳು: ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಲಾಲಾಜಿ ಆರ್.ಮೆಂಡನ್. ಅಧ್ಯಕ್ಷ: ಜಯಂತ್ ಶೆಟ್ಟಿ ಪಠೇಲರಮನೆ, ಉಪಾಧ್ಯಕ್ಷರುಗಳು: ಸುಧಾಕರ ಕರ್ಕೇರ, ರಘುಪತಿ ರಾವ್ ಕೊಂಡೆಟ್ಟು, ಲೋಕೇಶ್ ಅಮೀನ್, ಹರೀಶ್ ದೇವಾಡಿಗ, ಅರುಣ್ ಶೆಟ್ಟಿ ಗುತ್ತಿನಾರ್ ಪಡುಮನೆ, ರಾಜೇಶ್ ಆಚಾರ್ಯ, ಜಿನರಾಜ ಬಂಗೇರ. ಗೌರವ ಪ್ರಧಾನ ಕಾರ್ಯದರ್ಶಿ: ದಿವಾಕರ ಹೆಜ್ಮಾಡಿ, ಜತೆ ಕಾರ್ಯದರ್ಶಿಗಳು: ನಿತಿನ್ ಕುಮಾರ್ ಹೆಜಮಾಡಿ ಕೋಡಿ, ಶರಣ್ ಕುಮಾರ್ ಮಟ್ಟು, ಪರಮೇಶ್ವರ್ ಹೆಜಮಾಡಿ, ಶ್ರೀನಿವಾಸ್.
ಕೋಶಾಧಿಕಾರಿ: ರಮೇಶ್ ಭಟ್ ಹೆಜಮಾಡಿ, ಜತೆ ಕೋಶಾಧಿಕಾರಿ: ಪ್ರಭೋದ್‍ಚಂದ್ರ ಹೆಜ್ಮಾಡಿ. ಸಂಘಟನಾ ಕಾರ್ಯದರ್ಶಿ: ಎಚ್.ರವಿ ಕುಂದರ್, ಜತೆ ಸಂಘಟನಾ ಕಾರ್ಯದರ್ಶಿಗಳು: ಸಂದೇಶ್ ಶೆಟ್ಟಿ ಹೆಜಮಾಡಿ, ಸುಧೀರ್ ಕರ್ಕೇರ ಹೆಜಮಾಡಿ. ಮಹಿಳಾ ಸಂಘಟನಾ ಕಾರ್ಯದರ್ಶಿ: ವಿಶಾಲಾಕ್ಷಿ ಉಮೇಶ್ ಪುತ್ರನ್. ಮಹಿಳಾ ಜತೆ ಸಂಘಟನಾ ಕಾರ್ಯದರ್ಶಿ: ತಾರಾವತಿ. ಗೌರವ ಸಲಹೆಗಾರರು: ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್‍ಬೆಟ್ಟು, ವಿನಯಕುಮಾರ್ ಸೊರಕೆ, ದಾಮೋದರ ಬಂಗೇರ, ವಾಸುದೇವ ಆಚಾರ್ಯ, ಗುರುವಪ್ಪ ಕೋಟ್ಯಾನ್, ನಾರಾಯಣ ಮೆಂಡನ್, ಸದಾಶಿವ ಕೋಟ್ಯಾನ್, ಭಾಸ್ಕರ್ ಪುತ್ರನ್ ಮಾನಂಪಾಡಿ, ಉಮೇಶ್ ಕೋಟ್ಯಾನ್ ನಡಿಕುದ್ರು, ಪ್ರಭಾಕರ ಪೂಜಾರಿ, ಶಶಿಕಾಂತ್ ಪಡುಬಿದ್ರಿ, ಸುರೇಶ್ ಶೆಣೈ, ಪ್ರಕಾಶ್ ಶೆಟ್ಟಿ ಹೆಜ್ಮಾಡಿ, ರೇಣುಕಾ ಪುತ್ರನ್, ಕುಮಾರಸ್ವಾಮಿ ಶೆಣೈ.

ಈ ಸಂದರ್ಭ ಮಾತನಾಡಿದ ಜಯಂತ್ ಶೆಟ್ಟಿಯವರು ಗ್ರಾಮಸ್ಥರ ನಿರ್ಧಾರದಂತೆ ಶ್ರೀ ದೇವಳದ ಜೀರ್ಣೋದ್ಧಾರಕ್ಕೆ ಕಾಯಾ ವಾಚಾ ಕಾರ್ಯನಿರ್ವಹಿಸುವ ಭರವಸೆ ನೀಡಿದರಲ್ಲದೆ ಈ ಬಗ್ಗೆ ತಾನು ಮತ್ತು ಕುಟುಂಬದ ವತಿಯಿಂದ ಸಾಕಷ್ಟು ಅನುದಾನ ಒದಗಿಸುವ ಭರವಸೆ ನೀಡಿದರು.

ಸಭೆಯಲ್ಲೇ ಸುಮಾರು 2 ಕೋಟಿ. ರೂ ಭರವಸೆ: ದೇವಳದ ಅರ್ಚಕ ರಾಮಚಂದ್ರ ಭಟ್ ಆರಂಭಿಕವಾಗಿ ಪುನರ್ ನಿರ್ಮಾಣ ಕಾರ್ಯಕ್ಕೆ ತಮ್ಮ ಕುಟುಂಬದ ವತಿಯಿಂದ 15 ಲಕ್ಷ ರೂ. ನೀಡುವ ಭರವಸೆ ನೀಡಿದ ಬಳಿಕ ಗ್ರಾಮದ ಬ್ರಾಹ್ಮಣ ಸಮಾಜದ ವತಿಯಿಂದ 30 ಲಕ್ಷಕ್ಕೂ ಅಧಿಕದ ಭರವಸೆ ದೊರೆಯಿತು. ಬಳಿಕ ಅನೇಕರು ತಮ್ಮ ವತಿಯಿಂದ ನೀಡುವ ಅನುದಾನಗಳನ್ನು ಘೋಷಿಸಿದ ಸಂದರ್ಭ ಸಭೆಯಲ್ಲಿಯೇ ಸುಮಾರು 2 ಕೋಟಿ ರೂ. ನೀಡುವ ಭರವಸೆ ದೊರೆಯಿತು.ದೇವಳವನ್ನು ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಿಸಲು ಉದ್ದೇಶಿಸಲಾಯಿತು.

ಈ ಸಂದರ್ಭ ನೂತನ ಜೀರ್ಣೋದ್ಧಾರ ಸಮಿತಿ,ಆಡಳಿತ ಸಮಿತಿ ಮತ್ತು ಗ್ರಾಮಸ್ಥರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭ ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಖಾತೆಯನ್ನು ಆರಂಭಿಸಲು ನಿರ್ಧರಿಸಲಾಯಿತು.
ದೇವಳದ ಆಡಳಿತ ಮಂಡಳಿಯ ಮೊಕ್ತೇಸರರುಗಳಾದ ಎಚ್.ಶೇಷಗಿರಿ ರಾವ್, ಶಂಕರ್ ಶೆಟ್ಟಿ ಪಠೇಲರಮನೆ, ಸುರೇಶ್ ದೇವಾಡಿಗ, ರವೀಂದ್ರ ಕೋಟ್ಯಾನ್, ಪಾಂಡುರಂಗ ಕರ್ಕೇರ, ಜಯಂತ್ ಪುತ್ರನ್, ಸಂಜೀವ ಟಿ., ಹರೀಶ್ ಶೆಣೈ, ಗಣೇಶ್ ಆಚಾರ್ಯ, ಇಂದ್ರೇಶ್ ಟಿ.ಸಾಲ್ಯಾನ್, ಜಯಂತಿ ಶೇಖರ್ ಆಚಾರ್ಯ, ಅರ್ಚಕರಾದ ರಾಮಚಂದ್ರ ಭಟ್, ರಂಗನ್ ಭಟ್, ಪದ್ಮನಾಭ ಭಟ್, ಶ್ರೀನಿವಾಸ ಆಚಾರ್ಯ, ಲಕ್ಷ್ಮೀಶ ಭಟ್, ಕೃಷ್ಣ ಭಟ್, ಶ್ರೀನಿವಾಸ ಭಟ್ ಹಾಗೂ ಶಿವನಾಥ್ ಪುತ್ರನ್ ಉಪಸ್ಥಿತರಿದ್ದರು