ಹೆಜಮಾಡಿ ಟೋಲ್ ವಿರುದ್ಧ ಕರವೇ ವತಿಯಿಂದ ಪಡುಬಿದ್ರಿಯಲ್ಲಿ ಅನಿರ್ಧಿಷ್ಟಾವಧಿ ಧರಣಿ

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಹಾಗೂ ಹೆದ್ದಾರಿಯ ಅಲ್ಲಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಿರುವ ನವಯುಗ ಕಂಪೆನಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ)ನೇತೃತ್ವದಲ್ಲಿ ಪಡುಬಿದ್ರಿಯ ಟೆಂಪೆÇೀ ನಿಲ್ದಾಣದ ಬಳಿ ಅನಿರ್ದಿಷ್ಠಾವಧಿ ಪ್ರತಿಭಟನೆ ಸೋಮವಾರ ಆರಂಭಗೊಂಡಿದೆ.

ನವಯುಗ್ ಕಂಪನಿಯು ಕಾಮಗಾರಿ ಪೂರ್ಣಗೊಳಿಸದೆ ಸುಂಕ ವಸೂಲಾತಿ ಆರಂಭಿಸಿರುವುದು ಸಕ್ರಮವಲ್ಲ.ಕಂಪನಿಯು ಜಿಲ್ಲಾಡಳಿತ ಮತ್ತು ಪೋಲೀಸ್ ಬಲ ಬಳಸಿಕೊಂಡು ಬಲವಂತವಾಗಿ ಸುಂಕ ವಸೂಲಾತಿ ಮಾಡುತ್ತಿದೆ.ಈ ಬಗ್ಗೆ ಹಲವು ಸಂಘಟನೆಗಳು ಹಲವು ಬಾರಿ ಹೋರಾಟ,ಪ್ರತಿಭಟನೆ ನಡೆಸಿದರೂ ನವಯುಗ್ ತಾನು ಮಾಡಿದ್ದೇ ಸರಿ ಎಂಬಂತೆ ವರ್ತಿಸುತ್ತಿದೆ.ಈ ಹಿನ್ನೆಲೆಯಲ್ಲಿ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನ್ಯಾಯ ಸಿಗುವವರೆಗೆ ಅನಿರ್ಧಿಷ್ಟಾವಧಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಹೇಳದ್ದಾರೆ.
ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಪಂಚಾಯಿತಿಗಳ ವಾಹನಗಳಿಗೆ ಉಚಿತ ಸಂಚಾರಕ್ಕೆ ತಕ್ಷಣದಿಂದಲೇ ಅನುವು ಮಾಡಿಕೊಡಬೇಕು. ಉಡುಪಿ ಜಿಲ್ಲೆ ನೊಂದಾವಣೆ ವಾಹನಗಳಿಗೆ ಉಚಿತ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಒಂದು ತಿಂಗಳೊಳಗೆ ತೀರ್ಮಾನವಾಗಬೇಕು. ಪಡುಬಿದ್ರಿ ಕಲ್ಸಂಕದಿಂದ ಮೂಲ್ಕಿಯವರೆಗೆ ಸರ್ವೀಸ್ ರಸ್ತೆಯ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು. ಪಡುಬಿದ್ರಿಯಲ್ಲಿ ಕೂಡಲೇ ಬಸ್ಸು ನಿಲ್ದಾಣ ನಿರ್ಮಿಸಬೇಕು. ಟೆಂಪೆÇೀ ನಿಲ್ದಾಣದ ಬಳಿ ಪ್ರತ್ಯೇಕ ಬಸ್ಸು ನಿಲ್ದಾಣ ನಿರ್ಮಿಸಿ ಹೆದ್ದಾರಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬ ಬೇಡಿಕೆಗಳನ್ನು ಕೂಡಲೇ ಈಡೇರಿಸಿ ಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ ಧರಣಿ ಆರಂಭಿಸಿದ್ದಾರೆ.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್, ರಾಜ್ಯ ಸಂಚಾಲಕ ಪ್ರಸನ್ನ ಕುಮಾರ್ ಶೆಟ್ಟ ಹೆಬ್ರಿ, ದಸಂಸ ಮುಖಂಡ ಲೋಕೇಶ್ ಕಂಚಿನಡ್ಕ, ಗ್ರಾಮ ಪಂಚಾಯಿತಿ ಸದಸ್ಯ ಹಸನ್ ಬಾವ, ಕರವೇ ತಾಲೂಕು ಅಧ್ಯಕ್ಷ ನಿಝಾಮ್ ಅಹಮದ್, ಉಡುಪಿ ಜಿಲ್ಲಾ ಉಪಾಧ್ಯಕ್ಷ ಆಸೀಫ್ ಆಪತ್ಬಾಂಧವ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಉಮೇಶ್ ಜೋಗಿ, ಪಡುಬಿದ್ರಿ ಘಟಕದ ಅಧ್ಯಕ್ಷ ಜುನೈದ್, ಉಡುಪಿ ತಾಲೂಕು ಅಧ್ಯಕ್ಷ ಸುೀರ್ ಪೂಜಾರಿ, ಫಿರೋಝ್ ಕಂಚಿನಡ್ಕ, ಹೆಜಮಾಡಿ ಘಟಕದ ಅಧ್ಯಕ್ಷ ಅಬ್ದುಲ್ ಹಮೀದ್, ಸುಲೈಮಾನ್ ಕಂಚಿನಡ್ಕ ಮತ್ತಿತರರು ಭಾಗವಹಿಸಿದ್ದರು.