ಹೆಜಮಾಡಿ ಟೋಲ್‍ನಲ್ಲಿ ಮೂಲ್ಕಿ ನಾಗರಿಕರಿಗೆ ಟೋಲ್ ವಿನಾಯಿತಿಗೆ ಆಗ್ರಹ:ನೂತನ ಸಮಿತಿ ರಚನೆ

ಹೆಜಮಾಡಿ ಟೋಲ್‍ನಲ್ಲಿ ಮೂಲ್ಕಿ ನಾಗರಿಕರಿಗೆ ಟೋಲ್ ವಿನಾಯಿತಿಗೆ ಆಗ್ರಹ:ನೂತನ ಸಮಿತಿ ರಚನೆ
– ಅಧ್ಯಕ್ಷರಾಗಿ ಹರೀಶ್ ಎನ್.ಪುತ್ರನ್ ಆಯ್ಕೆ

ಮೂಲ್ಕಿ: ಹೆಜಮಾಡಿಯಲ್ಲಿರುವ ನವಯುಗ್ ಟೋಲ್ ಪ್ಲಾಝಾದಲ್ಲಿ ಒಂದು ಕಿಮೀ ಹತ್ತಿರದ ಮೂಲ್ಕಿಯ ವಾಹನ ಬಳಕೆದಾರರಿಗೆ ಸಂಪೂರ್ಣ ಟೋಲ್ ವಿನಾಯಿತಿಗಾಗಿ ನಿರ್ಣಾಯಕ ಹೋರಾಟ ನಡೆಸಲು ಮೂಲ್ಕಿ ಅಭಿವೃದ್ಧಿ ನಾಗರಿಕರ ಸಮಿತಿಯನ್ನು ರಚಿಸಲಾಗಿದೆ.

ಬಪ್ಪನಾಡು ದೇವಳದ ಅನ್ನಪೂರ್ಣೇಶ್ವರೀ ಸಭಾಂಗಣದಲ್ಲಿ ಕರೆದ ಮೂಲ್ಕಿ ನಾಗರಿಕರ ಸಭೆಯಲ್ಲಿ ನೂತನ ಸಮಿತಿಗೆ ಅನುಮೋದನೆ ನೀಡಲಾಗಿದ್ದು,ಹಿರಿಯರ ಮಾರ್ಗದರ್ಶನದಲ್ಲಿ ಉದ್ಯಮಿ ಹರೀಶ್ ಎನ್. ಪುತ್ರನ್‍ರನ್ನು ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಸಮಿತಿಯ ಗೌರವಾಧ್ಯಕ್ಷರಾಗಿ ಹರಿಕೃಷ್ಣ ಪುನರೂರು,ಗೌರವ ಸಲಹೆಗಾರರಾಗಿ ದುಗ್ಗಣ್ಣ ಸಾವಂತರು,ಎನ್.ಎಸ್.ಮನೋಹರ ಶೆಟ್ಟಿ,ಎಮ್.ಎಚ್.ಅರವಿಂದ ಪೂಂಜಾ,ಸಂಸದರು,ಶಾಸಕರು,ಮಾಜಿ ಶಾಸಕರುಗಳನ್ನು ಆಯ್ಕೆ ಮಾಡಲಾಗಿದ್ದು,ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿಯವರನ್ನು ಆರಿಸಲಾಗಿದೆ.

ಉಳಿದಂತೆ ಮೂಲ್ಕಿ ನಪಂ ಅಧ್ಯಕ್ಷ ಸುನಿಲ್ ಆಳ್ವ ಸಹಿತ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು,ವಿವಿಧ ಪಕ್ಷಗಳ ಅಧ್ಯಕ್ಷರು,ವಿವಿಧ ಸಮಾಜದ ಮುಖ್ಯಸ್ಥರುಗಳನ್ನು ಉಪಾಧ್ಯಕ್ಷರನ್ನಾಗಿ,ಹಾಗೂ 100 ಕ್ಕೂ ಅಧಿಕ ಮಂದಿಯನ್ನು ಸಮಿತಿಯ ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಯಿತು.

ಈ ಸಂದರ್ಭ ಹೋರಾಟಗಾರ ವಕೀಲ ದೀನೇಶ್ ಹೆಗ್ಡೆ ಉಳೆಪಾಡಿ ಮಾತನಾಡಿ ಮೂಲ್ಕಿಗೆ ಪ್ರತಿಯೊಂದು ಸವಲತ್ತುಗಳಲ್ಲೂ ಅನ್ಯಾಯವಾಗಿದ್ದು ಟೋಲ್ ಎನ್ನುವುದು ದೊಡ್ಡ ಭೃಷ್ಟಾಚಾರ ಸಂಸ್ಥೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಅರೆಬರೆ ನಡೆಸಿ ಅನೇಕ ಅಪಘಾತಗಳಾಗಿ ಅಮಾಯಕರ ಪ್ರಾಣಕ್ಕೆ ಕಾರಣವಾಗಿ ಅಕ್ರಮ ಟೋಲ್ ವಸೂಲಿ ಮಾಡುತ್ತಿರುವ ಟೋಲ್ ಸಂಸ್ಥೆ ವಿರುದ್ದ ಮೂಲ್ಕಿ ನಾಗರಿಕರು ಸ್ವಯಂ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮೂಲ್ಕಿ ಅಭಿವೃದ್ಧಿ ನಾಗರಿಕ ಹೋರಾಟ ಸಮಿತಿಯ ನೂತನ ಅಧ್ಯಕ್ಷ ಹರೀಶ್ ಎನ್.ಪುತ್ರನ್ ಮಾತನಾಡಿ,ಅರ್ಧ ಕಿಮೀ ದೂರವಿರುವ ಮೂಲ್ಕಿ ನಾಗರಿಕರಿಗೆ ಹೆಜಮಾಡಿಯ ಟೋಲ್‍ನಲ್ಲಿ ಟೋಲ್ ವಿನಾಯಿತಿ ನೀಡಲೇಬೇಕು.ಈಬಗ್ಗೆ ನವಯುಗ್ ಕಂಪನಿಯವರನ್ನು ಸಂಪರ್ಕಿಸಿದ್ದು,ಸೂಕ್ತ ಪ್ರತಿಕ್ರಿಯೆ ದೊರಕಿಲ್ಲ.ಸಮಿತಿಯ ವತಿಯಿಂದ ಶೀಘ್ರದಲ್ಲಿ ಹೆಜಮಾಡಿ ಟೋಲ್‍ಗೆ ಮುತ್ತಿಗೆ ಸಹಿತ ಪರಿಣಾಮಕಾರಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ.ಸಮಿತಿಯು ಟೋಲ್ ವಿಷಯದಲ್ಲಿ ಪ್ರಾರಂಭಗೊಂಡಿದ್ದರೂ,ಮೂಲ್ಕಿಯ ಸಮಗ್ರ ಅಭಿವೃದ್ಧಿಗೆ ಪಕ್ಷಬೇಧ ಮರೆತು ಕಾರ್ಯನಿರ್ವಹಿಸಲಿದೆ.ಇದಕ್ಕೆ ಎಲ್ಲರ ಸಹಕಾರ ಬೇಕಾಗಿದೆ ಎಂದರು.
ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಮಧು ಆಚಾರ್ಯ,ರಂಗನಾಥ ಶೆಟ್ಟಿ,ನಾರಾಯಣ ಎಮ್.,ಸದಾಶಿವ ಹೊಸದುರ್ಗ,ಬಾಲಚಂದ್ರ ಸನಿಲ್,ಅಬ್ದುಲ್ ರಜಾಕ್,ಧನಂಜಯ ಕೋಟ್ಯಾನ್ ಮಟ್ಟು,ಹರ್ಷರಾಜ್ ಶೆಟ್ಟಿ,ಕಿಶೋರ್ ಶೆಟ್ಟಿ ಬಪ್ಪನಾಡು,ವೆಂಕಟೇಶ ಹೆಬ್ಬಾರ್,ಸಾಧು ಅಂಚನ್ ಮಟ್ಟು,ಶಶೀಂದ್ರ ಅಮೀನ್,ರವೀಶ್ ಕಾಮತ್,ಸುರೇಶ್ ಬಂಗೇರ,ಮಹೀಮ್ ಹೆಗ್ಡೆ,ಉದಯ ಶೆಟ್ಟಿ,ಭಾಸ್ಕರ ಶೆಟ್ಟಿಗಾರ್,ಸುಧೀರ್ ಆಚಾರ್ಯ,ನರೇಂದ್ರ ಅಮೀನ್,ಶಿವಣ್ಣ ಶೆಟ್ಟಿ,ಸುರೇಶ್ ಶೆಟ್ಟಿ,ಯಾದವ ಕೋಟ್ಯಾನ್,ಯೋಗೀಶ್ ಕೋಟ್ಯಾನ್,ಪ್ರಬೋದ್ ಕುಡ್ವ,ಚಂದ್ರಹಾಸ ಶೆಟ್ಟಿ,ಸುಶೀಲ್ ಬಂಗೇರ,ದಯಾನಂದ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.