ಹೆಜಮಾಡಿ: ಜಿಲ್ಲಾ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ

ಪಡುಬಿದ್ರಿ: ಉಡುಪಿ ಜಿಲ್ಲೆಯಲ್ಲಿ ಮುಂದಿನ 14 ದಿನಗಳವರೆಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ವಾಹನಗಳಿಗೆ ಪ್ರವೇಶ ನಿರ್ಬಂಧಗೊಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆÉ ಪ್ರವೇಶಿಸುವ ಹೆಜಮಾಡಿ ಗಡಿಯಲ್ಲಿ ಪೊಲೀಸರು ಗುರುವಾರ ಕಟ್ಟುನಿಟ್ಟಿನ ತಪಾಸಣೆ ನಡೆಸಿ ಅನಗತ್ಯ ಸಂಚರಿಸುವ ವಾಹನಗಳನ್ನು ಹಿಂದಕ್ಕೆ ಕಳುಹಿಸಿದರು.

ಬುಧವಾರ ರಾತ್ರಿಯಿಂದಲೇ ಇತರ ಜಿಲ್ಲೆಗಳಿಂದ ಪ್ರವೇಶಿಸುವ ವಾಹನಗಳ ತಪಾಸಣೆ ಆರಂಭಿಸಿದ್ದು, ಅನ್ಯ ಜಿಲ್ಲೆಗಳಿಂದ ಉಡುಪಿ ಜಿಲ್ಲೆಗೆ ಆಗಮಿಸುವವರ ವಿವರ ದಾಖಲಿಸುವ ಪ್ರಕ್ರಿಯೆ ನಡೆಸಿದ್ದಾರೆ. ಅತ್ತ ದಕ್ಷಿಣ ಕನ್ನಡ ಜಿಲ್ಲೆಯನ್ನು ಒಂದು ವಾರಗಳ ಕಾಲ ಲಾಕ್‍ಡೌನ್ ಮಾಡಿರುವ ಪರಿಣಾಮ ವಾಹನಗಳ ಸಂಚಾರವು ಕಡಿಮೆಯಿದ್ದು, ದೈನಂದಿನ ಕಚೇರಿ ಕೆಲಸ ಸೇರಿದಂತೆ ತುರ್ತು ಕೆಲಸಗಳಿಗೆ ತೆರಳುವ ವಾಹನಗಳು ಮಾತ್ರ ಸಂಚರಿದವು.
ಕಾಪು ಸಿಪಿಐ ಮಹೇಶ್‍ಪ್ರಸಾದ್ ಮತ್ತು ಪಡುಬಿದ್ರಿ ಪಿಎಸ್‍ಐ ದಿಲೀಪ್ ನೇತೃತ್ವದಲ್ಲಿ ಹೆಜಮಾಡಿ ಚೆಕ್‍ಪೋಸ್ಟ್‍ನಲ್ಲಿ ಕಟ್ಟುನಿಟ್ಟಿನ ಕ್ರಮ, ಕೈಗೊಳ್ಳಲಾಗಿದೆ.

ಫೋಟೋ: ಕ್ಯಾ: ಉಡುಪಿ ಜಿಲ್ಲೆ ಪ್ರವೇಶಿಸುವ ಹೆಜಮಾಡಿ ಗಡಿಯಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸಿದರು.