ಹೆಜಮಾಡಿ ಗಡಿಭಾಗ ಸೀಲ್‍ಡೌನ್‍ಗಾಗಿ ಸಿದ್ಧ

ಪಡುಬಿದ್ರಿ: ಉಡುಪಿ ಜಿಲ್ಲಾ ಗಡಿಭಾಗ ಹೆಜಮಾಡಿಯ ಚೆಕ್‍ಪೋಸ್ಟ್ ಸೀಲ್‍ಡೌನ್‍ಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ದಿನದ 24 ಗಂಟೆಗಳಲ್ಲೂ ಸಿಬಂದಿ ಸಹಿತವಾಗಿರುವ ಚೆಕ್‍ಪೆÇೀಸ್ಟ್ ಮೂಲಕ ಜಿಲ್ಲಾ ಗಡಿ ಪ್ರವೇಶಕ್ಕೆ ಇರುವ ನಿರ್ಬಂಧಗಳನ್ನು ಪಾಲಿಸಲು ನಿಗಾ ವಹಿಸಲಾಗುವುದೆಂದು ಕಾಪು ತಹಶೀಲ್ದಾರ್ ಮಹಮ್ಮದ್ ಐಸಾಕ್ ಬುಧವಾರ ತಿಳಿಸಿದರು.

ತುರ್ತು ಆರೋಗ್ಯ ಸಂಬಂಧ ಸಮಸ್ಯೆಗಾಗಿ ಜಿಲ್ಲೆಗೆ ಆಗಮಿಸುವ ಆ್ಯಂಬುಲೆನ್ಸ್‍ಗಳನ್ನು ಸೂಕ್ತ ದಾಖಲೆಗಳ ಪರಿಶೀಲನೆ ಬಳಿಕ ಒಳಬಿಡಲಾಗುವುದು. ಸರಕಾರಿ ಸ್ವಾಮ್ಯದ ಕಂಪೆನಿಗಳು, ಕೇಂದ್ರ ಸರಕಾರದ ಸ್ವಾಮ್ಯದ ಉದ್ದಿಮೆಗಳ ಯಾರಿಗೇ ಆಗಲಿ ಅವರ ಗುರುತು ಚೀಟಿಯನ್ನು ಪರಿಶೀಲಿಸಿ ಪ್ರವೇಶಕ್ಕೆ ಅನುಮತಿ ಇದೆ. ಮಿಕ್ಕಂತೆ ಯಾರಿಗೂ ಪ್ರವೇಶ ಇರುವುದಿಲಧೀ ಬಗ್ಗೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕಾಗಿ ತಹಶೀಲ್ದಾರ್ ಹೇಳಿದರು.\

ಈಗಾಗಲೇ ಹೆಜಮಾಡಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಪಲಿಮಾರು ಕರ್ನಿರೆ ರಸ್ತೆಯನ್ನೂ ಉಡುಪಿ ಜಿಲ್ಲೆಯ ಗಡಿಭಾಗಗಳ ಸೀಲ್‍ಡೌನ್ ಹಿನ್ನೆಲೆಯಲ್ಲಿ ಬ್ಯಾರಿಕೇಡ್‍ಗಳನ್ನು ಇರಿಸಿ ಬಂದ್ ಮಾಡಲಾಗಿದೆ.

ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಪಡುಬಿದ್ರಿ ಪಿಎಸ್‍ಐ ದಿಲೀಪ್, ಕಾಪು ಕಂದಾಯ ಪರಿವೀಕ್ಷಕ ರವಿಶಂಕರ್, ಹೆಜಮಾಡಿ ಗ್ರಾಮ ಲೆಕ್ಕಿಗ ಅರುಣ ಕುಮಾರ್ ಹೆಜಮಾಡಿ ಗಡಿಭಾಗದ ಸೀಲ್‍ಡೌನ್ ಕರ್ತವ್ಯದಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದು ಹೆಚ್ಚುವರಿ ಸಿಬಂದಿಗಳನ್ನು ನೇಮಿಸಿಕೊಳ್ಳಲಾಗಿದೆ. ಆರೋಗ್ಯ, ಕಂದಾಯ ಮತ್ತು ಪೋಲಿಸ್ ಇಲಾಖೆ ಜಂಟಿಯಾಗಿ ಚೆಕ್‍ಪೋಸ್ಟ್ ಸೇವೆಗೆ ಸಿದ್ಧಗೊಂಡಿದೆ.