ಹೆಜಮಾಡಿ ಕೋಡಿ ಶ್ರೀ ವಿಠೋಭ ಗೋಪಾಲಕೃಷ್ಣ ಮಂದಿರದ ಶಿಲಾನ್ಯಾಸ

ಪಡುಬಿದ್ರಿ: ಹೆಜಮಾಡಿ ಕೋಡಿ ಬಿಲ್ಲವರ ಶ್ರೀ ವಿಠೋಭ ಗೋಪಾಲಕೃಷ್ಣ ಭಜನಾ ಮಂದಿರದ ಶಿಲಾನ್ಯಾಸ ಸಮಾರಂಭವು ಮೇ 26 ಭಾನುವಾರ ನಡೆಯಲಿದೆ. ಬೆಳಿಗ್ಗೆ 10.30 ಗಂಟೆಗೆ ನಡೆಯುವ ಸಮಾರಂಭದಲ್ಲಿ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿಯ ಆಡಳಿತ ಮೊಕ್ತೇಸರ ಕಾಂತು ಲಕ್ಷ್ಮಣ ಗುರಿಕಾರ ಯಾನೆ ಯಾದವ ಜಿ.ಬಂಗೇರ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನಡೆಯಲಿದೆ.