ಹೆಜಮಾಡಿ ಕೋಡಿಕರೆ ಬಿಲ್ಲವರ ಸಮಿತಿ ವತಿಯಿಂದ ಸನ್ಮಾನ

ಪಡುಬಿದ್ರಿ ಸಮೀಪದ ಹೆಜಮಾಡಿ ಕೋಡಿಕರೆ ಬಿಲ್ಲವರ ಸಮಿತಿ ವತಿಯಿಂದ ಕಳೆದ ಶೈಕ್ಷಣಿಕ ವರ್ಷದಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಮಿತಿಯ ಅಧ್ಯಕ್ಷ ಸುಭಾಸ್ ಜಿ.ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಚಂದ್ರಾವತಿ ಹರೀಶ್, ಉಪೇಂದ್ರ ಅಮೀನ್, ಭಾಸ್ಕರ ಕೋಟ್ಯಾನ್, ಲೀಲೇಶ್ ಹೆಜಮಾಡಿ, ಶಿವರಾಮ ಜಿ.ಅಮೀನ್, ದಾಮೋದರ ಬಂಗೇರ, ಸಂಜೀವ ಕೋಟ್ಯಾನ್, ತೇಜಪಾಲ್ ಸುವರ್ಣ, ಪ್ರಬೋದ್‍ಚಂದ್ರ ಹೆಜಮಾಡಿ, ದೇವರಾಜ್ ಅಂಚನ್, ವಾಸು ಕೋಟ್ಯಾನ್ ಅಡ್ಕ ಉಪಸ್ಥಿತರಿದ್ದರು.