ಹೆಜಮಾಡಿ ಅಮವಾಸ್ಯೆ ಕರಿಯ ಬಳಿ ಭಾನುವಾರ ಎಳ್ಳಮವಾವಸ್ಯೆ ಅಂಗವಾಗಿ ಸಹಸ್ರಾರು ಭಕ್ತರು ಪವಿತ್ರ ಸಮುದ್ರ ಸ್ನಾನ

ಪಡುಬಿದ್ರಿ ಸಮೀಪದ ಹೆಜಮಾಡಿ ಅಮವಾಸ್ಯೆ ಕರಿಯ ಬಳಿ ಭಾನುವಾರ ಎಳ್ಳಮವಾವಸ್ಯೆ ಅಂಗವಾಗಿ ಸಹಸ್ರಾರು ಭಕ್ತರು ಪವಿತ್ರ ಸಮುದ್ರ ಸ್ನಾನಗೈದರು.ಮಧ್ಯರಾತ್ರಿಯಿಂದಲೇ ಕೊರೆಯುವ ಚಳಿಯಲ್ಲಿ ಸಮುದ್ರ ಸ್ನಾನಕ್ಕೆ ಆಗಮಿಸಿದ ಭಕ್ತರು ಭಾನುವಾರ ಸಂಜೆವರೆಗೂ ಆಗಮಿಸಿದರು.ದೂರದ ಕಾರ್ಕಳ,ಬೆಳ್ಮಣ್ಣು,ಮೂಡಬಿದಿರೆ,ಕಿನ್ನಿಗೋಳಿ,ಶಿರ್ವ ಕಡೆಗಳಿಂದಲೂ ಸಮುದ್ರ ಸ್ನಾನಕ್ಕಾಗಿ ಆಗಮಿಸಿದರು.ಇದೇ ಸಂದರ್ಭ ಕುಟುಂಬದಲ್ಲಿ ಗತಿಸಿದ ಹಿರಿಯರ ಮೋಕ್ಷ ಪ್ರಾಪ್ತಿಗಾಗಿ ಸಮುದ್ರ ಸ್ನಾನದೊಂದಿಗೆ ತಿಲಯಾಗ,ಪಿತೃ ತರ್ಪಣ,ಪಿಂಡ ಪ್ರದಾನ ಸಹಿತ ವಿವಿಧ ಧಾರ್ಮಿಕ ವಿಧಿಗಳನ್ನೂ ನಡೆಸಿದರು.