ಹೆಜಮಾಡಿಯ ಕರಾವಳಿ ಯುವಕ-ಯುವತಿ ವೃಂದಕ್ಕೆ ಸ್ವಚ್ಛತಾ ಸಲಕರಣೆ

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ವತಿಯಿಂದ ಸಂಸ್ಥೆಯ ಗ್ರಾಮೀಣ ಸ್ವಚ್ಛತೆಗೆ ಅದ್ಯತೆಯನ್ನು ನೀಡಿ ಸ್ವಚ್ಛ ಭಾರತದ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಹೆಜಮಾಡಿಯ ಕರಾವಳಿ ಯುವಕ-ಯುವತಿ ವೃಂದಕ್ಕೆ ಸ್ವಚ್ಛತಾ ಸಲಕರಣೆಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷ ವೈ. ಸುಧೀರ್‍ಕುಮಾರ್, ನಿರ್ದೇಶಕರಾದ ಗಿರೀಶ್ ಪಲಿಮಾರ್, ಶಿವರಾಮ ಎನ್. ಶೆಟ್ಟಿ, ರಾಜಾರಾಮ್ ರಾವ್, ಮಾಧವ ಆಚಾರ್ಯ ಮತ್ತು ವಾಸುದೇವ ದೇವಾಡಿಗ, ಡಿ.ಸಿ.ಸಿ ಬ್ಯಾಂಕ್ ನಿಯೋಜಿತ ಮೇಲ್ವಿಚಾರಕ ಬಾಲಕೃಷ್ಣ ರಾವ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಿಶ್ಮಿತಾ ಪಿ.ಎಚ್. ಕರಾವಳಿ ಯುವಕ-ಯುವತಿ ವೃಂದದ ಅಧ್ಯಕ್ಷ ಅಶೋಕ್ ವಿ.ಕೆ ಗೌರವ ಪ್ರಧಾನ ಕಾರ್ಯದರ್ಶಿ ಶರಣ್‍ಕುಮಾರ್ ಮಟ್ಟು ಹಾಗೂ ಸದಸ್ಯರು ಉಪಸ್ಥಿತರಿದ್ದರು.