ಹೆಜಮಾಡಿಯಲ್ಲಿ ಪಾನ್-ಆಧಾರ್ ಜೋಡಣಾ ಶಿಬಿರ

ಪಡುಬಿದ್ರಿ: ಹೆಜಮಾಡಿ ಬೀಚ್ ಫ್ರೆಂಡ್ಸ್ ವತಿಯಿಂದ ಹೆಜಮಾಡಿ ಶ್ರೀ ಶನೀಶ್ವರ ಮಂಡಳಿ ಬಳಿಯ ಕಡಲ ಕಿನಾರೆಯಲ್ಲಿ ಭಾನುವಾರ ಪಾನ್-ಆಧಾರ್ ಜೋಡಣಾ ಶಿಬಿರ ನಡೆಯಿತು.
ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಉಮೇಶ್ ಪುತ್ರನ್ ಮತ್ತು ಮೈಸೂರಿನ ಖ್ಯಾತ ವೈದ್ಯೆ ಡಾ.ಲೀಲಾ ಕೆ.ಪುತ್ರನ್ ಶಿಬಿರವನ್ನು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ವಿಶಾಲಾಕ್ಷಿ ಪುತ್ರನ್, ಸ್ಥಳೀಯಾಡಳಿತ ಮಾಡಬೇಕಾದ ಹಲವು ಕಾರ್ಯಗಳನ್ನು ನೂತನವಾಗಿ ಆರಂಭಗೊಂಡ ಬೀಚ್ ಫ್ರೆಂಡ್ಸ್ ನಡೆಸುತ್ತಿರುವುದು ಅನುಕರಣೀಯವಾದುದು. ಸಾರ್ವಜನಿಕರು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿದರು.

ಈ ಸಂದರ್ಭ ಪಾನ್-ಆಧಾರ್ ಅವಶ್ಯಕತೆಗಳ ಬಗ್ಗೆ ಲೆಕ್ಕಪರಿಶೋಧಕರಾದ ರವೀಂದ್ರ ಭಟ್ ಹೆಜ್ಮಾಡಿ ಸೂಕ್ತ ಮಾಹಿತಿ ನೀಡಿದರು.

ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್, ಕೇಶವ ಎಸ್.ಪುತ್ರನ್ ಮೈಸೂರು, ಜೇಸಿಐ ಪಡುಬಿದ್ರಿಯ ಪೂರ್ವಾಧ್ಯಕ್ಷ ಹರೀಶ್ ಕುಮಾರ್, ಬೀಚ್ ಫ್ರೆಂಡ್ಸ್ ಅಧ್ಯಕ್ಷ ಅಕ್ಷಯ್ ಕೋಟ್ಯಾನ್, ಮೊಗವೀರ ಕ್ರೀಡೋತ್ಸವ ಸಮಿತಿಯ ಗೌರವಾಧ್ಯಕ್ಷ ಚಂದ್ರಕಾಂತ್ ಕೆ.ಶ್ರೀಯಾನ್ ಮುಖ್ಯ ಅತಿಥಿಗಳಾಗಿದ್ದರು.
ಮಹೇಶ್ ಕೋಟ್ಯಾನ್ ಸ್ವಾಗತಿಸಿದರು. ನಾಗರಾಜ್ ಸುವರ್ಣ, ಕಾರ್ಯಕ್ರಮ ನಿರ್ವಹಿಸಿದರು. ಅಮೃತ್ ಕೋಟ್ಯಾನ್ ವಂದಿಸಿದರು.