ಹಾಲು ವಿತರಣೆಯಲ್ಲಿ ಅತ್ಯುತ್ತಮ ಸೇವಾ ತತ್ಪರತೆಯಿಂದ ಅವಿಭಜಿತ ದಕ ಜಿಲ್ಲೆಗೆ ಅಗ್ರಸ್ಥಾನ

ಮೂಲ್ಕಿ” ಅವಿಭಜಿತ ದ.ಕ. ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳ ಸಿಬ್ಬಂದಿಯವರ ಸೇವಾತತ್ಪರತೆಯ ಪರಿಣಾಮ ಉತ್ತಮ ಗುಣಮಟ್ಟದ ಹಾಲಿನ ವಿತರಣೆಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಪ್ರಶಸ್ತಿಯನ್ನು ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಪಡೆಯಲು ಸಾಧ್ಯವಾಗಿದೆ ಎಂದು ದ.ಕ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಹೇಳಿದರು.

ಮೂಲ್ಕಿ ಬಪ್ಪನಾಡು ದೇವಳದ ಶ್ರೀಅನ್ನಪೂರ್ಣೇಶ್ವರೀ ಸಭಾಂಗಣದಲ್ಲಿ ಮಂಗಳವಾರ ನಡೆದ ದ.ಕ. ಮತ್ತು ಉಡುಪಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನೌಕರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಒಕ್ಕೂಟವು ಹೈನುಗಾರರು ಮತ್ತು ಸಂಘಗಳ ನೌಕರರಿಗೆ ಪೂರಕವಾಗಿ ಸ್ಪಂದಿಸುತ್ತಿದ್ದು ಈಗಾಗಲೇ ನೌಕರರಿಗೆ ಒಕ್ಕೂಟದಿಂದ 35ಕೋಟಿ ರೂ. ಅನುದಾನ ವಿವಿಧ ರೂಪಗಳಲ್ಲಿ ನೀಡಲಾಗಿದೆ. ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರ ನೆಲೆಗಳಲ್ಲಿ ಸಹಕಾರ ನೀಡಲಾಗಿದೆ. ಈಗಾಗಲೇ ಹೈನುಗಾರರೊಂದಿಗೆ ಸಂಘದ ನೌಕರರಿಗೂ ಪಿಂಚಣಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಸಿಬ್ಬಂದಿಗಳು ಪ್ರಾಮಾಣಿಕತೆ ಮತ್ತು ಶ್ರದ್ದೆಯಿಂದ ಕಾರ್ಯ ನಿರ್ವಹಿಸುವುದು ಮಾತ್ರವಲ್ಲ ಸಂಘದ ಟ್ರಷ್ಟಿಗೆ ಹೆಚ್ಚುವರಿ ದೇಣಿಗೆ ಸಂಗ್ರಹಿಸುವ ಮೂಲಕ ಇನ್ನಷ್ಟು ಹೆಚ್ಚು ಸವಲತ್ತುಗಳನ್ನು ಗಳಿಸಲು ಸಾಧ್ಯವಿದೆ ಎಂದರು.
ಹೈನುಗಾರ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದ ದ.ಕ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯವಿದೆ. ಹೈನುಗಾರರು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಲ್ಲಿ ಒಲುವು ತೋರಿಸಬೇಕು. ಒಕ್ಕೂಟವೂ ವಿವಿಧ ರೀತಿಯ ಶೈಕ್ಷಣಿಕ ಮಾಹಿತಿ ಶಿಬಿರ ಹಮ್ಮಿಕೊಳ್ಳಲಿದೆ ಎಂದರು.

ಕರ್ನಾಟಕ ಹಾಲು ಮಂಡಳಿ ಬೆಂಗಳೂರು ಇದರ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಮಾತನಾಡಿ, ಒಕ್ಕೂಟವು ಈಗಾಗಲೇ ಬಹಳಷ್ಟು ಯೋಜನೆಗಳ ಮೂಲಕ ಕಾರ್ಮಿಕ ವರ್ಗವನ್ನು ಉನ್ನತಿಯತ್ತ ತರಲು ಪ್ರಯತ್ನಿಸುತ್ತಿದೆ. ಸಂಘದ ನೌಕರ ವರ್ಗವು ಒಕ್ಕೂಟವನ್ನು ಬಲಪಡಿಸುವಲ್ಲಿ ತಮ್ಮ ಕಾರ್ಯಸೂಚಿ ಹಮ್ಮಿಕೊಳ್ಳಬೇಕು. ಗುಣಮಟ್ಟದ ಹಾಲು ಉತ್ಪಾದನೆಯ ಜೊತೆಗೆ ಸಂಘದ ಬೆಳವಣಿಗೆಯತ್ತ ಗಮನ ಹರಿಸಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ಸುಲೇಖಾ ಎಸ್.ಶೆಟ್ಟಿ ಪ್ರಸ್ತಾವಿಸಿ, ನಮ್ಮದು ಕಲ್ಲೆಸೆಯುವ ಅಥವಾ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮಾಡುವ ಮೂಲಕ ಸಾರ್ವಜನಿಕರಿಗೆ ಸಮಸ್ಯೆ ಮಾಡುವ ಸಂಘಟನೆಯಲ್ಲ. ಹೈನುಗಾರಿಕೆಯ ಅಭಿವೃದ್ಧಿಯ ಮೂಲಕ ದೇಶಕ್ಕೆ ಉತ್ತಮ ಕೊಡುಗೆ ನೀಡುವ ಕಾರ್ಯಕರ್ತರ ಸಂಸ್ಥೆ. ಈ ನಮ್ಮ ಬಗ್ಗೆ ಸರಕಾರ ಸ್ಪಂದಿಸುವಂತೆ ಒಕ್ಕೂಟ ಪ್ರಯತ್ನಿಸಬೇಕು. ನಮ್ಮ ಕಾರ್ಯಕರ್ತರಿಗೆ ಸಹಾಯ ಸಹಕಾರ ಲಭ್ಯವಾಗಬೇಕು ಎಂದು ಪ್ರಸ್ತಾವಿಸಿದರು.

ದ.ಕ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ವಿ.ಹೆಗಡೆ ಹೈನುಗಾರರು ಹಾಗೂ ಸಂಘದ ಯೋಜನೆಗಳ ಮಾಹಿತಿ ನೀಡಿದರು.
ಸನ್ಮಾನ: ಈ ಸಂದರ್ಭ 2019ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಒಕ್ಕೂಟದ ಕಾರ್ಯ ನಿರ್ವಹಣಾಧಿಕಾರಿ ಎಸ್.ದಯಾನಂದ ರಾವ್ ರವರನ್ನು ಸನ್ಮಾನಿಸಲಾಯಿತು.
ವಿಶೇಷ ಸನ್ಮಾನ: ಇತ್ತಿಚೆಗೆ ನಿವೃತ್ತಿ ಹೊಂದಿದ ಮಂದರ್ತಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಜಯಶೀಲ ಶೆಟ್ಟಿ, ಎಳ್ಳಂಪಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಸುಬ್ರಮಣ್ಯ ಅಡಿಗ, ಶೀರೂರು-ಬೈರಂಪಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಶಾಂತಿ ಪೈ, ಕೊಡವೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಕೆ. ರಾಮ ಶೇರಿಗಾರ, ನಂದಿಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಸಾಲ್ಯಾನ್, ಹೆಜಮಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಎಸ್. ಕೃಷ್ಣ, ಹೆಜಮಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಗುಮಾಸ್ತೆ ರೂಪ ಕೆ., ನಾಡ-ಗುಡ್ಡೆಯಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ವೆಂಕಟರಮಣ ಗಾಣಿಗ, ಹೆಜಮಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸಹಾಯಕ ವಿಠಲ ಎಸ್.ದೇವಾಡಿಗ, ವಗ್ಗ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಇಸಾಕ್ ಡಿಸೋಜ, ಪಿಲಾತಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಪ್ರದೀಪ್ ಕುಮಾರ ಶೆಟ್ಟಿ, ನಾರಾವಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಸನತ್ ಕುಮಾರ್ ಹೆಗ್ಡೆ, ಕೂಕ್ಕುಜಡಕ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಎಮ್.ವಾಸುದೇವ ಗೌಡ, ನೀರೆಬೈಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಕೃಷ್ಣಯ್ಯ ಶೆಟ್ಟಿಯವರನ್ನು ವಿಶೇಷ ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು.

ವಿವಿಧ ನಿಧಿ ವಿತರಣೆ: ರೂ.4ಲಕ್ಷದ ಮೂರು ಸಾವಿರ ಮೊತ್ತದ ಆರೋಗ್ಯ ಹಾಗೂ ನಿವೃತ್ತಿ ನಿಧಿ ವಿತರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ದ.ಕ ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ಶೇಕರ್ ಟಿ.ತಾಕೊಡೆ ವಹಿಸಿದ್ದರು. ಕಾರ್ಯದರ್ಶಿ ಸುಲೇಖಾ ಎಸ್.ಶೆಟ್ಟಿ, ಕೋಶಾಧಿಕಾರಿ ಚಂದ್ರಹಾಸ ರೈ ಉಪಸ್ಥಿತರಿದ್ದರು.

ತೆಗ್ಗರ್ಸೆ ಹಾಲು ಉತ್ಪಾದಕರ ಸಂಘ ಕಾರ್ಯದರ್ಶಿ ಭವಾನಿ ಪ್ರಾರ್ಥನೆ ಹಾಡಿದರು. ಮಂಗಳೂರು ತಾಲೂಕು ನೌಕರರ ಒಕ್ಕೂಟದ ಅಧ್ಯಕ್ಷ ರಾಜೇಶ್ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಸುಲೇಖಾ ಎಸ್.ಶೆಟ್ಟಿ ಪ್ರಸ್ತಾವಿಸಿದರು. ಕಿಶೋರ ಮಿಯ್ಯಾರು ಮತ್ತು ರಾಘವೇಂದ್ರ ಕುಂದಾಪುರ ಸನ್ಮಾನಿತರನ್ನು ಪರಿಚಯಿಸಿದರು. ಕೇಶವ ಮತ್ತು ಶರೀಫ್ ಬೆಳ್ತಂಗಡಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಕಿಶೋರ ಮಿಯ್ಯಾರು ಮತ್ತು ಸುಜಾತ ಬಾಯಿರಿ ಕಾರ್ಯಕ್ರಮ ನಿರ್ವಹಿಸಿ ಚಂದ್ರಹಾಸ ರೈ ವಂದಿಸಿದರು.
ಯಕ್ಷಗಾನಾಮೃತ: ಸಮಾವೇಶದ ಮೊದಲು ಯುವ ಕಲಾವಿದೆ ಅಮೃತಾ ಅಡಿಗರವರ ಭಾಗವತಿಕೆಯಲ್ಲಿ ನಡೆದ ಯಕ್ಷಗಾನಾಮೃತ ಕಾರ್ಯಕ್ರಮದಲ್ಲಿ ಮದ್ದಳೆಯಲ್ಲಿ ಸೂರ್ಯನಾರಾಯಣ ಅಡಿಗ ಚೆಂಡೆಯಲ್ಲಿ ಕೌಶಿಕ್ ರಾವ್ ಪುತ್ತೂರು ಮತ್ತು ರಾಜೇಶ್ ಚಕ್ರತಾಳದಲ್ಲಿ ಸಹಕರಿಸಿದರು.

ಫೋಟೋ: ದ.ಕ ಮತ್ತು ಉಡುಪಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಮಾವೇಶವನ್ನು ದ.ಕ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಮಾತನಾಡಿದರು