ಹಾರ್ವರ್ಡ್ ಬದಲು ಭಗವದ್ಗೀತೆ,ಭಜನೆಗಳನ್ನು ಎಳೆಯರಿಗೆ ತಿಳಿಯಪಡಿಸಿ-ತೋನ್ಸೆ ಆನಂದ ಎಮ್.ಶೆಟ್ಟಿ

ಹಾರ್ವರ್ಡ್ ಬದಲು ಭಗವದ್ಗೀತೆ,ಭಜನೆಗಳನ್ನು ಎಳೆಯರಿಗೆ ತಿಳಿಯಪಡಿಸಿ-ತೋನ್ಸೆ ಆನಂದ ಎಮ್.ಶೆಟ್ಟಿ
ಪಡುಬಿದ್ರಿ ಬಂಟರ ಸಂಗದಲ್ಲಿ ಸಿರಿಮುಡಿ ದತ್ತಿನಿಧಿ ಕಾರ್ಯಕ್ರಮ

ದೇಶದ ಭವಿಷ್ಯದ ದೃಷ್ಟಿಯಿಂದ ನಮ್ಮ ಎಳೆಯರಿಗೆ ಹಾರ್ವರ್ಡ್‍ಗಳ ಬದಲು ಭಗವದ್ಗೀತೆ,ಭಜನೆಗಳನ್ನು ತಿಳಿಯಪಡಿಸಿದಲ್ಲಿ ನಾವು ಸುಸಂಸ್ಕøತರಾಗುವುದರ ಜತೆಗೆ ದೇಶದ ಸಮಗ್ರ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂದು ಮುಂಬೈ ಆರ್ಗಾನಿಕ್ ಗ್ರೂಪ್ ಆಫ್ ಕಂಪನೀಸ್‍ನ ಸಿಎಮ್‍ಡಿ ತೋನ್ಸೆ ಆನಂದ ಎಮ್.ಶೆಟ್ಟಿ ಹೇಳಿದರು.

ಪಡುಬಿದ್ರಿ ಬಂಟರ ಭವನದಲ್ಲಿ ಭಾನುವಾರ ಪಡುಬಿದ್ರಿ ಬಂಟರ ಯಾನೆ ನಾಡವರ ಸಂಘ ಮತ್ತು ಬಂಟ್ಸ್ ವೆಲ್‍ಫೇರ್ ಟ್ರಸ್ಟ್ ವತಿಯಿಂದ ಸಿರಿಮುಡಿ ದತ್ತಿನಿಧಿಯ ಸೋಶಿಯಲ್ ವೆಲ್‍ಫೇರ್ ಕಾರ್ಯಕ್ರಮ ಮತ್ತು ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ನಮ್ಮ ದೇಶದಲ್ಲಿ ಮೀಸಲಾತಿ ಎಂಬುದು ಉದಾಸೀನತೆಗೆ ಕಾರಣ.ದೇಶದ ಸಮಗ್ರ ಅಭಿವೃದ್ಧಿಗೆ ಮೀಸಲಾತಿ ಮಾರಕ.ಅತ್ಯುತ್ತಮ ಶಿಕ್ಷಣ ಪಡೆದು ಪದೋನ್ನತಿ ಹೊಂದುವುದರಿಂದ ಭಾರತವು ಅಭಿವೃದ್ಧಿ ಹೊಂದಿದ ದೇಶಗಳಿಗೆ ತೀವ್ರ ಪೈಪೋಟಿ ನೀಡಲು ಸಾಧ್ಯವಿದೆ ಎಂದ ಅವರು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡವನೇ ಜಾಣ ಎಂದು ಅಭಿಪ್ರಾಯಿಸಿದರು.
ದೇಶಧ ಜನಪ್ರತಿನಿಧಿಗಳಿಗೆ ವಿದ್ಯಾಭ್ಯಾಸದ ಕೊರತೆ ಎದ್ದು ಕಾಣುತ್ತದೆ.ಅವರಿಗೆ ವ್ಯಕ್ತಿತ್ವ ವಿಕಸನದ ತರಬೇತಿಯ ಅಗತ್ಯವಿದೆ ಎಂದ ಆನಂದ ಎಮ್.ಶೆಟ್ಟಿಯವರು,ದೇಶಪ್ರೇಮಿಗಳೆಣಿಸಿಕೊಂಡವರೇ ಜನಪ್ರತಿನಿಧಿಗಳಾಗಬೇಕೆಂದು ಅಭಿಪ್ರಾಯಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಕತಾರ್ ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ಮೂಡಂಬೈಲು ರವಿ ಶೆಟ್ಟಿ ಮಾತನಾಡಿ,ಹಿರಿಯರ ಸಾಧನೆ,ಸಮರ್ಪಣಾ ಮನೋಭಾವವೇ ಬಂಟ ಸಮಾಜದ ಅಭಿವೃದ್ಧಿಗೆ ಕಾರಣ ಎಂದರು.

ಸನ್ಮಾನ: ತೋನ್ಸೆ ಆನಂದ ಎಮ್.ಶೆಟ್ಟಿ-ಶಶಿರೇಖಾ ಆನಂದ ಶೆಟ್ಟಿ ದಂಪತಿಯನ್ನು ಬಂಟರ ಸಂಘದ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.ಭಾರತ ಸರಕಾರದ ಕಸ್ಟಮ್ಸ್ ಮತ್ತು ಜಿಎಸ್‍ಟಿಯ ನಿವೃತ್ತ ಅಸಿಸ್ಟೆಂಟ್ ಕಮೀಷನರ್ ಎರ್ಮಾಳು ರೋಹಿತ್ ಹೆಗ್ಡೆ-ವಿಲಾಸಿನಿ ರೋಹಿತ್ ಹೆಗ್ಡೆ ಹಾಗೂ ಕರ್ನಾಟಕ ರಾಜ್ಯ ನಿವೃತ್ತ ಡ್ರಗ್ ಕಂಟ್ರೋಲರ್ ರಘುರಾಮ ಭಂಡಾರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಉದ್ಘಾಟನೆ: ಸಭಾ ಕಾರ್ಯಕ್ರಮಕ್ಕೆ ಮುನ್ನ ನಡೆದ ಸರಳ ಸಮಾರಂಭದಲ್ಲಿ ಮಂಗಳೂರು ಸಿಟಿ ಆಸ್ಪತ್ರೆಯ ಎಮ್‍ಡಿ ಡಾ.ಕೆ.ಭಾಸ್ಕರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿರಿಮುಡಿ ದತ್ತಿನಿಧಿಗೆ ರೂ.ಒಂದು ಲಕ್ಷ ದೇಣಿಗೆ ನೀಡಿದರು.ಮಾತಾ ಡೆವಲಪರ್ಸ್‍ನ ಸಂತೋಷ್‍ಕುಮಾರ್ ಶೆಟ್ಟಿ,ಮೂಡಂಬೈಲು ರವಿ ಶೆಟ್ಟಿಯವರೂ ತಲಾ ರೂ.ಒಂದು ಲಕ್ಷಗಳ ದೇಣಿಗೆಯನ್ನು ಘೋಷಿಸಿದರು.

ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಮನೋಹರ ಶೆಟ್ಟಿ ಅಧ್ಯಕ್ಷತೆ ವಹಿಸಿ ಪಡುಬಿದ್ರಿ ಬಂಟರ ಸಂಘ ನಡೆದು ಬಂದ ದಾರಿಯ ಬಗ್ಗೆ ಮಾತನಾಡಿದರು.

ವಿದ್ಯಾರ್ಥಿವೇತನ ವಿತರಣೆ: ಸಮಾರಂಭದಲ್ಲಿ ಸುಮಾರು 280 ಮಂದಿಗೆ(ಒಟ್ಟು ರೂ.6 ಲಕ್ಷ) ವಿದ್ಯಾರ್ಥಿವೇತನ,ವಿಧವಾ ವೇತನ,ವಿಶೇಷಚೇತನ ವೇತನ,ಅಶಕ್ತರಿಗೆ ಸಹಾಯಧನ,ಮದುವೆಗೆ ಸಹಕಾರ ಇತ್ಯಾದಿಗಳನ್ನು ವಿತರಿಸಲಾಯಿತು.
ಮಂಗಳೂರು ಮಾತಾ ಡೆವಲಪರ್ಸ್ ಪೈ.ಲಿ.ನ ಎಮ್‍ಡಿ ಸಂತೋಷ್‍ಕುಮಾರ್ ಶೆಟ್ಟಿ,ಬಂಟರ ಸಂಘದ ಪೂರ್ವಾಧ್ಯಕ್ಷ ಹಾಗೂ ಸಿರಿಮುಡಿ ದತ್ತಿನಿಧಿಯ ಗೌರವಾಧ್ಯಕ್ಷ ಸಾತೂರು ಭಾಸ್ಕರ ಶೆಟ್ಟಿ,ಅಧ್ಯಕ್ಷ ಎರ್ಮಾಳು ಶಶಿಧರ್ ಕೆ.ಶೆಟ್ಟಿ,ಪಡುಬಿದ್ರಿ ಬಂಟರ ಸಂಘದ ಕಾರ್ಯದರ್ಶಿ ಡಾ.ಮನೋಜ್‍ಕುಮಾರ್ ಜೆ.ಶೆಟ್ಟಿ,ಕೋಶಾಧಿಕಾರಿ ಶರತ್ ಶೆಟ್ಟಿ,ಮಹಿಳಾ ವಿಭಾಗದ ಅಧ್ಯಕ್ಷೆ ಅಕ್ಷತಾ ಸುರೇಂದ್ರ ಶೆಟ್ಟಿ ಅತಿಥಿಗಳಾಗಿದ್ದರು.

ಸಾಂತೂರು ಭಾಸ್ಕರ ಶೆಟ್ಟಿ ಸ್ವಾಗತಿಸಿದರು.ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ಡಾ.ಮನೋಜ್ ಕುಮಾರ್ ಶೆಟ್ಟಿ ವರದಿ ವಾಚಿಸಿದರು.ಅಕ್ಷತಾ ಶೆಟ್ಟಿ ವಂದಿಸಿದರು.