ಸ್ವರ್ಣ ಪಲ್ಲಕ್ಕಿ ಸಮರ್ಪಿಸುವ ಮೂಲಕ ದೇವಧರ್ಮವನ್ನು ಪಾಲಿಸೋಣ-ಪಂಜ ಭಾಸ್ಕರ ಭಟ್

ಬಪ್ಪನಾಡು ಕ್ಷೇತ್ರದಲ್ಲಿ ಶ್ರೀ ದೇವಿಯ ಸ್ವರ್ಣ ಪಲ್ಲಕ್ಕಿ ಸಂಕಲ್ಪಕ್ಕೆ ಮುಹೂರ್ತ

ಮೂಲ್ಕಿ: ದೇಹಕ್ಕೆ ಪರಿಶುದ್ಧತೆ ನೀಡುವುದು ಸ್ವರ್ಣ.ಅದೇ ರೀತಿ ದೇವರಿಗೆ ಬಲು ಪ್ರಿಯವಾದ ಸ್ವರ್ಣ ಪಲ್ಲಕ್ಕಿ ಸಮರ್ಪಣೆಯಿಂದ ಭಕ್ತರ ಬಾಳು ಬಂಗಾರವಾದಂತೆ.ಬಪ್ಪನಾಡು ಶ್ರೀ ದುರ್ಗೆಗೆ ಸ್ವರ್ಣ ಪಲ್ಲಕ್ಕಿ ಸಮರ್ಪಿಸುವ ಮೂಲಕ ಈ ಜಾಗದಲ್ಲಿ ದೇವಧರ್ಮವನ್ನು ಪಾಲಿಸೋಣ.ಈ ಮೂಲಕ ದೇಶ ಸುಭಿಕ್ಷುವಾಗಲಿ ಎಂದು ಧಾರ್ಮಿಕ ವಿದ್ವಾಂಸ ವೇದಮೂರ್ತಿ ಪಂಜ ಭಾಸ್ಕ ಭಟ್ ಹೇಳಿದರು.

ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ವಿಜಯದಶಮಿಯ ಶುಭ ದಿನವಾದ ಶುಕ್ರವಾರ ಶ್ರೀ ದೇವಿಯ ಸ್ವರ್ಣ ಪಲ್ಲಕ್ಕಿ ನಿರ್ಮಾಣ ಸಂಕಲ್ಪಕ್ಕೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚಿಸಿದರು.

ಶ್ರೀ ದೇವಿಯ ಗರ್ಭಗುಡಿ ಮುಂದೆ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸುಮಂಗಲಿಯರಾದ ಪದ್ಮಾ ವಿ.ಕುಡ್ವ,ಗಾಯತ್ರಿ ಜಯಂತ ರೈ,ಸುಜಾತಾ ನಾರಾಯಣ ಶೆಟ್ಟಿ,ಕಕ್ವಗುತ್ತು ಉಮಾ ರವೀಂದ್ರನಾಥ ಆಳ್ವ,ಉಷಾರಾಣಿ ಹರಿಕೃಷ್ಣ ಪುನರೂರು,ಹೀರಾ ಭುವನೇಂದ್ರ ಕಿದಿಯೂರು,ರಾಜೇಶ್ವರೀ ಸೂರ್ಯಕುಮಾರ್,ಸುನೀತಾ ಶರತ್ ಕೋಟ್ಯಾನ್,ಶ್ರೀಲತಾ ನಾಗೇಶ್ ಬಪ್ಪನಾಡು,ಶೋಭಾ ಚೆನ್ನಪ್ಪ ಬಿ.ಎಸ್. ಮತ್ತು ಜಯಶ್ರೀ ಅಮರನಾಥ ಶೆಟ್ಟಿಯವರು ದೀಪ ಪ್ರಜ್ವಲನಗೊಳಿಸಿ ಸ್ವರ್ಣ ಪಲ್ಲಕ್ಕಿ ಸಂಕಲ್ಪಕ್ಕೆ ಚಾಲನೆ ನೀಡಿದರು.

ದೇವಳದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು,ಅನುವಂಶಿಕ ಮತ್ತು ಆಡಳಿತ ಮೊಕ್ತೇಸರ ಎನ್‍ಎಸ್ ಮನೋಹರ ಶೆಟ್ಟಿ ಮತ್ತು ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಮ್.ನಾರಾಯಣ ಶೆಟ್ಟಿ ರಜತ ಕಲಶಕ್ಕೆ ಸ್ವರ್ಣ ಸಮರ್ಪಿಸುವ ಮೂಲಕ ಸ್ವರ್ಣ ಪಲ್ಲಕ್ಕಿಗೆ ಪ್ರಾರಂಭ ನೀಡಿದರು.

ಎಮ್.ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ನಳಿನ್‍ಕುಮಾರ್ ಕಟೀಲ್,ಶಾಸಕ ಉಮಾನಾಥ ಕೋಟ್ಯಾನ್,ಮಾಜಿ ಸಚಿವದ್ವಯರಾದ ಕೆ.ಅಭಯಚಂದ್ರ ಜೈನ್ ಮತ್ತು ಕೆ.ಅಮರನಾಥ ಶೆಟ್ಟಿ,ಜೀಣೋದ್ಧಾರ ಸಮಿತಿಯ ಮಾಜಿ ಅಧ್ಯಕ್ಷ ಜಯಂತ ರೈ ಪಾದೆಮನೆ,ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಮ್‍ಎಚ್ ಅರವಿಂದ ಪೂಂಜಾ,ಎನ್‍ಎಸ್ ಮನೋಹರ ಶೆಟ್ಟಿ,ದುಗ್ಗಣ್ಣ ಸಾವಂತರು,ದೇವಳದ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ. ಮುಖ್ಯ ಅತಿಥಿಗಳಾಗಿದ್ದರು.
ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ಶಿಬರೂರು,ಅರ್ಚಕರಾದ ಕೃಷ್ಣದಾಸ ಭಟ್ ಮತ್ತು ಶ್ರೀಪತಿ ಉಪಾಧ್ಯಾಯ ನೇತೃತ್ವದಲ್ಲಿ ಚಂಡಿಕಾಯಾಗ ಸಹಿತ ಧಾರ್ಮಿಕ ಕ್ರಿಯೆಗಳು ನಡೆದವು.

ಈ ಸಂದರ್ಭ ಸ್ವರ್ಣ ಪಲ್ಲಕ್ಕಿಗೆ ಮರ ಒದಗಿಸಿದ ವಿಶ್ವನಾಥ ಪರವಾಗಿ ಚೆನ್ನಪ್ಪ ಬಿಎಸ್,175 ಗ್ರಾಂ ಚಿನ್ನ ನೀಡಿದ ಪ್ರೇಮಲತಾ ರಾಜೀವ ಬಂಗೇರ,100ಗ್ರಾಂ ಚಿನ್ನ ನೀಡಿದ ಎನ್‍ಜೆ ಶೆಟ್ಟಿ,51 ಗ್ರಾಂ ಚಿನ್ನ ನೀಡಿದ ರಾಧಾಕೃಷ್ಣ ರೈ,50 ಗ್ರಾಂ ಚಿನ್ನ ನೀಡಿದ ಸಂದೇಶ್ ಶೆಟ್ಟಿ ಅಗ್ರಜ,9 ಪವನ್ ಚಿನ್ನ ನೀಡಿದ ಜಯ ಸಂಧ್ಯಾ ಕರ್ಕೇರ,3 ಲಕ್ಷ ರೂ. ನೀಡಿದ ಉಮಾ ರವೀಂದ್ರನಾಥ ಆಳ್ವ,5 ಪವನ್ ಚಿನ್ನ ನೀಡಿದ ಅಪ್ಪಿ ಅಣ್ಣು ಶೇರಿಗಾರ್ ಕುಟುಂಬಿಕರು,2 ಲಕ್ಷ ರೂ.ನೀಡಿದ ಮೂಲ್ಕಿ ನಾಲ್ಕುಪಟ್ಣ ಮೊಗವೀರ ಸಭಾ,ನಗದು ಮತ್ತು ಚಿನ್ನ ನೀಡಿದ ಬಪ್ಪನಾಡು ಶ್ರೀ ದುರ್ಗಾ ಸೇವಾ ಯುವಕ ವೃಂದವನ್ನು ಗೌರವಿಸಲಾಯಿತು.

ಶ್ರೀ ದೇವಳದ ಮಾಜಿ ಆಡಳಿತ ಮೊಕ್ತೇಸರ ರಮಾನಾಥ ಶೆಟ್ಟಿಯವರು ರೂ.ಒಂದು ಲಕ್ಷ ನೀಡುವ ಭರವಸೆ ನೀಡಿದರು.

ಧಾರ್ಮಿಕ ದತ್ತಿ ಇಲಾಖಾ ಎಸಿ ಪ್ರಮೀಳಾ,ಸಮಿತಿಯ ಉಪಾಧ್ಯಕ್ಷರುಗಳಾದ ಎಚ್‍ವಿ ಕೋಟ್ಯಾನ್ ಮತ್ತು ಕರುಣಾಕರ ಶೆಟ್ಟಿ ಬಾಳದಗುತ್ತು,ಜತೆ ಕಾರ್ಯದರ್ಶಿ ದೊಡ್ಡಣ್ಣ ಮೊೈಲಿ,ಜತೆ ಕೋಶಾಧಿಕಾರಿ ಅತುಲ್ ಕುಡ್ವ,ಸಂಘಟನಾ ಕಾರ್ಯದರ್ಶಿ ಧನಂಜಯ ಕೋಟ್ಯಾನ್,ಸದಸ್ಯರುಗಳಾದ ಸೂರ್ಯಕುಮಾರ್,ಸಂತೋಷ್‍ಕುಮಾರ್ ಹೆಗ್ಡೆ,ಗುರುವಪ್ಪ ಕೋಟ್ಯಾನ್,ಚೆನ್ನಬಪ್ಪ ಬಿಎಸ್,ಬೂಬ ಶಟ್ಟಿಗಾರ್,ಉದಯಕುಮಾರ್ ಶೆಟ್ಟಿ,ವಿಶೇಷ ಆಹ್ವಾನಿತರಾದ ಹರಿಕೃಷ್ಣ ಪುನರೂರು,ಕೆ.ಕೃಷ್ಣ ಆರ್.ಶೆಟ್ಟಿ ಮತ್ತು ಭುವನೇಂದ್ರ ಕಿದಿಯೂರು,ಕಸ್ತೂರಿ ಪಂಜ,ರಂಗನಾಥ ಶೆಟ್ಟಿ,ಶಮೀನಾ ಆಳ್ವ,ಸುರೇಶ್ ಬಂಗೇರ,ಭುವನಾಭಿರಾಮ ಉಡುಪ,ಲಿಂಗಪ್ಪ ಶೆಟ್ಟಿ,ದಿನೇಶ್ ಹೆಗ್ಡೆ,ಕಿಶೋರ್ ಶೆಟ್ಟಿ,ಹರಿಶ್ಚಂದ್ರ ಸಾಲ್ಯಾನ್,ದೇವಪ್ರಸಾದ್ ಪುನರೂರು,ಕಿಶೋರ್ ಶೆಟ್ಟಿ,ಉದಯ ಶೆಟ್ಟಿ,ಸುಜಿತ್ ಎಸ್ ಸಾಲ್ಯಾನ್,ಹರೀಶ್ಚಂದ್ರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸುನಿಲ್ ಆಳ್ವ ಸ್ವಾಗತಿಸಿದರು.ಸಂತೋಷ್‍ಕುಮಾರ್ ಹೆಗ್ಡೆ ಪ್ರಸ್ತಾವಿಸಿದರು.ಚಂದ್ರಶೇಖರ ಸುವರ್ಣ ವಂದಿಸಿದರು.