ಸ್ಚಚ್ಛ ಮೂಲ್ಕಿಯಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರ –ಮೂಲ್ಕಿ ತಹಶಿಲ್ದಾರ್ ಮಾಣಿಕ್ಯ ಎಮ್

ಮೂಲ್ಕಿ: ಮೂಲ್ಕಿ ನಗರವನ್ನು ಸ್ವಚ್ಛವಾಗಿಡಲು ಪೌರ ಕಾರ್ಮಿಕರ ಕರ್ತವ್ಯ ಹಾಗೂ ಕೊಡುಗೆ ಅಪಾರ ಎಂದು ಮೂಲ್ಕಿ ತಹಶಿಲ್ದಾರ್ ಮಾಣಿಕ್ಯ ಎಮ್. ಹೇಳಿದರು.

ಅವರು ಮೂಲ್ಕಿ ನಗರ ಪಂಚಾಯಿತಿ ವತಿಯಿಂದ ನಗರ ಪಂಚಾಯಿತಿ ಕಛೇರಿಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೌರ ಕಾರ್ಮಿಕರು ಆರೋಗ್ಯ ಹಿತವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಶೃದ್ದೆಯಿಂದ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮೂಲ್ಕಿ ನಗರ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮಾತನಾಡಿ ಮುಲ್ಕಿ ನಗರ ಪಂಚಾಯಿತಿ ವತಿಯಿಂದ ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಹಾಗೂ ಅನೇಕ ಸವಲತ್ತುಗಳನ್ನು ಒದಗಿಸುತ್ತಿದ್ದು ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿಸಿದರು.

ಸಮಾರಂಭದಲ್ಲಿ ಮೂಲ್ಕಿ ನ.ಪಂ. ಆರೋಗ್ಯಾಧಿಕಾರಿ ಲಿಲ್ಲಿ ನಾಯರ್, ಮುಲ್ಕಿ ನ.ಪಂ. ಸದಸ್ಯರಾದ ವಿಮಲಾ ಪೂಜಾರಿ, ರಾಧಿಕಾ ಯಾದವ ಕೋಟ್ಯಾನ್, ಯೋಗೀಶ್ ಕೋಟ್ಯಾನ್, ವಂದನಾ ಕಾಮತ್, ಬಾಲಚಂದ್ರ ಕಾಮತ್, ಸುಭಾಸ್ ಶೆಟ್ಟಿ, ಶಾಂತಾ ಕಿರೋಡಿಯನ್, ದಯಾವತಿ ಅಂಚನ್, ಮಾಜಿ ನ.ಪಂ. ಸದಸ್ಯ ಕುಳಾಯಿ ಬಷೀರ್, ಮೂಲ್ಕಿ ನ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸನ್ಮಾನ: ಮೂಲ್ಕಿ ನ.ಪಂ.ವ್ಯಾಪ್ತಿಯಲ್ಲಿ ಮನೆಮನೆ ಕಸ ಸಂಗ್ರಹದಲ್ಲಿ ಸ್ವಚ್ಛತೆಗೆ ಸಹಕರಿಸಿ ಜಾಗ್ರತಿ ಮೂಡಿಸಿದ ನೆಲೆಯಲ್ಲಿ ಪೌರ ಕಾರ್ಮಿಕರನ್ನು ಗೌರವಿಸಲಾಯಿತು. ಹಾಗೂ ಪೌರ ಕಾಮಿಕ ದಿನಾಚರಣೆಯ ಅಂಗವಗಿ ನಡೆದ ವಿವಿಧ ಆಟೋಟ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಆರೋಗ್ಯಾಧಿಕಾರಿ ಲಿಲ್ಲಿ ನಾಯರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಕ್ಯಾ: ಪೌರ ಕಾರ್ಮಿಕ ದಿನಾಚಣೆಯ ಅಂಗವಾಗಿ ಮೂಲ್ಕಿ ನ.ಪಂ.ವ್ಯಾಪ್ತಿಯಲ್ಲಿ ಮನೆಮನೆ ಕಸ ಸಂಗ್ರಹದಲ್ಲಿ ಸ್ವಚ್ಛತೆಗೆ ಸಹಕರಿಸಿ ಜಾಗ್ರತಿ ಮೂಡಿಸಿದ ನೆಲೆಯಲ್ಲಿ ಪೌರ ಕಾರ್ಮಿಕರನ್ನು ಗೌರವಿಸಲಾಯಿತು.