ಸೆ.7-15: ಜೇಸಿಐ ಪಡುಬಿದ್ರಿಯ ಜೇಸೀ ಸಪ್ತಾಹ-2019

ಪಡುಬಿದ್ರಿ: 44 ವರ್ಷ ಇತಿಹಾಸವಿರುವ ಜೇಸಿಐ ಪಡುಬಿದ್ರಿಯ ವತಿಯಿಂದ ಸಾರ್ವಜನಿಕ ಸಂಪರ್ಕದ ಉದ್ದೇಶದಿಂದ ಹಮ್ಮಿಕೊಂಡಿರುವ ಜೇಸೀ ಸಪ್ತಾಹ-2019 ಈ ಬಾರಿ ಸೆಪ್ಟಂಬರ್ 7ರಿಂದ 15ರವರೆಗೆ ನಡೆಯಲಿದೆ.

ಬುಧವಾರ ಕಾಪು ಪ್ರೆಸ್ ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜೇಸಿಐ ಪಡುಬಿದ್ರಿಯ ಅಧ್ಯಕ್ಷ ಅನಿಲ್ ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿದರು.

ಸೆ.7 ಶನಿವಾರ ಪಲಿಮಾರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸಂಜೆ 7 ಗಂಟೆಗೆ ಸಪ್ತಾಹದ ಉದ್ಘಾಟನೆ ನಡೆಯಲಿದ್ದು, ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ರಾವ್ ಉದ್ಘಾಟಿಸಲಿದ್ದಾರೆ.

ಅಂದು ರಾತ್ರಿ 7 ಗಂಟೆಯಿಂದ ಬಲೇ ತೆಲಿಪಾಲೆ ಖ್ಯಾತಿಯ ದೀಪಕ್ ರೈ ಪಾಣಾಜೆ ತಂಡದಿಂದ ಹಾಸ್ಯ ಪ್ರಹಸನ ನಡೆಯಲಿದೆ.
ಸೆ.8 ಭಾನುವಾರ ಬೆಳಿಗ್ಗೆ 10 ಗಂಟೆಗೆ ಪಡುಬಿದ್ರಿ ವಿಜಯ ಭವನ ಎದುರು ದ್ವಿಚಕ್ರ ವಾಹನ ಸವಾರರಿಗಾಗಿ ಟಿವಿಎಸ್ ನಿಧಿ ಶೋಧ, ಸಂಜೆ 3 ಗಂಟೆಯಿಂದ ಬೋರ್ಡ್ ಶಾಲಾ ಮೈದಾನದಲ್ಲಿ ಜೇಸೀ ಜೇಸಿರೆಟ್ ಮತ್ತು ಜ್ಯೂನಿಯರ್ ಜೇಸೀಗಳಿಗಾಗಿ ಕ್ರೀಡಾಕೂಟ ನಡೆಯಲಿದೆ.
ಸೆ.9 ಸೋಮವಾರ ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಪಡುಬಿದ್ರಿಯ ರಿಕ್ಷಾ, ಟೆಂಪೋ ಮತ್ತು ಕಾರು ಚಾಲಕರಿಗಾಗಿ ಕ್ರಿಕೆಟ್ ಪಂದ್ಯಾಟ ಹಮ್ಮಿಕೊಳ್ಳಲಾಗಿದೆ.
ಸೇ.10 ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಪಡುಬಿದ್ರಿ ಬಂಟರ ಭವನದಲ್ಲಿ ಪಡುಬಿದ್ರಿಯ ಹಠಯೋಗ ಸಮಿತಿಯ ಸಹಯೋಗದೊಂದಿಗೆ ಸಾಮೂಹಿಕ ಸೂರ್ಯ ನಮಸ್ಕಾರ ನಡೆಯಲಿದೆ.
ಸೆ.11 ಬುಧವಾರ ಬೆಳಿಗ್ಗೆ 10 ಗಂಟೆಗೆ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಆರೋಗ್ಯವಂತ ಶಿಶು ಸ್ಪರ್ಧೆ, ಸಂಜೆ 7 ಗಂಟೆಯಿಂದ ಅವರಾಲುಮಟ್ಟುವಿನ ಫುರ್ಟಾಡೋ ವಿಲ್ಲಾದಲ್ಲಿ ಜೇಸಿಐ ಕುಟುಂಬೋತ್ಸವ, ಜೇಸಿಐ ವಲಯಾಧ್ಯಕ್ಷ ಅಶೋಕ್ ಚೂಂತಾರು ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಲಿದೆ.
ಸೆ.12 ಗುರುವಾರ ಮಧ್ಯಾಹ್ನ 2 ಗಂಟೆಗೆ ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳೆಯರಿಗಾಗಿ ಮಹಿಳಾ ಸಬಲೀಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸೆ.13 ಶುಕ್ರವಾರ ಪಡುಬಿದ್ರಿಯ ಬೆನಕ ಎಮಿಷನ್ ಟೆಸ್ಟಿಂಗ್ ಸೆಂಟರ್ ಸಹಯೋಗದೊಂದಿಗೆ ಬೆನಕ ಕಾಂಪ್ಲೆಕ್ಸ್‍ನಲ್ಲಿ ಸ್ಥಳೀಯ ರಿಕ್ಷಾ ಚಾಲಕರಿಗಾಗಿ ಉಚಿತ ವಾಯು ಮಾಲಿನ್ಯ ತಪಾಸಣೆ ನಡೆಯಲಿದೆ.
ಸೆ.14 ಶನಿವಾರ ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಡುಪಿ ಅಗ್ನಿ ಶಾಮಕ ದಳದ ಸಹಯೋಗದೊಂದಿಗೆ ಅಗ್ನಿ ಶಮನದ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಹಮ್ಮಿಕೊಳ್ಳಲಾಗಿದೆ.
ಸೇ.15 ಭಾನುವಾರ ಸಂಜೆ 7 ಗಂಟೆಗೆ ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಜೇಸಿಐ ಗ್ರೇಟ್ ಡೇ ಸಂಭ್ರಮದೊಂದಿಗೆ ಸಾಧಕರಿಗೆ ಸನ್ಮಾನ ಹಾಗೂ ದೇವದಾಸ್ ಕಾಪಿಕಾಡ್ ತಂಡದಿಂದ “ಪುಷ್ಪಕ್ಕನ ಇಮಾನ” ತುಳು ಹಾಸ್ಯಮಯ ನಾಟಕ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಜೇಸಿಐ ಪಡುಬಿದ್ರಿಯ ಪೂರ್ವಾಧ್ಯಕ್ಷರಾದ ಹರೀಶ್ ಹೆಜ್ಮಾಡಿ ಮತ್ತು ರಾಮಚಂದ್ರ ಆಚಾರ್ಯ, ಕಾರ್ಯದರ್ಶಿ ಪ್ರದೀಪ್ ಆಚಾರ್ಯ, ಶಿವರಾಜ್ ಮೊಯಿಲಿ ಉಪಸ್ಥಿತರಿದ್ದರು.