ಸೆ.28: ಪಡುಬಿದ್ರಿಯಲ್ಲಿ ಡಿವೈಡರ್ ತೆರವಿಗೆ ಪ್ರತಿಭಟನೆ

ಪಡುಬಿದ್ರಿ: ಇಲ್ಲಿನ ಗ್ರಾಮ ದೇವಳಕ್ಕೆ ತೆರಳುವ ಗಣಪತಿ ದ್ವಾರದ ಬಳಿ ಹೆದ್ದಾರಿಯಲ್ಲಿ ಅಳವಡಿಸಿರುವ ರಸ್ತೆ ವಿಭಾಜಕವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಸೆ.28ರಂದು ಸಮಾನಾಸಕ್ತರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ರಾಹೆ 66ರಿಂದ ಇತಿಹಾಸ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳ,ಶ್ರೀ ವೆಂಕಟರಮಣ ದೇವಳ,ಬ್ಲೂ ಫ್ಲ್ಯಾಗ್ ಪಡೆದ ದೇಶದ 13 ಬೀಚ್‍ಗಳಲ್ಲಿ ಪ್ರಥಮವಾಗಿ ಅಭಿವೃದ್ಧಿ ಹೊಂದಲಿರುವ ಪಡುಬಿದ್ರಿ ಬೀಚ್,ಕಾಡಿಪಟ್ಣ-ನಡಿಪಟ್ಣ ಗ್ರಾಮ,ಸಾಗರ್ ವಿದ್ಯಾಮಂದಿರ,ಗಣಪತಿ ಶಾಲೆಗಳಿಗೆ ಈಗಿನ ಗಣಪತಿ ದ್ವಾರದಿಂದ ನೇರ ಸಂಪರ್ಕ ಇತ್ತು.ಇದೀಗ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆದಿರುವ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ರಸ್ತೆ ವಿಭಾಜಕ ನಿರ್ಮಿಸಿ ಸುಮಾರು ಒಂದು ಕಿಮೀ ಸುತ್ತು ಬಳಸಿ ಸಾಗುವಂತೆ ತಡೆ ಒಡ್ಡಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಹೆದ್ದಾರಿಯಿಂದ ಈ ಭಾಗಗಳಿಗೆ ತೆರಳುವವರ ಉಪಯೋಗಕ್ಕಾಗಿ ಗಣಪತಿ ದ್ವಾರದ ಬಳಿ ರಸ್ತೆ ವಿಭಾಜಕ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ವಿವಿಧ ಸಂಘಟನೆಗಳೊಂದಿಗೆ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ದ್ವಾರದ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.