ಸುಂದರ ಪುಷ್ಪಾಲಂಕಾರಗಳೊಂದಿಗೆ ಮನ ತುಂಬಿಕೊಂಡ ಭಕ್ತರು:ಶ್ರೀಗಳು, ಸಂಸದರು ಭಾಗಿ

ಪಡುಬಿದ್ರಿ: ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಶನಿವಾರ ನಡೆದ ಮುಂಬಯಿನ ಚರಿಷ್ಮಾ ಬಿಲ್ಡರ್ಸ್ ಲತಾ ಸುಧೀರ್ ಶೆಟ್ಟಿ-ಸುಧೀರ್ ವಾಸು ಶೆಟ್ಟಿ ಅವರ ಢಕ್ಕೆಬಲಿ ಸೇವೆಯ ಸಂದರ್ಭದಲ್ಲಿ ಸುಂದರ ಪುಷ್ಪಾಲಂಕಾರವು ಆಗಮಿಸಿದ್ದ ಭಕ್ತಾದಿಗಳ ಕಣ್ಮನ ತಣಿಸಿದವು.

-ಸಂಸದ ನಳಿನ್‍ಕುಮಾರ್ ಕಟೀಲ್ ಭಾಗಿ

ಸ್ಟಾರ್ ಆಕರ್ಷಣೆಯಾಗಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ತಮ್ಮ ಕುಟುಂಬಿಕರೊಂದಿಗೆ ಶ್ರದ್ಧಾಭಕ್ತಿಯಂದ ಪಾಲ್ಗೊಂಡಿದ್ದರು. ಸುಧೀರ್ ಶೆಟ್ಟಿ ಹಾಗೂ ಲತಾ ಸುಧೀರ್ ಶೆಟ್ಟಿ ಸೇವಾಕರ್ತೃಗಳಾಗಿ ಉಪಸ್ಥಿತರಿದ್ದು ವಿಶೇಷ ಆಮಂತ್ರಿತರಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ರಾಜೇಶ್ ನಾಯಕ್, ಲಾಲಾಜಿ ಆರ್.ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.

ಈ ಢಕ್ಕೆಬಲಿ ಸೇವೆಯಲ್ಲಿ ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ ಬಂಜಾರ, ಕ್ವಾಲಿಟಿ ಸದಾನಂದ ಶೆಟ್ಟಿ, ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ, ಶಶಿದರ ಶೆಟ್ಟಿ ಎರ್ಮಾಳು, ಕೃಷ್ಣಯ್ಯ ಶೆಟ್ಟಿ ನಂದಳಿಕೆ, ಸಚ್ಚಿದಾನಂದ ಶೆಟ್ಟಿ ಕಾಪು, ಮೋಹನ್ ಆಳ್ವ ಮೂಡುಬಿದಿರೆ, ದೇವಣ್ಣ ಶೆಟ್ಟಿ ಡಿಕ್ಸಿ, ರೋಹಿತ್ ಹೆಗ್ಡೆ ಎರ್ಮಾಳು, ರಘುರಾಮ್ ಶೆಟ್ಟಿ ಮುಂಬಯಿ, ಮಟ್ಟಾರ್ ರತ್ನಾಕರ ಹೆಗ್ಡೆ, ಅಶೋಕ್ ಶೆಟ್ಟಿ ಸುಜ್ಲಾನ್,ಜಯ ಸೆಟ್ಟಿ ಮಯುರಿ,ಸಮತೊಷ್ ಶೆಟ್ಟಿ ಪಲ್ಲವಿ ಮತ್ತಿತರರು ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಶ್ರೀಗಳಿಗೆ ಸೇವಾಕರ್ತರಾದ ಲತಾ ಸುಧೀರ್ ಶೆಟ್ಟಿ ದಂಪತಿ ಪಾದ ಪುಜೆ ನೆರವೆರಿಸಿದರು.

ಶ್ರೀಗಳ ಭೇಟಿ:ರಾತ್ರಿಯ ವೇಳೆ ಶ್ರೀ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನಕ್ಕೆ ಆಗಮಿಸಿದರು. ಶ್ರೀ ಜ್ಞಾನಮಂದಿರಕ್ಕಾಗಮಿಸಿದ ಶ್ರೀಗಳಿಗೆ ಸೇವಾಕರ್ತ ಸುಧೀರ್ ಶೆಟ್ಟಿ ದಂಪತಿ ಪಾದಪೂಜೆಯನ್ನು ನೆರವೇರಿಸಿದರು. ಬಳಿಕ ಶ್ರೀ ಶ್ರೀಗಳು ನೆರೆದವರಿಗೆ ಅನುಗ್ರಹ ಮಂತ್ರಾಕ್ಷತೆಯನ್ನಿತ್ತು ಹರಸಿದರು.