ಸಾಲಮೇಳ ಯೋಜನೆ ಸ್ವಾಗತಾರ್ಹ-ಇನ್ನ ಉದಯ ಶೆಟ್ಟಿ

ಪಡುಬಿದ್ರಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ರಾಷ್ಟ್ರೀಕೃತ ಬ್ಯಾಂಕ್‍ಗಳ ಮೂಲಕ ನಡೆಸಲು ಉದ್ದೇಶಿರುವ ಸಾಲ ಮೇಳ ಯೋಜನೆಯು ಅತ್ಯಂತ ಪ್ರಸ್ತುತವಾದುದು. ಈ ಮೂಲಕ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ ಸಹಕಾರಿಯಾಗಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಕೈಗಾರಿಕಾ ಪ್ರಕೋಷ್ಠದ ಸಂಚಾಲಕ ಉದಯ ಕುಮಾರ್ ಶೆಟ್ಟಿ ಇನ್ನ ಹೇಳಿದ್ದಾರೆ.

ಸಾಲ ಮೇಳ ಯೋಜನೆಯಿಂದ ಸ್ವ ಉದ್ಯಮ ನಿರ್ವಹಿಸುವ ಆಸಕ್ತರಿಗೆ ಸುಲಭವಾಗಿ ಸಾಲ ದೊರೆಯಲಿದೆ. ಈ ಮೂಲಕ ಸ್ವ-ಉದ್ಯೋಗಕ್ಕೆ ಅವಕಾಶವಾಗುವುದಲ್ಲದೆ ಉದ್ಯೋಗ ಸೃಷ್ಟಿಯೂ ಸಾಧ್ಯವಿದೆ. ಈ ನಿಟ್ಟಿನಲ್ಲಿ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ. ಈಗಿನ ಪರಿಸ್ಥಿತಯಲ್ಲಿ ಬೇರೆ ಬೇರೆ ಉದ್ಯಮ ನಡೆಸಲು ಯುವಕರಲ್ಲಿ ಆಸಕ್ತಿ ಹಾಗೂ ಕೌಶಲ್ಯವಿದ್ದರೂ ಬಂಡವಾಳ ಹೊಂದಾಣಿಕೆಯೇ ಸಮಸ್ಯೆಯಾಗಿತ್ತು. ಸಾಲ ಮೇಳದ ಮೂಲಕ ಸ್ವ ಉದ್ಯೋಗ ಮಾಡುವ ಜನರನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ. ಮತ್ತು ಯುವ ಜನತೆ ಆತ್ಮ ವಿಶ್ವಾಸದೊಂದಿಗೆ ಕೈಗಾರಿಕಾ ಕ್ಷೇತ್ರಕ್ಕೆ ಧುಮುಕಿ ಈ ಯೋಜನೆಯ ಮೂಲಕ ಅಭಿವೃದ್ಧಿ ಸಾಧಿಸಿ ರಾಷ್ಟ್ರದ ಪ್ರಗತಿಗೆ ತಮ್ಮ ಕೊಡುಗೆ ನೀಡಲು ಸಹಕಾರಿಯಾಗುತ್ತದೆ ಎಂದವರು ತಿಳಿಸಿದ್ದಾರೆ.