ಸಾರ್ವಜನಿಕ ಸ್ಮಶಾನ ಸ್ವಚ್ಛತಾ ಕಾರ್ಯಕ್ರಮ

ಪಡುಬಿದ್ರಿ ಸಮೀಪದ ಹೆಜಮಾಡಿಯ ಗುಂಡಿ ಮೊಗವೀರ ಮಹಾಸಭಾ ವತಿಯಿಂದ ಭಾನುವಾರ ಸಾರ್ವಜನಿಕ ಸ್ಮಶಾನ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಸ್ಮಶಾನದಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನೂ ಆಚರಿಸಲಾಯಿತು. ಮಹಾಸಭಾ ಗುರಿಕಾರರಾದ ಲೋಕನಾಥ ಗುರಿಕಾರ, ಆನಂದ ಸುವರ್ಣ, ಕಾರ್ಯದರ್ಶಿ ಅಶೋಕ್ ವಿ.ಕೆ., ಮಹಿಳಾ ಸಭಾ ಅಧ್ಯಕ್ಷೆ ಶಾಂತಾ ಕೋಟ್ಯಾನ್, ಕಾರ್ಯದರ್ಶಿ ಚಂದ್ರಾಕ್ಷಿ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.