ಸಾಮಾಜಿಕವಾಗಿ ಸೋಮಪ್ಪ ಸುವರ್ಣರ ಸೇವೆ ಸ್ಮರಣೀಯವಾದುದು-ಅಭಯಚಂದ್ರ ಜೈನ್

ಮೂಲ್ಕಿ: ಕೃಷಿ,ಶಿಕ್ಷಣ ಕ್ಷೇತ್ರ, ಸಾಮಾಜಿಕ ಹಾಗೂ ರಾಜಕೀಯ ಸಂಘಟನೆಯಲ್ಲಿ ಅಪ್ರತಿಮ ಸಾಧಕರಾಗಿ ಸೋಮಪ್ಪ ಸುವರ್ಣರು ಮಾಡಿದ ಸಾಮಾಜಿಕ ಸೇವೆ ಸ್ಮರಣೀಯವಾದುದು ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಕೆ.ಸೋಮಪ್ಪ ಸುವರ್ಣ ನೆರಳು ನೆನಪು ಸಮಿತಿಯ ವತಿಯಿಂದ ನಡೆದ ಸೋಮಪ್ಪ ಸುವರ್ಣರ ಏಳನೇ ವರ್ಷದ ಸಂಸ್ಮರಣೆ ಹಾಗೂ 2019 ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜೈನ್ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಪೂರ್ವ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿ ನಿಂತು ಪ್ರತಿಫಲಾಪೇಕ್ಷೆ ಇಲ್ಲದೆ ದುಡಿದ ಸುವರ್ಣರ ಕಾರ್ಯ ವೈಖರಿ ಅವಿಸ್ಮರಣೀಯ ಅವರು ಶಿಕ್ಷಣ ಕೃಷಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅನನ್ಯ,ಅವರ ಸಂಸ್ಮರಣೆ ಔಚಿತ್ಯಪೂರ್ಣವಾದುದು ಎಂದರು.

ಹಿರಿಯ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಸಂಸ್ಮರಣಾಶ ಭಾಷಣ ಮಾಡಿದರು.ಅತಿಥಿಯಾಗಿ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪೀನಾಥ ಪಡಂಗ ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ: ಈ ಸಂದರ್ಭ ಸುವರ್ಣರ ನೆನಪಿನಲ್ಲಿ ನೀಡಲಾಗುವ 2019 ಸಾಲಿನ ಶಿಕ್ಷಣ ಕ್ಷೇತ್ರದ ಸಾಧಕ ಪ್ರಶಸ್ತಿಯನ್ನು ರಾಜೇಂದ್ರ ಕುಮಾರ್ ಎಕ್ಕಾರು ಪಡೆದರು. ಕೃಷಿ ಕ್ಷೇತ್ರದ ಸಾಧನೆಗಾಗಿ ನಾರಾಯಣ ಕೋಟ್ಯಾನ್‍ರವರನ್ನು ಪ್ರಶಸ್ತ್ತಿ ನೀಡಿ ಗೌರವಿಸಲಾಯಿತು. ಸಮಾಜ ಸೇವಾ ಕ್ಷೇತ್ರದ ಸಾಧಕಿ ವೀಣಾ ಕಾಮತ್ ರವರನ್ನು ಪ್ರಶಸ್ತ್ತಿ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿವೇತನ ವಿತರಣೆ: ವಿದ್ಯಾರ್ಥಿಗಳಾದ ಅನುಷಾ,ಶರಣ್,ಅಶ್ವಿನಿ,ಪ್ರಶಾಂತ್,ನಿಖಿತಾ,ಗಾಯನ,ಮನೋಜ್,ನವನೀತ್,ವಿಕಾಸ್,ತರುಣ್,ಕೌಶಿಕ್, ತನ್ವಿತಾ,ಸುಹಾಸ್ ಆಚಾರ್ಯ,ಕೌಶಿಕ್ ಕಲ್ಲಬೆಟ್ಟುರವರಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ಧನ ಸಹಾಯ ವಿತರಣೆ: ಸಸಿಹಿತ್ಲು ಅಗ್ಗಿದಕಳಿಯ ಬಿಲ್ಲವ ಸಂಘಕ್ಕೆ ಧನ ಸಹಾಯ ಹಾಗೂ ಮೂಲ್ಕಿ ಸರಕಾರಿ ಮೋಡೆಲ್ (ಬೋರ್ಡು ಶಾಲೆಯ) ಶಿಕ್ಷಕರ ವೇತನಕ್ಕಾಗಿ ಧನ ಸಹಾಯ ಹಸ್ತಾಂತರಿಸಲಾಯಿತು.

ಜೊಸ್ಸಿ ಪಿಂಟೋ ಸ್ವಾಗತಿಸಿದರು.ಪ್ರಮೋದ್ ಕುಮಾರ್ ಪ್ರಸ್ತಾವಿಸಿದರು. ವೈಎನ್ ಸಾಲ್ಯಾನ್ ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು. ಉದಯ ಅಮೀನ್ ಮಟ್ಟು ಕಾರ್ಯಕ್ರಮ ನಿರ್ವಹಿಸಿದರು.