ಸಹಾಯಧನ ಚೆಕ್ ಹಸ್ತಾಂತರ

ಪಡುಬಿದ್ರಿ: ಬೈಕ್ ಅಪಘಾತದಲ್ಲಿ ಇತ್ತೀಚೆಗೆ ಮೃತಪಟ್ಟ ಪತ್ರಿಕಾ ವಿತರಕ, ಪಡುಬಿದ್ರಿ ಸುಜ್ಲಾನ್ ಪುನರ್ವಸತಿ ಕೇಂದ್ರ ಬಳಿ ನಿವಾಸಿ ಅಶ್ವಿತ್ ಕುಟುಂಬಕ್ಕೆ ಸಾರ್ವಜನಿಕರು, ಪತ್ರಿಕಾ ಏಜೆಂಟ್, ವಿತರಕರು ಸಂಗ್ರಹಿಸಿದ ರೂ.21,000 ಮೊತ್ತದ ಸಹಾಯಧನದ ಚೆಕ್ ಅನ್ನು ಪತ್ರಿಕಾ ಏಜೆಂಟ್ ಬಾಬು ಪೂಜಾರಿಯವರು ಮೃತನ ಪಾಲಕರಿಗೆ ಮಂಗಳವಾರ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಬಾಬು ಪೂಜಾರಿ, ಬಡ ಕುಟುಂಬದಲ್ಲಿ ಹುಟ್ಟಿ ಕಠಿಣ ಪರಿಶ್ರಮದಿಂದ ದುಡಿದು ಪಾಲಕರಿಗೆ ಆಧಾರವಾಗಿದ್ದ ಅಶ್ವಿತ್ ಅಕಾಲಿಕ ಸಾವು ನಮಗೆಲ್ಲರಿಗೂ ನೋವು ತಂದಿದೆ. ಬಡ ಕುಟುಂಬದ ಕಣ್ಣೀರೊರೆಸುವಲ್ಲಿ ಶಾಲಾ ಮಕ್ಕಳು ಸಹಿತ ಸಾರ್ವಜನಿಕರು 1 ರೂಪಾಯಿಂದ 1,500 ವರೆಗೆ ಸಹಾಯವನ್ನು ನೀಡಿ ಸಹಕರಿಸಿದ್ದಾರೆ ಎಂದರು.

ಪತ್ರಿಕಾ ವಿತರಕರಾದ ಲತೇಶ್ ಕಂಚಿನಡ್ಕ, ಯೋಗೀಶ್ ಪಡುಬಿದ್ರಿ, ದಾವೂದ್ ಹಕೀಂ, ಶಶಿಕಾಂತ್ ಪೂಜಾರಿ, ಉಪಸ್ಥಿತರಿದ್ದರು.
ವಿಶ್ವಹಿಂದೂ ಪರಿಷದ್, ಭಜರಂಗದಳ ಪಡುಬಿದ್ರಿ ಘಟಕದಿಂದ ರೂ 10,000 ಹಾಗೂ ಭಗವತಿ ಪ್ರೆಂಡ್ಸ್‍ನಿಂದ ರೂ. 10,000 ಸಹಾಯವನ್ನು ಇತ್ತೀಚೆಗೆ ಮೃತನ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು.

ಫೋಟೋ: ಕ್ಯಾ: ಸಾರ್ವಜನಿಕರಿಂದ ಸಂಗ್ರಹಿಸಿದ ಸಹಾಯಧನ ಚೆಕ್ ಅನ್ನು ಪತ್ರಿಕಾ ಏಜೆಂಟ್ ಬಾಬು ಪೂಜಾರಿ ಅಶ್ವಿತ್ ಪಾಲಕರಿಗೆ ಹಸ್ತಾಂತರಿಸಿದರು.