ಸರ್ದಾರ್ ವಲ್ಲಭಬಾಯಿ ಪಠೇಲ್ ಭಾರತದ ಏಕತೆಯ ಪ್ರತೀಕ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಹೆಜಮಾಡಿಯಲ್ಲಿ ಸರ್ದಾರ್ ಜನ್ಮದಿನದ ಅಂಗವಾಗಿ ಬಿಜೆಪಿ ಏಕತೆಗಾಗಿ ಓಟ' ಪಡುಬಿದ್ರಿ: ಭಾರತದ ಅಖಂಡತೆ ಮತ್ತು ಸಂವಿಧಾನವನ್ನು ಉಳಿಸಿದ ನೇತಾರರಾದ ಸರ್ದಾರ್ ವಲ್ಲಭಬಾಯಿ ಪಠೇಲ್‌ರವರ ಜನ್ಮ ದಿನದ ಅಂಗವಾಗಿ ದೇಶಾದ್ಯಂತ ಇಂದು ಏಕತಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ರಾಷ್ಟçದ ಏಕತೆಯ ಪ್ರತೀಕವಾಗಿರುವ ಅವರ ಬಗೆಗಿನ ಚಿಂತನೆಯ ಹಾದಿಯಲ್ಲಿ ಭಾರತವನ್ನು ಒಂದುಗೂಡಿಸುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನ ಏಕತಾ ದಿನಾಚರಣೆಯ ಮೂಲಕ ಗೈದಿರುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಹೆಜಮಾಡಿಯಲ್ಲಿ ಅ. ೩೧ರಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಕಾಪು ಮಂಡಲದ ಸಹಯೋಗದಲ್ಲಿ ಏರ್ಪಡಿಸಲಾದಏಕತೆಗಾಗಿ ಓಟ’ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಓಟದಲ್ಲಿ ಭಾಗವಹಿಸಿ ಹೆಜಮಾಡಿ ಪೇಟೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ದೇಶದ ಸ್ವಾತಂತ್ರö್ಯಕ್ಕಾಗಿ ಒಂದು ದಿನ ಹೋರಾಡಿದವನಿಗೂ ಭಾರತ ರತ್ನ ನೀಡಬೇಕು. ಸಾರ್ವಕರ್ ಬಗ್ಗೆ ಕೆಟ್ಟದಾಗಿ ಮಾತಾಡುವವರು ರಾಷ್ಟ ವಿರೋಧಿಗಳು. ಸರ್ದಾರ್, ಸಾರ್ವರ್ಕರ್‌ರಂತಹ ದೇಶ ಪ್ರೇಮಿಗಳ ತ್ಯಾಗ, ಬಲಿದಾನವನ್ನು ಅನುಸರಿಸುತ್ತಾ ಮುನ್ನಡೆಯೋಣ. ಇದು ಅವರೆಲ್ಲರಿಗೂ ನಾವು ನೀಡಬಹುದಾದ ಮಹಾನ್ ಯೋಗದಾನವೆಂಬುದಾಗಿಯೂ ನಳಿನ್ ಈ ಸಂದರ್ಭದಲ್ಲಿ ನುಡಿದರು.

ರಾಜ್ಯಾಧ್ಯಕ್ಷ ನಳಿನ್ ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅವರಿಗೆ ತ್ರಿವರ್ಣ ಧ್ವಜವನ್ನು ಹಸ್ತಾಂತರಿಸಿ ಏಕತಾ ಓಟಕ್ಕೆ ಚಾಲನೆಯನ್ನು ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್‌ರತ್ನಾಕರ ಹೆಗ್ಡೆ ಅವರು ಮಾತನಾಡಿ ಸರ್ದಾರ್ ಜನ್ಮದಿನದ ಅಂಗವಾಗಿ ನಡೆಸಲಾಗುತ್ತಿರುವ ಏಕತಾ ಓಟದಲ್ಲಿ ರಾಷ್ಟçದ ಐಕ್ಯತೆಗಾಗಿ ಎಲ್ಲರೂ ಭಾಗವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್, ಉಡುಪಿ ಶಾಸಕ ರಘುಪತಿ ಭಟ್, ಕಾರ್ಕಳ ಶಾಸಕ ಸುನಿಲ್‌ಕುಮಾರ್, ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಉಡುಪಿ ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್, ದ.ಕ., ಬಿಜೆಪಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ದ.ಕ. ಬಿಜೆಪಿ ಪ್ರಭಾರಿ ಉದಯ ಕುಮಾರ್ ಶೆಟ್ಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ ಕುತ್ಯಾರ್, ಜಿಲ್ಲಾ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ಸುಪ್ರಸಾದ್ ಶೆಟ್ಟಿ, ಉಡುಪಿ ಜಿ. ಪಂ. ಸದಸ್ಯರಾದ ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ರೇಶ್ಮಾ ಉದಯ ಶೆಟ್ಟಿ, ಶಶಿಕಾತ್ ಪಡುಬಿದ್ರಿ, ಮೂಲ್ಕಿ ಮೂಡುಬಿದಿರೆ ಕ್ಷೇತ್ರಾಧ್ಯಕ್ಷ ಈಶ್ವರ್ ಕಟೀಲ್, ಭುವನಾಭಿರಾಮ ಉಡುಪ, ಆದರ್ಶ್ ರೈ, ಸುನಿಲ್ ಆಳ್ವ, ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಪ್ರವೀಣ್ ಪೂಜಾರಿ, ಮಾಜಿ ಜಿ. ಪಂ. ಸದಸ್ಯ ಸಂತೋಷ್ ಬೊಳಿಯಾರ್, ಶಂಭುದಾಸ್ ಗುರೂಜಿ, ಕೈಗಾರಿಕಾ ಪ್ರಕೋಷ್ಠದ ಉದಯ ಕುಮಾರ್ ಶೆಟ್ಟಿ ಇನ್ನ, ಮಿಥುನ್ ಆರ್. ಹೆಗ್ಡೆ, ಗಂಗಾಧರ ಸುವರ್ಣ, ಪ್ರಸಾದ್ ಕುತ್ಯಾರ್, ಪವಿತ್ರಾ ಶೆಟ್ಟಿ, ವೀಣಾ ಶೆಟ್ಟಿ, ಗಾಯತ್ರಿ ಪ್ರಭು, ಕಿಶೋರ್ ರೈ, ಸತ್ಯೇಂದ್ರ ಶೆಣೈ, ಶೈಲೇಶ್ ಕುಮಾರ್, ಕಿಶೋರ್ ರೈ, ಸುದರ್ಶನ್ ಬಿಜೆಪಿ ಕಾರ್ಯಕರ್ತರು ಮತ್ತಿತರಿದ್ದರು.
ಮಹಾ ಶಕ್ತ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟ ಎಲ್ಲದಡಿ ಸ್ವಾಗತಿಸಿದರು. ಶgಣ್‌ಕುಮಾರ್ ಮಟ್ಟು ಕಾರ್ಯಕ್ರಮ ನಿರ್ವಹಿಸಿದರು.