ಸಮುದಾಯದ ಅಭಿವೃದ್ಧಿಗೆ ಶಿಕ್ಷಣವೇ ಪ್ರಧಾನ

ಪಡುಬಿದ್ರಿ: ಸಮುದಾಯದ ಸ್ಥೂಲ ಅಭಿವೃದ್ಧಿಗೆ ಶಿಕ್ಷಣವೇ ಪ್ರಧಾನವಾಗಿದ್ದು, ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡಲು ಸಮುದಾಯದ ಮುಖಂಡರು ಆದಾಯದ ಒಂದು ಅಂಶವನ್ನು ಮೀಸಲಿಡಬೇಕು ಎಂದು ಕೇರಳದ ಹಾಫಿಳ್ ಸಿರಾಜುದ್ದೀನ್ ಅಲ್ ಖಾಸಿಮಿ ಪತ್ತನಾಪುರಂ ಹೇಳಿದ್ದಾರೆ.

ಪಡುಬಿದ್ರಿಯ ಶಂಸುಲ್ ಉಲಮಾ ಅಕಾಡೆಮಿ ಆಫ್ ಇಸ್ಲಾಮಿಕ್ ಮತ್ತು ಜನರಲ್ ಎಜ್ಯುಕೇಶನ್ ವತಿಯಿಂದ ಹೆಜಮಾಡಿಯ ಬಸ್ತಪಡ್ಪು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ “ಶೈಕ್ಷಣಿಕ ಸಬಲೀಕರಣದತ್ತ ಸಮುದಾಯ” ಸಮಸ್ತ ಶೈಕ್ಷಣಿಕ ಮಹಾ ಸಮಾವೇಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಸ್ಲಾಂ ಧರ್ಮವು ಶಿಕ್ಷಣಕ್ಕೆ ಒತ್ತು ನೀಡಿದೆ. ಶಿಕ್ಷಣವೇ ಮುಸ್ಲಿಮರ ಅಸ್ತ್ರವಾಗಬೇಕು. ಶಿಕ್ಷಣದಿಂದ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆಧುನೀಕರಣದೊಂದಿಗೆ ಸಶಸ್ತ್ರೀಕರಣಗೊಳಿಸುವುದು ಇಂದಿನ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ಶಂಸುಲ್ ಉಲಮಾ ಅಕಾಡೆಮಿ ಹಮ್ಮಿಕೊಂಡಿರುವ ಶೈಕ್ಷಣಿಕ ಸಮ್ಮೇಳನ ಅತ್ಯಂತ ಪ್ರಶಂಸನೀಯವಾಗಿದ್ದು, ಸಮುದಾಯದ ನೇತಾರರು ಈ ಸಂಸ್ಥೆಯೊಂದಿಗೆ ಕೈಜೋಡಿಸಿ ಉಡುಪಿ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಕೆ.ಎಸ್. ಆಲಿ ತಂಙಳ್ ಕುಂಬೋಳ್ ಮಾತನಾಡಿ, ಭಾರತದ ಜಾತ್ಯಾತೀತ ಪರಂಪರೆಯನ್ನು ಉಳಿಸಲು ಶಿಕ್ಷಣ ಒಂದೇ ಅಸ್ತ್ರವಾಗಿದ್ದು, ಸಮುದಾಯದ ಎಲ್ಲರನ್ನೂ ಸುಶಿಕ್ಷಿತರನ್ನಾಗಿಸಲು ಸರ್ವರೂ ಪ್ರಯತ್ನಿಸುವಂತೆ ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬೊಳ್ಳೂರು ಜುಮ್ಮಾ ಮಸೀದಿ ಖತೀಬ್ ಅಲ್‍ಹಾಜ್ ಮುಹಮ್ಮದ್ ಅಝ್‍ಹರ್ ಫೈಝಿ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾಪು ತಹಶೀಲ್ದಾರ್ ಮುಹಮ್ಮದ್ ಇಸ್ಹಾಕ್, ಚೊಕ್ಕಬೆಟ್ಟು ಖತೀಬ್ ಮೌಲಾನಾ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ, ಮೂಲ್ಕಿ ಕೇಂದ್ರ ಶಾಫಿ ಜುಮ್ಮಾ ಮಸೀದಿ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.

ಸ್ಮರಣ ಸಂಚಿಕೆ ಬಿಡಿಗಡೆ: ಶಂಸುಲ್ ಉಲಮಾ ಅಕಾಡೆಮಿ ಆಫ್ ಇಸ್ಲಾಮಿಕ್ ಮತ್ತು ಜನರಲ್ ಎಜ್ಯುಕೇಶನ್ ಹೊರತಂದ “ಸ್ಪೂರ್ತಿಯ ಚಿಲುಮೆ” ಸ್ಮರಣ ಸಂಚಿಕೆಯನ್ನು ಸಿರಾಜುದ್ದೀನ್ ಅಲ್ ಖಾಸಿಮಿ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಹಲವು ಸಾಧಕರನ್ನು ಸನ್ಮಾನಿಸಲಾಯಿತು

ಜಿಲ್ಲಾ ಕೆಎಂಡಿಸಿ ವ್ಯವಸ್ಥಾಪಕ ಮುಹಮ್ಮದ್ ಸಫ್ವಾನ್, ಇನ್ನಾ ಜಾಮಿಯ ಮಸೀದಿ ಖತೀಬ್ ಕೆ.ಎಂ. ಅಬ್ದುಲ್ ರಹ್ಮಾನ್ ಫೈಝಿ, ಎರ್ಮಾಳು ಜಾಮಿಯ ಮಸೀದಿ ಖತೀಬ್ ಶಬ್ಬೀರ್ ಫೈಝಿ, ಕಾಪು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಶಭೀ ಕಾಝಿ, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಪಿ. ಇಬ್ರಾಹಿಂ, ಮಂಗಳೂರು ಕೇಂದ್ರ ಜುಮ್ಮಾ ಮಸೀದಿ ಖತೀಬ್ ಸದಕತುಲ್ಲಾ ಫೈಝಿ, ವಕ್ಫ್ ಸಲಹಾ ಸಮಿತಿ ಸದಸ್ಯ ಮನಾಫ್ ಕಂಡ್ಲೂರು, ಮಣಿಪಾಲ ಕೆಎಂಸಿ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಯು.ಕೆ.ಅಬ್ದುಲ್ ರಝಾಕ್, ಹಾಜಿ ಶೇಖಬ್ಬ ಕಣ್ಣಂಗಾರ್, ಅಬೂಸಾಲಿಹ್ ಹಾಜಿ ಕಣ್ಣಂಗಾರ್, ನೌಶಾದ್ ಹಾಜಿ ಸೂರಲ್ಪಾಡಿ, ಎಸ್.ಎಸ್.ಹನೀಫ್ ಗುಲ್ವಾಡಿ, ಹಾಜಿ ಅಕ್ರಂ ಅಬ್ದುಲ್ ಖಾದರ್ ಮೂಡಿಗೆರೆ, ಮೂಡಿಗೆರೆ ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಎಂ.ಅಬ್ದುಲ್ಲಾ, ಹಾಜಿ ಕೆ.ಐ.ಮೊಯಿದಿನ್ ಕುಟ್ಟಿ, ಯೂಸುಫ್ ಹೈದರ್ ತೀರ್ಥಹಳ್ಳಿ, ಪಡುಬಿದ್ರಿ ಉರ್ದು ಶಾಲಾ ಸಂಚಾಲಕ ಶಬ್ಬೀರ್ ಹುಸೈನ್, ಪಡುಬಿದ್ರಿ ದಲಿತ ಮುಖಂಡ ಶೇಖರ್ ಹೆಜಮಾಡಿ, ರೋಟರಿ ಕ್ಲಬ್ ಅಧ್ಯಕ್ಷ ರಿಯಾಝ್ ಮುದರಂಗಡಿ, ಹಾಜಿ ಇಜ್ಜಬ್ಬಾ ಎರ್ಮಾಳು, ಹಾಜಿ ಅಬ್ದುಲ್ಲಾ ಬೆಳ್ತಂಗಡಿ, ಝಕರಿಯಾ ಕಾರ್ಕಳ, ಇಸ್ಮಾಯಿಲ್ ಆತ್ರಾಡಿ, ಮನ್ಸೂರ್ ಮಂಗಳೂರು, ಅಬ್ದುಲ್ ರಹ್ಮಾನ್ ಇನ್ನಾ, ಮುಹಿಯುದ್ದೀನ್ ರೆಂಜಾಳ, ಟಿ.ಎಚ್.ಹಂಝತ್ ಫೈಝಿ ತೋಡಾರ್, ಫಾರೂಕ್ ಹನೀಫ್, ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಕಿರ್ ಅಝ್‍ಹರಿ, ಮದರಸ ಮ್ಯಾನೇಜ್‍ಮೆಂಟ್ ಅಧ್ಯಕ್ಷ ಮುಹಿಯುದ್ದೀನ್ ನಿಟ್ಟೆ, ಹಾಜಿ ಅಬ್ದುಲ್ ರಝಾಕ್ ಸಚ್ಚರಿಪೇಟೆ, ಮೌಲಾನಾ ಮುಹಮ್ಮದ್ ಝಕೀರ್ ಮುದರಂಗಡಿ, ಎಸ್ಕೆಎಸ್‍ಎಸ್‍ಎಫ್ ಜಿಲ್ಲಾಧ್ಯಕ್ಷ ಆಸೀಫ್ ಹನ್ನಾನ್, ಇಸ್ಮಾಯಿಲ್ ದಾರಿಮಿ ಕಾರ್ನಾಡ್, ಕೆ.ಎ.ಇಸ್ಮಾಯಿಲ್ ಕಂಚಿನಡ್ಕ, ಮುಹಮ್ಮದ್ ಶರೀಫ್ ದಾರಿಮಿ ಕೊಲ್ನಾಡು, ಶಂಶುಲ್ ಉಲಮಾ ಅರೆಬಿಕ್ ಕಾಲೇಜು ಪ್ರಾಂಶುಪಾಲ ರಫೀಕ್ ಹುದವಿ, ಕೆ.ಎಸ್.ಸಯ್ಯದ್ ಆಲಿ ಕಣ್ಣಂಗಾರ್, ಶಂಶುಲ್ ಉಲಮಾ ಅಕಾಡೆಮಿ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಶಂಶುದ್ದೀನ್ ಲಚ್ಚಿಲ್, ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಸೂಫಿ, ಕಾರ್ಯದರ್ಶಿ ಹಾಜಿ ಹಮ್ಮಬ್ಬ ಮೊಯಿದಿನ್, ಸದಸ್ಯರಾದ ಸಿರಾಜುದ್ದೀನ್ ಲಚ್ಚಿಲ್, ಸ್ವಾಲಿಹ್ ಕಣ್ಣಂಗಾರ್, ಮುಹಿಯುದ್ದೀನ್ ಪಂಬತೋಟ, ಸುಲೈಮಾನ್ ಹಾಜಿ ಎರ್ಮಾಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಂಶುಲ್ ಉಲಮಾ ಅಕಾಡೆಮಿ ಕಾರ್ಯದರ್ಶಿ ಎಂ.ಪಿ.ಮೊಯಿದಿನಬ್ಬ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ತೋಡಾರು ಶಂಸುಲ್ ಉಲಮಾ ಅರೆಬಿಕ್ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು. ರೆಂಜಾಳ ಮುಹಿಯುದ್ದೀನ್ ವಂದಿಸಿದರು.