ಸಂಘ ಶಕ್ತಿ ಯುಗೇ ಯುಗೇ – ಹೆಜಮಾಡಿ ರಂಪಣಿ ಫಂಡ್(ಎಚ್‍ಆರ್‍ಎಫ್)

ಸಂಘ ಶಕ್ತಿ ಯುಗೇ ಯುಗೇ
40 ವರ್ಷಗಳ ಯಶಸ್ವೀ ಜೈತ್ರಯಾತ್ರೆ ಮುಂದುವರಿಸುತ್ತಿರುವ ಸಹಕಾರಿ ಮಾಲೀಕತ್ವದ ಹೆಜಮಾಡಿ ರಂಪಣಿ ಫಂಡ್(ಎಚ್‍ಆರ್‍ಎಫ್)

ಎಚ್ಕೆ ಹೆಜ್ಮಾಡಿ,ಪಡುಬಿದ್ರಿ

40 ವರ್ಷಗಳ ಹಿಂದೆ 20 ಸಾವಿರ ಸೀಡ್ ಮನಿಯೊಂದಿಗೆ ಸಹಕಾರಿ ತತ್ವದಡಿ 78 ಜನ ಪಾಲುದಾರರು ಆರಂಭಿಸಿದ ಹೆಜಮಾಡಿ ರಂಪಣಿ ಫಂಡ್(ಎಚ್‍ಆರ್‍ಎಫ್)ನ 2 ಪರ್ಸೀನ್ ಬೋಟ್‍ಗಳು ಇಂದು ಬಲಿಷ್ಠ ಸಂಸ್ಥೆಯಾಗಿ ಕರ್ನಾಟಕ ಕರಾವಳಿಗೆ ಮಾದರಿಯಾಗಿ ಮುನ್ನಡೆಯುತ್ತಿದೆ.

ಸಾಂಪ್ರದಾಯಿಕ ಮೀನುಗಾರಿಕೆಯಾದ ರಂಪಣಿಗಳು 70ರ ದಶಕದವರೆಗೆ ಕರ್ನಾಟಕ ಕರಾವಳಿಯ ಪ್ರಮುಖ ಮೀನುಗಾರಿಕಾ ಉದ್ಯಮವಾಗಿ ಗುರುತಿಕೊಂಡಿದ್ದ ಕಾಲಘಟ್ಟದಲ್ಲಿ ರಾಜ್ಯ ಕರಾವಳಿಗೆ ಕಾಲಿಟ್ಟ ಯಾಂತ್ರೀಕೃತ ಮೀನುಗಾರಿಕೆ ರಂಪಣಿಗಳನ್ನು ಸರ್ವನಾಶ ಮಾಡಿತ್ತು.

ಮೀನುಗಾರಿಕೆಯನ್ನೇ ಜೀವನಾಡಿಯಾಗಿಸಿಕೊಂಡಿದ್ದ ಬಡ ಮೀನುಗಾರರು ಕಂಗಾಲಾದ ಕಾಲಘಟ್ಟದಲ್ಲಿ ರಾಜ್ಯ ಸರಕಾರದ ಮೀನುಗಾರಿಕಾ ಇಲಾಖೆಯು ರಂಪಣಿ ಮೀನುಗಾರರಿಗೆ ಯಾಂತ್ರೀಕೃತ ಪರ್ಸೀನ್ ಮೀನುಗಾರಿಕೆಯನ್ನು ನೀಡತೊಡಗಿತು.
ಕಾರವಾರದಿಂದ ತಲಪಾಡಿವರೆಗಿನ 64 ರಂಪಣಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಹಕಾರಿ ತತ್ವದನ್ವಯ ಪರ್ಸೀನ್ ಬೋಟುಗಳನ್ನು ನೀಡಲಾಯಿತು.ಈ ಸಂದ`ರ್À ಕರಾವಳಿಯ 52 ರಂಪಣಿಗಳಿಗೆ ಪರ್ಸೀನ್ ಬೋಟ್ ಮಂಜೂರಾಯಿತು.ರಂಪಣಿಯಲ್ಲಿ ದುಡಿಯುತ್ತಿದ್ದ ಉತ್ಸಾಹಿ ಮೀನುಗಾರರನ್ನು ಸಹಕಾರಿ ತತ್ವದಂತೆ ಪಾಲುದಾರರನ್ನಾಗಿಸಲಾಗಿತ್ತು.

ಇಂತಹ ಸಂದ`ರ್Àದಲ್ಲಿ ಹೆಜಮಾಡಿಯ 3 ರಂಪಣಿಗಳು ಹೆಜಮಾಡಿ,ಬಪ್ಪನಾಡು ಮತ್ತು ಗುಂಡಿ ರಂಪಣಿಗಳಿಗೆ ಪರ್ಸೀನ್ ಬೋಟು ಮಂಜೂರಾಗಿತ್ತು.

1978ರಲ್ಲಿ ಹೆಜಮಾಡಿ ರಂಂಪಣಿ ಫಂಡ್(ಎಚ್‍ಆರ್‍ಎಫ್)ಗೆ ಮಂಜೂರಾದ ಪರ್ಸೀಣ್ ಬೋಟು ಹೊರತುಪಡಿಸಿ ಬೇರೆ ಯಾವ ರಂಪಣಿ ಫಂಡಿನ ಪರ್ಸೀನ್‍ಗಳು ಇಂದು ಕಾರ್ಯಾಚರಿಸುತ್ತಿಲ್ಲ. ಹಿರಿಯರ ಮಾರ್ಗದರ್ಶನ,ಯುವಕರ ಉತ್ಸಾಹ ಮತ್ತು ಬದಲಾಗುತ್ತಿರುವ ಮೀನುಗಾರಿಕೆಗೆ ತಕ್ಕಂತೆ ನಿರಂತರ ಬದಲಾವಣೆಗಳ ಮೂಲಕ ರಾಜ್ಯ ಕರಾವಳಿಗೆ ಏಕೆ`ಕ ರಂಪಣಿ ಫಂಡಿನ ಪರ್ಸೀನ್ ಆಗಿ ಹೆಜಮಾಡಿ ರಂಂಪಣಿ ಫಂಡ್ ಯಶಸ್ವಿಯಾಗಿ ಮುಂದಡಿಯಿಡುತ್ತಿದೆ.
40 ವರ್ಚಗಳ ಹಿಂದೆ ಸೀಡ್ ಮನಿಯಾಗಿ ಫಂಡಿನಿಂದ 20ಸಾವಿರ ರೂಪಾಯಿಯೊಂದಿಗೆ ಕೇವಲ 4 ಲಕ್ಷ ರೂಪಾಯಿಗೆ ಒಂದು ಪರ್ಸೀನ್ ಬೋಟ್ ಆರಂಭಿಸಿದ ಹೆಜಮಾಡಿ ರಂಪಣಿ ಫಂಡ್‍ನವರು ಇಂದು ನಾಲ್ಕೆ`ದು ಕೋಟಿ ಬೆಲೆ ಬಾಳುವ ಎರಡು ಪರ್ಸೀನ್ ಮತ್ತು ಎರಡು ಮೀನು ಸಾಗಾಟದ ಸಹಾಯಕ ಬೋಟ್(ಕ್ಯಾರಿಯರ್)ಗಳ ಮಾಲೀಕರಾಗಿದ್ದಾರೆ.
ಆರಂ`Àದಲ್ಲಿ 78 ಸದಸ್ಯರೊಂದಿಗೆ ಪರ್ಸೀನ್ ಆರಂಭಿಸಿದ ಎಚ್‍ಆರ್‍ಎಫ್ ಸಂಸ್ಥೆ ಎರಡೇ ವರ್ಷಗಳಲ್ಲಿ ಎರಡನೇ ಪರ್ಸೀನ್ ಆರಂಭಿಸಿದ್ದು ದಾಖಲೆಯಾಗಿದೆ.

ಟಾಪ್ ಟೆನ್‍ನಲ್ಲಿ ನಿರಂತರ ಹೆಸರು: ಕಾಲಕಾಲಕ್ಕೆ ವಯೋವೃದ್ಧರನ್ನು ಬೀಳ್ಕೊಟ್ಟು ಉತ್ಸಾಹಿ ಯುವಕರನ್ನು ಪಾಲುದಾರರನ್ನಾಗಿ ಪಡೆಯುತ್ತಾ ಮೀನುಗಾರಿಕಾ ವೃತ್ತಿ ಮಾಡುತ್ತಿರುವ ಎಚ್‍ಆರ್‍ಎಫ್ ಇಂದು ಅವಿ`Àಜಿತ ದಕ ಜಿಲ್ಲೆಯ ಟಾಪ್ ಟೆನ್ ಪರ್ಸೀನ್ ಮೀನುಗಾರಿಕೆಯಲ್ಲಿ ನಿರಂತರ ಹೆಸರು ಪಡೆಯುತ್ತಾ ಬಂದಿದೆ.ಸಂಪಾದನೆಯಲ್ಲಿ ಯಾವತ್ತೂ ಇತರರಿಗೆ ಬಿಟ್ಟುಕೊಟ್ಟಿಲ್ಲ.ಹಾಗಾಗಿಯೇ ಎಚ್‍ಆರ್‍ಎಫ್ ಪರ್ಸೀನ್‍ನಲ್ಲಿ ಪಾಲುದಾರರಾಗಲು ಯುವ ಪಡೆ ಹಾತೊರೆಯುತ್ತಿದೆ.ಅವರ ಎರಡೂ ಪರ್ಸೀನ್‍ಗಳು ಟಾಪ್ ಟೆನ್‍ನಲ್ಲಿ ಬಂದಿರುವುದು ಉಲ್ಲೇಖನೀಯ.

ಹಿರಿಯರ ಮಾರ್ಗದರ್ಶನ:ಆರಂ`Àದಲ್ಲಿ ಬೇರೆಲ್ಲಾ ರಂಪಣಿ ಫಂಡ್‍ಗಳು ಮುಚ್ಚಿದರೂ ಎಚ್‍ಆರ್‍ಎಫ್ ಇಂದಿಗೂ ಮುಂದುವರಿಯಲು ಆರಂ`Àದಲ್ಲಿ ಹಿರಿಯ ತಂಡೇಲರಾದ ದಿ.ಮಹಾಲಿಂಗ ವೆ`.ಅಮೀನ್,ಇತ್ತೀಚೆಗಷ್ಟೇ ವಯೋಸಹಜವಾಗಿ ಬೀಳ್ಕೊಟ್ಟ ಆಡಳಿತ ಪಾಲುದಾರ ವಾಸು ಕೆ.ಕೋಟ್ಯಾನ್ ಮತ್ತು 60 ವರ್ಷಗಳಿಗೂ ಮೇಲ್ಪಟ್ಟು ರಂಪಣಿ ಮತ್ತು ಪರ್ಸೀನ್ ಬೋಟಿನ ಲೆಕ್ಕಾಚಾರ ನೋಡಿಕೊಂಡು ಇತ್ತೀಚೆಗೆ ನಿವೃತ್ತರಾದ ನಾರಾಯಣ ಕೆ.ಮೆಂಡನ್ ಎಂಬ ತ್ರಿಮೂರ್ತಿಗಳ ಮಾರ್ಗದರ್ಶನ ಮತ್ತು ಸಂಪೂರ್ಣ ಪ್ರೋತ್ಸಾಹ.ಬೇರೆಲ್ಲಾ ರಂಪಣಿ ಫಂಡ್‍ಗಳು ಆರ್ಥಿಕ ಸಂಕಷ್ಟಕ್ಕೀಡಾಗಿ ಮುಳುಗುತ್ತಿರುವ ಸಂದ`ರ್Àದಲ್ಲಿ ಈ ಮೂವರು ಕೆ`ಯಿಂದ ಹಣ `Àರಿಸಿ ಸಂಸ್ಥೆ ಇಂದಿಗೂ ಯಶಸ್ವಿಯಾಗಿ ಮುಂದುವರಿಯಲು ಕಾರಣೀ`Àೂತರಾದವರು.

ರಂಪಣಿ ಫಂಡ್‍ಗಳ ಅಳಿವಿಗೆ ಕಾರಣ: ಒಂದೇ  ಸಮಯದಲ್ಲಿ ರಾಜ್ಯದಾದ್ಯಂತ 52 ರಂಪಣಿ ಫಂಡ್‍ಗಳು ಪರ್ಸೀನ್ ಬೋಟು ಆರಂಭಿಸಿದ್ದು,ಇಂದು ಕೇವಲ ಒಂದು ಮಾತ್ರ ಉಳಿದಿಕೊಂಡಿದೆ.ಆರಂ`Àದಲ್ಲಿ ಕಡಿಮೆ ಸಂಪಾದನೆಯಿಂದ ಆರ್ಥಿಕ ಸಂಕಷ್ಟಕ್ಕೀಡಾಗಿ ಬೆರಳೆಣಿಕೆಯ ಫಂಡ್‍ಗಳು ಸ್ಥಗಿತಗೊಂಡರೆ,ಸಮ ಪಾಲು- ಸಮ ಬಾಳು ತತ್ವದಡಿಯ ರಂಪಣಿ ಫಂಡಿನ ಬಲಿಷ್ಟ ಮೀನುಗಾರರನ್ನು ಖಾಸಗಿ ಪರ್ಸೀನ್‍ಗಳ ಮಾಲೀಕರು ಆಮಿಷ ತೋರಿಸಿ ಸೆಳೆದೊಯ್ದ ಹಿನ್ನೆಲೆಯಲ್ಲಿ ಹೆಚ್ಚು ಫಂಡ್‍ಗಳು ಸ್ಥಗಿಗೊಂಡಿತು.ಯುವ ಹಾಗೂ ಯಶಸ್ವೀ ಕ್ಯಾಪ್ಟನ್‍ಗಳಿಗೆ ಉಚಿತ ಪಾಲುದಾರಿಕೆಯ ಆಮಿಷಗಳನ್ನು ನೀಡಲಾಗಿತ್ತು.ಕ್ಯಾಪ್ಟನ್ ಬಿಟ್ಟೊಡನೆ ಆತನ ಹಿಂಬಾಲಕರೂ ಫಂಡ್ ತೊರೆದ ಕಾರಣ ಎಲ್ಲಾ ಫಂಡ್‍ಗಳು ಸ್ಥಗಿಗೊಂಡಿತು.
ಆರಂ`Àದಲ್ಲಿ 78-ಇಂದು 38 ಪಾಲುದಾರರು: ರಂಪಣಿಯ ಎಲ್ಲಾ 78 ಮೀನುಗಾರರು ಆರಂ`Àದಲ್ಲಿ

ಪಾಲುದಾರರಾಗಿದ್ದರು.ಆದರೆ ವಯೋ ಸಹಜವಾಗಿ ನಿರಂತರ ಅವರಾಗಿಯೇ ಕೇಳಿಕೊಂಡ ಸಂದ`ರ್Àಗಳಲ್ಲಿ ಅವರಿಗೆ ಸಿಗಬೇಕಾದ ಅಂಶವನ್ನು ನೀಡಿ ಬೀಳ್ಕೊಡಲಾಗುತ್ತಿತ್ತು.ಅವರು ಬೀಳ್ಕೊಡವ ಸಂದ`ರ್Àದಲ್ಲಿ ಪರ್ಸೀನ್‍ನ ಬೆಲೆಯನ್ನು ನಿಗದಿಪಡಿಸಿ ಅದರ ಶೇಕಡಾವಾರು ಅಂಶವನ್ನು ಪ್ರೋತ್ಸಾಹ`Àನದೊಂದಿಗೆ ನೀಡಲಾಗುತ್ತಿದೆ.

ಯುವ ಉತ್ಸಾಹಿಗಳ ಸೇರ್ಪಡೆ: ಮೀನುಗಾರಿಕೆಯಲ್ಲಿ ವಿಶೇಷ ನೆ`ಪುಣ್ಯತೆ ಪಡೆಯುವ ಯುವಕರನ್ನು ಬೀಳ್ಕೊಟ್ಟವರ ಅಂಶಕ್ಕಿಂತ ಶೇ.10 ಕಡಿಮೆ ದರ ನಿಗದಿ ಪಡಿಸಿ ಸೇರ್ಪಡೆಗೊಳಿಸಲಾಗುತ್ತಿತ್ತು.ಇಂದು 38 ಪಾಲುದಾರರೊಂದಿಗೆ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಸಾಲ ರಹಿತ ಪರ್ಸೀನ್:ಇಂದು ಎರಡು ಪರ್ಸೀನ್ ಮತ್ತು ಎರಡು ಕ್ಯಾರಿಯರ್‍ನೊಂದಿಗೆ ಕೋಟ್ಯಾಂತರ ಮೌಲ್ಯದ ಸೊತ್ತು ಹೊಂದಿರುವ ಎಚ್‍ಆರ್‍ಎಫ್ ಸಂಸ್ಥೆ ಯಾವುದೇ ಸಾಲ ಬಾಕಿ ಇರಿಸಿಲ್ಲ.ಕಾಲಕಾಲPಕ್ಕೆ ಪರ್ಸೀನ್ ಮತ್ತು ಕ್ಯಾರಿಯರ್‍ಗಳನ್ನು ಬದಲಿಸುತ್ತಾ ಬಂದ ಅವರು ಸಾಲ ನೀಡಿದ ಆರ್ಥಿಕ ಸಂಸ್ಥೆಗಳು ನೀಡಿದ ಸಾಲಗಳನ್ನು ನಿಗದಿತ ಸಮಯಕ್ಕೇ ಪಾವತಿಸಿದ ಗರಿಮೆ ಹೊಂದಿದೆ.ಮುಂದಿನ ಮೀನುಗಾರಿಕಾ ಋತುವಿನಲ್ಲಿ ಆ`Àುನಿಕ ರೀತಿಯ ಸ್ಟೀಲ್ ಬಾಡಿ ಪರ್ಸೀನ್ ಮಾಡುವ ಉದ್ದೇಶ ಹೊಂದಿದ್ದು,ಒಂದೂವರೆ ಕೋಟಿ ರೂ.ಖರ್ಚಾಗಲಿದೆ.

ಲೆಕ್ಕ ಪಕ್ಕಾ: ಎರಡು ಪರ್ಸೀನ್‍ಗಳಿಗೆ ಬರುವ ದಿನನಿತ್ಯದ ಸಂಪಾದನೆಯನ್ನು ಅಚ್ಚುಕಟ್ಟಾಗಿ ಲೆಕ್ಕಾಚಾರ ಮಾಡುವುದು ಕಷ್ಟಕರ ಕೆಲಸ.ಎಚ್‍ಆರ್‍ಎಫ್‍ನ ನಾಲ್ವರು ದಿಗ್ಗಜರಾದ ಹರೀಶ್ಚಂದ್ ಮೆಂಡನ್,ಶೇಖರ ಎಸ್.ಕರ್ಕೇರ,ಜಯರಾಮ ಎನ್.ಕಾಂಚನ್ ಮತ್ತು ಸು`Áಕರ ಎಲ್.ಕೋಟ್ಯಾನ್ ಸಂಸ್ಥೆಯ ಶೇನವರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.

ನಾಲ್ವರು ಕ್ಯಾಪ್ಟನ್‍ಗಳು,ನಾಲ್ವರು ಚಾಲಕರು:ಸುರೇಶ್ ಮೆಂಡನ್,ಹರೀಶ್ ಕರ್ಕೇರ,ಶೇಖರ್ ಸುವರ್ಣ ಮತ್ತು ಪ್ರದೀಪ್ ಮೆಂಡನ್ ಯಶಸ್ವೀ ಕ್ಯಾಪ್ಟನ್‍ಗಳಾದರೆ ವಿಜಯ ಕುಂದರ್,ಮೋಹಿತ್ ಸಾಲ್ಯಾನ್,ಕಿರಣ್ ಕುಮಾರ್ ಮತ್ತು ಅಶೋಕ್ ಸುವರ್ಣ ಚಾಲಕರಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ದೆ`ವ ದೇವರುಗಳಿಗೆ ಒಂದು ಪಾಲು:ಕಳೆದ 40 ವರ್ಷಗಳಿಂದ ಎಚ್‍ಆರ್‍ಎಫ್ ಸಂಸ್ಥೆ ಸಂಪಾದನೆಯ ಒಂದಂಶವನ್ನು( ಪಾಲುದಾರರಿಗೆ ಸಿಗುವ ವಾರ್ಷಿಕ ಬಟವಾಡೆ) ದೆ`ವ ದೇವರುಗಳಿಗಾಗಿ ಮೀಸಲಿಡುತ್ತಾ ಬಂದಿದ್ದಾರೆ.ವರ್ಷದ ಕೊನೆಗೆ ಹೆಜಮಾಡಿ,ಬೆಣ್ಣೆಕುದ್ರು,ಉಚ್ಚಿಲ,ಉರ್ವ,ಕಟೀಲು,ಬಪ್ಪನಾಡು,ವೀರಮಾರುತಿ ದೇವಳ,ಬಬ್ಬರ್ಯ ದೆ`ವಸ್ಥಾನ,ಅಬ್ಬಗ ದಾರಗ ಆಲಡೆ,`Àಜನಾ ಮಂದಿರಗಳಿಗೆ ನಿರಂತರ ಹರಕೆಯಾಗಿ ನೀಡುತ್ತಾ ಬಂದಿದ್ದಾರೆ.ಹಾಗೂ ಶು`À ಸಮಾರಂ`Àಗಳಿಗೆ,ಅಶಕ್ತರಿಗೆ,ವಿದ್ಯಾರ್ಜನೆಗೆ ಸಹಾಯ`Àನ ನೀಡುತ್ತಿದ್ದಾರೆ.

ಸರಕಾರ ನೀಡಿದ ಸೌಲ`À್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ಯಶಸ್ವಿಯಾಗಿ,ಮಾದರಿಯಾಗಿ ಮುನ್ನಡೆಯುತ್ತಿರುವ ಸಹಕಾರಿ ತತ್ವದ ಎಚ್‍ಆರ್‍ಎಫ್ ಸಂಸ್ಥೆಯನ್ನು ಸರಕಾರ ಗುರುತಿಸಬೇಕಾಗಿದೆ.

ಅನಿಸಿಕೆ


ನಮ್ಮಲ್ಲಿ ಪ್ರತಿಯೊಬ್ಬ ಪಾಲುದಾರನಿಗೂ ಸಮಾನ ಪಾಲು.ಸಮ ಪಾಲು-ಸಮ ಬಾಳು ನಮ್ಮ ಉದ್ದೇಶ.ತ್ರಿಮೂರ್ತಿಗಳಾದ ದಿ.ಮಹಾಲಿಂಗ ವೆ`.ಅಮೀನ್,ವಾಸು ಕೆ.ಕೋಟ್ಯಾನ್ ಮತ್ತು ನಾರಾಯಣ ಕೆ.ಮೆಂಡನ್‍ರವರು ಹಿಂದೆ ಮಳೆಗಾಲದಲ್ಲಿ ಪರ್ಸೀನ್ ನೀರಿಗಿಳಿಸಲು ಖರ್ಚಿಗೆ ಕಾಸಿರಲಿಲ್ಲ.ಅಂದು ಕೆ`ಯಿಂದ ಹಣ ಹಾಕಿ ಬೋಟು ನೀರಿಗಿಳಿಸಲು ಕಾರಣರಾಗಿದ್ದರಿಂದ ನಾವಿಂದು ಉಳಿಯಲು ಸಾ`À್ಯವಾಗಿದೆ.
-ಹರೀಶ್ಚಂದ್ರ ಮೆಂಡನ್,ಶೇನವರು,ಎಚ್‍ಆರ್‍ಎಫ್.
ಹಿರಿಯರಿಗೆ ಗೌರವ ನೀಡುತ್ತಾ ಉತ್ಸಾಹದಿಂದ

 

ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ಕಾರಣ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
-ವಾಸು ಕೆ.ಕೋಟ್ಯಾನ್,ನಿವೃತ್ತ ಆಡಳಿತ ಪಾಲುದಾರರು,ಎಚ್‍ಆರ್‍ಎಫ್
ಪ್ರತಿಯೊಬ್ಬರ ಜವಾಬ್ದಾರಿಯುತ ಕಾರ್ಯವೇ ಯಶಸ್ಸಿನ ಕಾರಣ.ಹೆಜಮಾಡಿಯಲ್ಲಿ ಬಂದರು ಇಲ್ಲದಿದ್ದರೂ,ದಿನನಿತ್ಯ ಮಲ್ಪೆ ಮಂಗಳೂರಿಗೆ ವಾಹನದಲ್ಲಿ ತೆರಳಿ 40 ವರ್ಷಗಳಿಂದ ಮೀನುಗಾರಿಕೆ ನಡೆಸುತ್ತಿರುವುದು ಮಹಸ್ಸಾ`Àನೆ.ಹಲವು ಪರ್ಸೀನ್‍ಗಳು ಸ್ಥಗಿತಗೊಳ್ಳಲು ಹೆಜಮಾಡಿಯಲ್ಲಿ ಬಂದರು ಇಲ್ಲದಿರುವುದೇ ಕಾರಣ.ಹೆಜಮಾಡಿಗೆ ಅಗತ್ಯವಾಗಿ ಬಂದರು ಬೇಕು.