ಸಂಘಟನೆಗಳಿಂದ ಸಮಾಜದ ಸುಧಾರಣೆ ಸಾಧ್ಯ-ಲಾಲಾಜಿ ಆರ್.ಮೆಂಡನ್

ಪಡುಬಿದ್ರಿ, 03/09/2018:   ಸಮಾಜ ಸೇವೆ ಮಾಡಲು ಸಂಘಟನೆ ಅಗತ್ಯವಿದೆ.ಕೇವಲ ಹೋರಾಟವೇ ಸಂಘಟನೆಗಳ ಕಾರ್ಯಸೂಚಿಯಾಗಬಾರದು.ಸಮಾಜದ ಸೇವೆ ಮಾಡುತ್ತಾ ಸಂಘಟನೆಗಳು ಬಲಿಷ್ಠವಾಗುತ್ತದೆ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.

ಸೋಮವಾರ ಪಡುಬಿದ್ರಿ ಕೆಳಗಿನಪೇಟೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಪ್ರಖಂಡ ಕಾರ್ಯಾಲಯವನ್ನು ದೀಪ ಬೆಳಗಿಸ ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಉಳಿಸಲು ಮೋದಿಯವರನ್ನು ಬೆಂಬಲಿಸಿ ಎಂದ ಅವರು,ಸಂಘಟನೆಗಳಿಗೆ ಶಕ್ತಿ ತುಂಬಲು ಕಾರ್ಯಾಲಯ ಅಗತ್ಯ.ಪರಸ್ಪರ ಹೊಂದಾಣಿಕೆಯೊಂದಿಗೆ ಕಾರ್ಯನಿರ್ವಹಿಸಿದಲ್ಲಿ ಯಾವುದೇ ಸಮಸ್ಯೆಯನ್ನು ಸುಸೂತ್ರವಾಗಿ ಬಗೆಹರಿಸಬಹುದು ಎಂದವರು ಹೇಳಿದರು.

ಬಜರಂಗದಳ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್.ಮುಖ್ಯ ಅತಿಥಿಯಾಗಿ ಮಾತನಾಡಿ,ವಿಹಿಂಪ ಸಂಸ್ಥಾಪನಾ ದಿನದಂದೇ ಪಡುಬಿದ್ರಿ ಕಾರ್ಯಾಲಯ ಆರಂಭಗೊಂಡಿರುವುದು ಶುಭ ಸಂಕೇತ.1964ರ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ನಾಗ್ಪುರದಲ್ಲಿ ವಿಹಿಂಪ ಪ್ರಾರಂಭಗೊಂಡಿತು ಎಂದ ಅವರು,ಸಂಘಟನೆಗಳು ಕೇವಲ ಹೋರಾಟಕ್ಕಾಗಿ ಅಲ್ಲ.ಬದಲಾವಣೆಯೊಂದಿಗೆ ಸಮಾಜದ ಅಭಿವೃದ್ಧಿ ಸಾಧಿಸಿದಲ್ಲಿ ಸಂಘಟನೆ ಬಲಿಷ್ಠಗೊಳ್ಳುತ್ತದೆ.ಈ ಕಾರ್ಯಾಲಯವು ಸಮಾಜಮುಖಿ ಕಾರ್ಯಗಳಿಗೆ ಸದುಪಯೋಗವಾಗಲಿ ಎಂದರು.


ಸನ್ಮಾನ: ಇದೇ ಸಂದರ್ಭ ಶಾಸಕ ಲಾಲಾಜಿ ಆರ್.ಮೆಂಡನ್ ಮತ್ತು ಸುನಿಲ್ ಕೆ.ಆರ್.ರವರನ್ನು ವಿಹಿಂಪ ಮತ್ತು ಬಜರಂಗದಳ ವತಿಯಿಂದ ಸನ್ಮಾನಿಸಲಾಯಿತು.

ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಪ್ರಸ್ತಾವಿಸಿ,ಧರ್ಮ ಹಾಗೂ ಸಂಸ್ಕøತಿ ಉಳಿಸುವ ಅಖಂಡ ನ್ಯಾಯಕ್ಕೆ ಬೆಲೆ ಸಿಗಬೇಕೆಂಬ ಹಂಬಲದೊಂದಿಗೆ ಸಂಘಟನೆ ಆರಂಭಗೊಂಡಿದೆ ಎಂದರು.

ಕಾಪು ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಬಜರಂಗದಳ ಕಾಪು ಪ್ರಖಂಡ ಸಂಚಾಲಕ ರಾಜೇಶ್ ಕೋಟ್ಯಾನ್,ವಿಹಿಂಪ ಪಡುಬಿದ್ರಿ ವಲಯಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ,ತಾಪಂ ಸದಸ್ಯೆ ನೀತಾ ಗುರುರಾಜ್,ರಾಜ್ಯ ಸಮಿತಿಯ ಕಾರ್ಯದರ್ಶಿ ರಮಾಕಾಂತ ದೇವಾಡಿಗ,ಸುಧಾಕರ ಪೂಜಾರಿ ಪಡುಹಿತ್ಲು,ಉದ್ಯಮಿ ಮಿಥುನ್ ಆರ್.ಹೆಗ್ಡೆ,ರಮಾನಾಥ ಪೈ ಮೂಲ್ಕಿ,ಪಾಂಡುರಂಗ ಕರ್ಕೇರ,ಸಂದೇಶ್ ಶೆಟ್ಟಿ ಹೆಜಮಾಡಿ,ಅಶೋಕ್ ಸಾಲ್ಯಾನ್,ರವಿ ಶೆಟ್ಟಿ,ಜಗದೀಶ ಶೆಟ್ಟಿ,ಮನೋಜ್ ದೇವಾಡಿಗ,ಮಹೇಶ್ ಉಚ್ಚಿಲ,ಶಿವಕುಮಾರ್ ಹೆಜ್ಮಾಡಿ,ಅಜಿತ್ ಶೆಟ್ಟಿ ಪಾದೆಬೆಟ್ಟು,ಹರೀಶ್ ಕುಮಾರ್ ಶೆಟ್ಟಿ ಪಾದೆಬೆಟ್ಟು,ಹರೀಶ್ ಕಂಚಿನಡ್ಕ ಮತ್ತಿತರರು ಉಪಸ್ಥಿತರಿದ್ದರು.

ಜಯಪ್ರಕಾಶ್ ಪ್ರಭು ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು.ವಿಷ್ಣುಮೂರ್ತಿ ಆಚಾರ್ಯ ವಂದಿಸಿದರು.