ಶ್ರೀ ಕ್ಷೇತ್ರ ಬಪ್ಪನಾಡು: ಶರನ್ನವರಾತ್ರಿ ಮಹೋತ್ಸವ

ಮೂಲ್ಕಿ: ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಅ.10 ರಿಂದ 19 ರತನಕ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ಅ.10 ಬುಧವಾರದಿಂದ ಅ.19 ಶುಕ್ರವಾರದವರೆಗೆ ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಚಂಡಿಕಾಯಾಗ,ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ,ರಾತ್ರಿ 8 ಗಂಟೆಯಿಂದ ವಿಶೇಷ ಪೂಜೆ,ರಂಗ ಪೂಜೆ,ಸುವಾಸಿನಿ ಪೂಜೆ,ಪ್ರಸಾದ ವಿತರಣೆ ನಡೆಯಲಿದೆ.

ಈ ಸಂದರ್ಭ ಪ್ರತಿದಿನ ಸಂಜೆ 5.30ರಿಂದ 9 ಗಂಟೆವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಳದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು,ಅನುವಂಶಿಕ ಮತ್ತು ಆಡಳಿತ ಮೊಕ್ತೇಸರ ಎನ್‍ಎಸ್ ಮನೋಹರ ಶೆಟ್ಟಿ,ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ. ತಿಳಿಸಿದ್ದಾರೆ.

ಅ.10 ಬುಧವಾರ ಸಂಜೆ 5 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಶಾಸಕ ಉಮಾನಾಥ್ ಕೋಟ್ಯಾನ್,ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್,ಅಗ್ರಜ ಬಿಲ್ಡರ್ಸ್‍ನ ಸಂದೇಶ್ ಶೆಟ್ಟಿ,ನಪಂ ಅಧ್ಯಕ್ಷ ಸುನಿಲ್ ಆಳ್ವ ಚಾಲನೆ ನೀಡಲಿದ್ದಾರೆ.
ಅ.10 ಬುಧವಾರ ಸಂಜೆ ನಾದ ಗಾನ ವೈಭವ,ಮತ್ತು ನೃತ್ಯ ವೈಭವ,ಅ.11 ಗುರುವಾರ ಭರತನಾಟ್ಯ,ಅ.12 ಶುಕ್ರವಾರ ಕರ್ನಾಟಕ ಸಂಗೀತ ಮತ್ತು ಭಕ್ತಿಗೀತೆಗಳು,ಭಜನಾ ಕಾರ್ಯಕ್ರಮ,ಅ.13 ಶನಿವಾರ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿ ಗಾಯನ,ಯಕ್ಷಗಾನ ತಾಳಮದ್ದಳೆ,ಅ.14 ಭಾನುವಾರ,ಯಕ್ಷಗಾನ ತಾಳಮದ್ದಳೆ ಮತ್ತು ಭರತನಾಟ್ಯ ನೃತ್ಯ ವೈಭವ,ಅ.15 ಸೋಮವಾರ ಭರತನಾಟ್ಯ,ಮಹಿಳಾ ಯಕ್ಷಗಾನ,ಅ.16 ಮಂಗಳವಾರ ದಾಸ ಸಿಂಚನ,ಭರತನಾಟ್ಯ,ಅ.17 ಬುಧವಾರ ಸಂಗೀತ ವೈವಿಧ್ಯ,ಭರತನಾಟ್ಯ,ಅ.18 ಗುರುವಾರ ಕೊಳಲು ವಾದನ,ಭರತನಾಟ್ಯ,ಅ.19 ಶುಕ್ರವಾರ ಭರತನಾಟ್ಯ,ಭಜನಾ ಕಾರ್ಯಕ್ರಮ ನಡೆಯಲಿದೆ.