ಶ್ರೀ ಕ್ಷೇತ್ರ ಬಪ್ಪನಾಡುವಿನಲ್ಲಿ ಶುಕ್ರವಾರ 43 ನೇ ಭಜನಾ ಮಂಗಲೋತ್ಸವದ ಏಕಾಹ ಭಜನಾ ಕಾರ್ಯಕ್ರಮಕ್ಕೆ ಚಾಲನೆ

ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಸೇವಾ ಯುವಕ ವೃಂದದ ವತಿಯಿಂದ ಶ್ರೀ ಕ್ಷೇತ್ರ ಬಪ್ಪನಾಡುವಿನಲ್ಲಿ ಶುಕ್ರವಾರ 43 ನೇ ಭಜನಾ ಮಂಗಲೋತ್ಸವದ ಏಕಾಹ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ದೇವಳದ ಆಡಳಿತ ಮತ್ತು ಅನುವಂಶಿಕ ಮೊಕ್ತೇಸರ ಎನ್‍ಎಸ್ ಮನೋಹರ ಶೆಟ್ಟಿ,ಶ್ರೀ ವೆಂಕಟರಮಣ ದೇವಳದ ಮೊಕ್ತೇಸರ ಅತುಲ್ ಕುಡ್ವ,ಮಯೂರಿ ಫೌಂಡೇಶನ್ ಸಂಸ್ಥಾಪಕ ಜಯ ಶೆಟ್ಟಿ,ಉದ್ಯಮಿ ವೆಂಕಟೇಶ್ ಹೆಬ್ಬಾರ್ ಬಪ್ಪನಾಡು,ವೃಂದದ ಅಧ್ಯಕ್ಷ ಬಿ.ಶಿವ ಶೆಟ್ಟಿ,ಗೌರವಾಧ್ಯಕ್ಷರುಗಳಾದ ಕೆ.ಕೃಷ್ಣ ಆರ್.ಶೆಟ್ಟಿ,ಮಹೀಮ್ ಆರ್.ಹೆಗ್ಡೆ,ಕಾರ್ಯದರ್ಶಿ ಸತೀಶ್ ಪುತ್ರನ್,ಸುರೇಶ್ ಬಂಗೇರ,ಗಿರೀಶ್ ಒಡೇರಬೆಟ್ಟು,ರವೀಂದ್ರ ಶೆಟ್ಟಿ,ಹರಿಶ್ಚಂದ್ರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.