ಶೀಘ್ರದಲ್ಲಿ ಮೂಲ್ಕಿ-ಬಿಸಿರೋಡ್ ಚತುಷ್ಪಥ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಚಾಲನೆ:ಸಂಸದ ನಳಿನ್

ಮೂಲ್ಕಿ: ಮೂಲ್ಕಿ-ಕಿನ್ನಿಗೋಳಿ-ಕಟೀಲು-ಬಿಸಿರೋಡ್ ಚತುಷ್ಪಥ ರಸ್ತೆಗೆ ಕೇಂದ್ರದಿಂದ 2600ಕೊಟಿ ರೂ.ಮಂಜೂರಾಗಿದ್ದು ಶೀಘ್ರದಲ್ಲಿ ಕಾಂಕ್ರೀಟೀಕರಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಸಂಸದರ ನಿಧಿ ರೂ.5ಲಕ್ಷ,ಶಾಸಕರ ನಿಧಿ ರೂ.2ಲಕ್ಷ ತಾಲೂಕು ಪಂಚಾಯಿತಿ ವತಿಯಿಂದ ಸುಮಾರು 2 ಲಕ್ಷ ವೆಚ್ಚ ಒಟ್ಟು 9 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಿಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ಕುಬೆವೂರು ಜಾರಂದಾಯ ದೈವಸ್ಥಾನಕ್ಕೆ ಹೋಗುವ ಡಾಮರೀಕರಣ ರಸ್ತೆಯನ್ನು ಹಾಗೂ ರಸ್ತೆಗೆ ಸುಮಾರು ಒಂದು ಲಕ್ಷ ರೂ.ವೆಚ್ಚದಲ್ಲಿ ಅಳವಡಿಸಿದ ದಾರಿದೀಪ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಂಸದನಾಗಿ ಕಳೆದ 5 ವರ್ಷಗಳಲ್ಲಿ ರೂ.16 ಸಾವಿರ ಕೋಟಿ ಅನುದಾನ ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದ್ದು ಗ್ರಾಮೀಣ ಪ್ರದೇಶದ ಅಬಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಸನ್ಮಾನ: ರಸ್ತೆ ಕಾಮಗಾರಿಗೆ ಒತ್ತು ನೀಡಿದ ನೆಲೆಯಲ್ಲಿ ಸಂಸದ ನಳಿನ್‍ಕುಮಾರ್ ಕಟೀಲುರವರನ್ನು ಜಾರಂದಾಯ ಸಮಿತಿಯ, ಹಾಗೂ ಊರಿನ ಪರವಾಗಿ ಸನ್ಮಾನಿಸಲಾಯಿತು.ಈ ಸಂದರ್ಭ ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ,ತಾ.ಪಂ.ಸದಸ್ಯ ಶರತ್ ಕುಬೆವೂರು,ಬಿಜೆಪಿ ಕ್ಷೇತ್ರಾಧ್ಯಕ್ಷ ಈಶ್ವರ್ ಕಟೀಲ್,ಆದರ್ಶ್ ಶೆಟ್ಟಿ ಎಕ್ಕಾರು,ಕಿಲ್ಪಾಡಿ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ರಾವ್,ಉಪಾಧ್ಯಕ್ಷೆ ಯಶೋದಾ,ಸದಸ್ಯರಾದ ನಾಗರಾಜ್,ದಮಯಂತಿ ಕಿಲ್ಪಾಡಿ,ಉದ್ಯಮಿ ಸತೀಶ್ ಶೆಟ್ಟಿ ಕೆಂಚನಕೆರೆ,ಮುರಳೀಧರ ಭಂಡಾರಿ,ಸುಂದರ ಶೆಟ್ಟಿ ಕುಬೆವೂರು,ಮಧುಸೂಧನ ಕಿಲ್ಪಾಡಿ,ವಚನ್ ಶೆಣೈ,ಸುಧಾಕರ್ ಬಂಡ್ರಿಯಾಲ್,ಉದಯ ಅಮೀನ್ ಮಟ್ಟು,ವಿಠಲ್ ಎನ್‍ಎಮ್,ದಿನೇಶ್ ಶೆಟ್ಟಿ,ಪ್ರವೀಣದ ಶಿಮಂತೂರು,ಕೃಷ್ಣ ಶೆಟ್ಟಿ,ಅವಿನಾಶ್ ಶೆಟ್ಟಿ,ಪ್ರಕಾಶ್ ಶೆಟ್ಟಿ,ಕುಮಾರ್ ಮೂಲ್ಕಿ ಉಪಸ್ಥಿತರಿದ್ದರು.

ವಿಜಯ ಕುಮಾರ್ ಕುಬೆವೂರು ಸ್ವಾಗತಿಸಿದರು.ಜಯ ಕುಮಾರ್ ವಂದಿಸಿದರು.