ಶಿಸ್ತುಬದ್ಧ ಅನ್ನ ಸಂತರ್ಪಣೆ-ಭಕ್ತರ ಮೆಚ್ಚುಗೆ – ಬಾಲಿವುಡ್ ನಟ ಸುನಿಲ್ ಶೆಟ್ಟಿ,ಕಲ್ಲಡ್ಕ ಭಟ್,ಡಾ.ಭರತ್ ಶೆಟ್ಟಿ ಉಪಸ್ಥಿತಿ

ಪಡುಬಿದ್ರಿ: ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಶನಿವಾರ ನಡೆದ ಮುಂಬಯಿನ ಚರಿಷ್ಮಾ ಬಿಲ್ಡರ್ಸ್‍ನ ಲತಾ ಸುಧೀರ್ ಶೆಟ್ಟಿ-ಸುಧೀರ್ ವಾಸು ಶೆಟ್ಟಿ ಹಾಗೂ ಕುಟುಂಬಿಕರ ಢಕ್ಕೆಬಲಿ ಸೇವಾ ಸಂದರ್ಭದಲ್ಲಿ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ನಡೆದ ಶಿಸ್ತುಬದ್ಧ ಅನ್ನಸಂತರ್ಪಣೆಗೆ ಭಕ್ತರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಮಧ್ಯಾಹ್ನ 11.30ರಿಂದಲೇ ಅಚ್ಚುಕಟ್ಟಾಗಿ ಅನ್ನಸಂತರ್ಪಣೆಗೆ ವ್ಯವಸ್ಥೆ ಕಲ್ಪಿಸಿದ್ದು,ಯಾರೂ ಹೆಚ್ಚು ಕಾಯದೆ ಅನ್ನ ಸಂತರ್ಪಣೆಯ ಪ್ರಸಾದ ಸ್ವೀಕರಿಸಿದರು. ತುಂಬಾ ಅಚ್ಚುಕಟ್ಟಿನ ಅನ್ನದಾಸೋಹದಲ್ಲಿ ಸುಮಾರು 14000 ಭಕ್ತಾದಿಗಳು ಭಾಗವಹಿಸಿದ್ದರು.

ಮಧ್ಯಾಹ್ನ 11-30ರಿಂದಲೇ ಆರಂಭಗೊಂಡಿದ್ದ ಅನ್ನಸಂತರ್ಪಣೆಯ ಮಂಟಪದಲ್ಲಿ ಅಲ್ಲಲ್ಲಿ ಫ್ಯಾನುಗಳನ್ನಿರಿಸಿ ಭಕ್ತರಿಗೆ ಶೆಖೆ ಅಥವಾ ಯಾವುದೇ ಸಂಕಷ್ಟಗಳಾಗದ ರೀತಿಯಲ್ಲಿ ನೇರವಾಗಿ ಆಗಮಿಸಿ ಕುಳಿತು ಭೋೀಜನಗೈದು ತೆರಳುವಂತಹ ಶಿಸ್ತುಬದ್ಧ ವ್ಯವಸ್ಥೆಯನ್ನು ಸೇವಾಕರ್ತೃ ಸುಧೀರ್ ಶೆಟ್ಟಿ ಚರಿಷ್ಮಾ ಮತ್ತವರ ಕುಟುಂಬಸ್ಥರು ನಿರ್ವಹಿಸಿದ್ದರು.

ಇದುವರೆಗೆ ಇಂತಹಾ ಅಚ್ಚುಕಟ್ಟಾದ ಭೋೀಜನ ವ್ಯವಸ್ಥೆಯನ್ನು ತಾನು ತನ್ನ ಜೀವಮಾನದಲ್ಲೇ ಕಂಡಿರಲಿಲ್ಲವೆಂಬುದಾಗಿ ಅನ್ನದಾಸೋಹದಲ್ಲಿ ಭಾಗಿಯಾಗಿದ್ದ ಬ್ರಹ್ಮಾವರದ ಲೋಕನಾಥ್ ಜತ್ತನ್ ಭಾವುಕರಾಗಿ ಹೇಳಿದ್ದಾರೆ.

ಬಡಿಸುವ ವ್ಯವಸ್ಥೆಯೂ ಬಹಳ ಉತ್ತಮ ರೀತಿಯಲ್ಲಿತ್ತು.ಈ ಸಂದರ್ಭದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ, ಆರೆಸ್ಸೆಸ್ ದುರೀಣ ಡಾ| ಕಲ್ಲಡ್ಕ ಪ್ರಬಾಕರ ಭಟ್, ಮಂಗಳೂರು ಉತ್ತರ ಶಾಸಕ ಡಾ| ಭರತ್ ಶೆಟ್ಟಿ, ಸಾಮಾಜಿಕ ಧುರೀಣರಾದ ಸಂತೋಷ್ ಶೆಟ್ಟಿ ಪಲ್ಲವಿ ಪಡುಬಿದ್ರಿ, ಮನೋಹರ ಎಸ್. ಶೆಟ್ಟಿ ಕಾಪು, ಬಳ್ಳಾರಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ವನದುರ್ಗಾ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್, ಮಯೂರಿ ಜಯ ಶೆಟ್ಟಿ, ಗೋವಾ ಸದಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಭಕ್ತರಿಗೆ ಭಕ್ತಿ ಸಂಗೀತ ರಸಮಂಜರಿಯನ್ನು ಚಂದ್ರಕಾಂತ್ ಆಚಾರ್ಯ ಮತ್ತು ಬಳಗದವರು ನೀಡಿದ್ದರು.

(ಸೇವಾಕರ್ತ ಸುಧೀರ್ ವಾಸು ಶೆಟ್ಟಿ ಕುಟುಂಬಿಕರು ಅನ್ನ ಸಂತರ್ಪಣೆಗೆ ಸ್ವಯಂ ಬಡಿಸುವ ಮೂಲಕ ಚಾಲನೆ ನೀಡಿದರು.)