ಶಿವಾಯ ಫೌಂಡೇಶನ್‍ನಿಂದ ಸಹಾಯಹಸ್ತ

ಪಡುಬಿದ್ರಿ: ಸಕಲೇಶಪುರದ ಜಗದೀಶ್ ಪುತ್ರಿ ರಕ್ತಹೀನತೆಯಿಂದ ಬಳಲುತ್ತಿರುವ ಪನ್ವಿಕಾ ಚಿಕಿತ್ಸೆಗಾಗಿ ಮುಂಬೈ ಶಿವಾಯ ಫೌಂಡೇಶನ್‍ನಿಂದ ರೂ.50,000 ಧನಸಹಾಯವನ್ನು ಹಸ್ತಾಂತರಿಸಲಾಯಿತು.

ಜಗದೀಶ್ ಅವರು ಉಡುಪಿಯಲ್ಲಿ ಹೋಟೆಲ್ ಕೆಲಸ ನಿರ್ವಹಿಸಿ ಬರುವ ಹಣದಿಂದ ಮಗಳ ಚಿಕಿತ್ಸೆಗೆ ಭರಿಸುತ್ತಿದ್ದು, ಮಗಳು ಗುಣಮುಖರಾಗಲು ಸುಮಾರು ರೂ. 25 ಲಕ್ಷದಷ್ಟು ಹಣ ಅಗತ್ಯವಿರುವುದರಿಂದ,

ಸಂಘಸಂಸ್ಥೆ ಹಾಗೂ ದಾನಿಗಳಿಂದ ಸಹಾಯ ಯಾಚಿಸುತ್ತಿದ್ದಾರೆ. ಉಡುಪಿಯಲ್ಲಿ ಪ್ರತಿ ವರ್ಷ ನಡೆಯುವ ಸಾಂಸ್ಕೃತಿಕ ವೈಭವ ಉಡುಪಿ ಉತ್ಸವದಲ್ಲಿ ಒಂದು ಡಬ್ಬಿಯನ್ನು ಇಟ್ಟುಕೊಂಡು, ಕಣ್ಣಲ್ಲಿ ಅತ್ತ ಇತ್ತ ಖುಷಿಯಲ್ಲಿ ಮುಳುಗಿರುವ ಜನರಲ್ಲಿ ಯಾರಾದರೂ ತನ್ನತ್ತ ತಿರುಗಿ ಸಹಾಯದ ಡಬ್ಬಿಗೆ ಒಂದಿಷ್ಟು ಹಣ ಹಾಕುತ್ತಾರೆ ಎನ್ನುವ ನಿರೀಕ್ಷೆಯಿಂದ ಕಾದುಕುಳಿತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ವಿಷಯ ತಿಳಿದ ಶಿವಾಯ ಫೌಂಡೇಶನ್ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ತಮ್ಮಿಂದಾದ ಸಹಾಯ ಮಾಡಿ ಜಗದೀಶ್ ಅವರಿಗೆ ಧೈರ್ಯ ತುಂಬುವ ಕೆಲಸಕ್ಕೆ ಕೈಚಾಚಿತ್ತು ಎಂದು ಫೌಂಡೇಶನ್ ಸದಸ್ಯರು ತಿಳಿಸಿದ್ದಾರೆ.

ಪಡುಬಿದ್ರಿ ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷ ನವೀನ್ ಎನ್.ಶೆಟ್ಟಿ, ಶಿವಾಯ ಸದಸ್ಯರಾದ ಸೋನಿಯಾ ಶೆಟ್ಟಿ, ರಾಯೇಶ್ ಪೈ, ಮಹೇಶ್ ದೇವಾಡಿಗ, ರವಿ ಶೆಟ್ಟಿ ಶಾರದೆ ಪಾದೆಬೆಟ್ಟು ಧನಸಹಾಯ ಹಸ್ತಾಂತರ ಸಂದರ್ಭ ಇದ್ದರು.

ಫೋಟೋ:: ಮುಂಬೈ ಶಿವಾಯ ಫೌಂಡೇಶನ್‍ನಿಂದ ಪನ್ವಿಕಾ ಚಿಕಿತ್ಸೆಗಾಗಿ ರೂ.50,000 ಧನಸಹಾಯವನ್ನು ಹಸ್ತಾಂತರಿಸಲಾಯಿತು.