ಶಾಂಭವಿ ಹೊಳೆಯಲ್ಲಿ ಶನಿವಾರವೂ ಭರ್ಜರಿ ಬೊಲೆಂಜಿರ್ ಮೀನು

ಕಳೆದ ಒಂದು ವಾರದಿಂದ ಶಾಂಭವಿ ಹೊಳೆಯಲ್ಲಿ ಸಿಕ್ಕ ಬೊಲೆಂಜಿರ್ ಮೀನು ಶನಿವಾರವೂ ಭರ್ಜರಿಯಾಗಿ ದೊರಕಿವೆ.
ಶುಕ್ರವಾರಕ್ಕಿಂತ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ ಇಂಜಿನ್ ಅಳವಡಿಸಿದ ದೋಣಿಗಳು ಮುಂಜಾನೆ 5 ಗಂಟೆಯಿಂದಲೇ ಹೊಳೆಯಲ್ಲಿ ಸುತ್ತಾಡಿ 8 ಗಂಟೆಯೊಳಗೆ ಸಾಕಷ್ಟು ಬೊಲೆಂಜಿರ್(ಸಿಲ್ವರ್ ಫಿಶ್) ಮೀನು ಹಿಡಿದಿದ್ದಾರೆ. ಶಾಂಭವಿ ಹೊಳೆಯ ಕೊಳಚಿಕಂಬಳ,ಕಟ್ಟದಂಗಡಿ,ನಡಿಕುದ್ರು,ಚಂದ್ರಶ್ಯಾನುಭಾಗ ಕುದ್ರು,ಬಪ್ಪನಾಡು,ಶಾಂಭವಿ ಸೇತುವೆ ಆಸುಪಾಸಿನಲ್ಲಿ ಹೇರಳವಾಗಿ ಬೊಲೆಂಜಿರ್ ಲಭ್ಯವಾಗಿದೆ.

ಶನಿವಾರ ಬೊಲೆಂಜಿರ್ ಕೆಜಿಯೊಂದಕ್ಕೆ 100ರಿಂದ 120ರವರೆಗೆ ಇದ್ದು,ಕೆಲವರು ರೂ.50 ಸಾವಿರಕ್ಕೂ ಅಧಿಕ ಸಂಪಾದನೆ ಮಾಡಿದರು.ಸಸಿಹಿತ್ಲು,ಕದಿಕೆ,ಚಿತ್ರಾಪು,ಹೆಜಮಾಡಿ,ಮೂಲ್ಕಿಯ ಹಲವಾರು ಮೀನುಗಾರರು ಬೊಲೆಂಜಿರ್ ಮೀನು ಹಿಡಿದು ಹೆಚ್ಚು ಸಂಪಾದನೆ ಮಾಡಿದರು. ಬೊಲೆಂಜಿರ್ ಮೀನು ಹಿಡಿಯುವ ವಿಶೇಷ ಬಲೆಗೆ ಹೆಚ್ಚು ಮೀನು ದೊರಕಿದ್ದು,ಬೀಸುಬಲೆ ಸಹಿತ ಇನ್ನಿತರ ಬಲೆಗಳನ್ನು ಹಾಕಿಯೂ ಬೊಲೆಂಜಿರ್ ಹಿಡಿಯಲಾಯಿತು.

ಕೇಂದರ ಸರಕಾರದ ಮೀನುಗಾರಿಕಾ ಇಲಾಖಾ ನಿವೃತ್ತ ನಿರ್ದೇಶಕ ಮೂಲ್ಕಿ ಒಡೇರಬೆಟ್ಟು ವಾಸಿ ಕ್ಯಾಪ್ಟನ್ ವಾಸು ಎ.ಪುತ್ರನ್ ,ಇದೊಂದು ಆಶ್ಚರ್ಯಕರ ಸಂಗತಿ.ನಾನ್ಯಾವತ್ತೂ ಈ ತರ ಕಂಡಿಲ್ಲ ಆದರೂ ಸಮುದ್ರದಿಂದ ಹೊಳೆ ಅಥವಾ ನದಿಗೆ ಆಗಮಿಸುವ ಸಮುದ್ರ ಜಲಚರಗಳು ವಾಪಾಸು ಸಮುದ್ರಕ್ಕೆ ತೆರಳುವುದಿಲ್ಲ.ಸಮುದ್ರದ ಒತ್ತಡದಿಂದ ಹೊಳೆಗೆ ಬಂದಿರಬಹುದು.ಆದಾಗ್ಯೂ ಬೊಲೆಂಜಿರ್ ತಿನ್ನಲು ಯೋಗ್ಯವಾಗಿದೆ ಎಂದಿದ್ದಾರೆ.

ಮಂಗಳೂರು ಸಿಎಮ್‍ಎಫ್‍ಆರ್‍ಐ ಹಿರಿಯ ವಿಜ್ಞಾನಿ ಡಾ.ರಾಜೇಶ್ ಕೆ.ಎಮ್. ಶನಿವಾರ ಸಂಸ್ಥೆಯ ತಂಡದೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಮೀನುಗಾರರಿಂದ ಮಾಹಿತಿ ಸಂಗ್ರಹಿಸಿದರು.ಮೀನು ಮೊಟ್ಟೆ ಇಡುವ ಕಾಲವಾಗಿರುವ ಕಾರಣ ಉಪ್ಪಿನಾಂಶ ಕಡಿಮೆ ಇರುವ ನದಿಗೆ ಮೀನುಗಳು ಆಗಮಿಸಿವೆ ಎಂದವರು ಹೇಳಿದ್ದಾರೆ.

 

Updated news:

ಶಾಂಭವಿ ಹೊಳೆಯಲ್ಲಿ ನಿಲ್ಲದ ಬೊಲೆಂಜಿರ್ ಸೆಲೆ
ಸಂಶೋಧಕರ ಆಗಮನ

  • ಎಚ್ಕೆ ಹೆಜ್ಮಾಡಿ,ಮೂಲ್ಕಿ

ಮೂಲ್ಕಿಯ ಶಾಂಭವಿ ಹೊಳೆಯಲ್ಲಿ ಶನಿವಾರವೂ ಭರ್ಜರಿಯಾಗಿ ಬೊಲೆಂಜಿರ್ ಮೀನು ಹಿಡಿಯಲಾಗಿದೆ.
ಶುಕ್ರವಾರಕ್ಕಿಂತ ಅಕ ಸಂಖ್ಯೆಯಲ್ಲಿ ಆಗಮಿಸಿದ ಔಟ್‍ಬೋರ್ಡ್ ಇಂಜಿನ್ ಅಳವಡಿಸಿದ ದೋಣಿಗಳು ಮುಂಜಾನಿ 5 ಗಂಟೆಯಿಂದಲೇ ಹೊಳೆಯಲ್ಲಿ ಸುತ್ತಾಡಿ 8 ಗಂಟೆಯೊಳಗೆ ಸಾಕಷ್ಟು ಬೊಲೆಂಜಿರ್(ಸಿಲ್ವರ್ ಫಿಶ್ ಅಥವಾ ವೈಟ್ ಸಾರ್ಡಿನ್) ಮೀನು ಹಿಡಿದಿದ್ದಾರೆ.

ಶಾಂಭವಿ ಹೊಳೆಯ ಕೊಳಚಿಕಂಬಳ,ಕಟ್ಟದಂಗಡಿ,ನಡಿಕುದ್ರು,ಚಂದ್ರಶ್ಯಾನುಭಾಗ ಕುದ್ರು,ಬಪ್ಪನಾಡು,ಶಾಂಭವಿ ಸೇತುವೆ ಆಸುಪಾಸಿನಲ್ಲಿ ಹೇರಳವಾಗಿ ಬೊಲೆಂಜಿರ್ ಲಭ್ಯವಾಗಿದೆ.
ಶನಿವಾರ ಬೊಲೆಂಜಿರ್ ಕೆಜಿಯೊಂದಕ್ಕೆ 100ರಿಂದ 120ರವರೆಗೆ ಇದ್ದು,ಕೆಲವರು ರೂ.50 ಸಾವಿರಕ್ಕೂ ಅಕ ಸಂಪಾದನೆ ಮಾಡಿದರು.
ಬೊಲೆಂಜಿರ್ ಮೀನು

ಹಿಡಿಯುವ ವಿಶೇಷ ಬಲೆಗೆ ಹೆಚ್ಚು ಮೀನು ದೊರಕಿದ್ದು,ಬೀಸುಬಲೆ ಸಹಿತ ಇನ್ನಿತರ ಬಲೆಗಳನ್ನು ಹಾಕಿಯೂ ಬೊಲೆಂಜಿರ್ ಹಿಡಿಯಲಾಯಿತು.

ಕೇಂದ್ರ ಸರಕಾರದ ಮೀನುಗಾರಿಕಾ ಹಡಗಿನ ಮೊತ್ತಮೊದಲ ಕಪ್ತಾನ ಎಂಬ ಹೆಗ್ಗಳಿಕೆ ಹೊಂದಿರುವ ಹಾಗೂ ದೇಶದ ಎಲ್ಲಾ ಮೀನುಗಾರಿಕಾ ಬಂದರುಗಳನ್ನು ಸಂದರ್ಶಿಸಿರುವ ಮೂಲ್ಕಿ ಒಡೇರಬೆಟ್ಟು ವಾಸಿ ಕ್ಯಾಪ್ಟನ್ ವಾಸು ಎ.ಪುತ್ರನ್ ಹೇಳುವ ಪ್ರಕಾರ,ಇದೊಂದು ಆಶ್ಚರ್ಯಕರ ಸಂಗತಿ.ನಾನ್ಯಾವತ್ತೂ ಈ ತರ ಕಂಡಿಲ್ಲ ಆದರೂ ಸಮುದ್ರದಿಂದ ಹೊಳೆ ಅಥವಾ ನದಿಗೆ ಆಗಮಿಸುವ ಸಮುದ್ರ ಜಲಚರಗಳು ವಾಪಾಸು ಸಮುದ್ರಕ್ಕೆ ತೆರಳುವುದಿಲ್ಲ.ಸಮುದ್ರದ ಒತ್ತಡದಿಂದ ಹೊಳೆಗೆ ಬಂದಿರಬಹುದು.ಆದಾಗ್ಯೂ ಬೊಲೆಂಜಿರ್ ತಿನ್ನಲು ಯೋಗ್ಯವಾಗಿದೆ.ಹೊಳೆಗೆ ಬಂದು ವಾರ ಕಳೆದರೂ ಇನ್ನೂ ಜೀವಂತ ಹಾಗೂ ಸುದೃಢವಾಗಿದೆ ಎಂದಿದ್ದಾರೆ.

ಕಲೇದ 30ಕ್ಕೂ ಅಕ ವರ್ಷಗಳಿಂದ ಶಾಂಭವಿ ಹೊಳೆಯಲ್ಲಿ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಇಲಿಯಾಸ್ ಹೇಳುವ ಪ್ರಕಾರ ಸಮುದ್ರ ನೀರಿನ ಅಡಿಭಾಗದ ನೀರಿನ ಉಷ್ಣಾಂಶ ತೀರಾ ಕೆಳಮಟ್ಟಕ್ಕೆ ಇಳಿದಿರುವ ಕಾರಣ ಬೊಲೆಂಜಿರ್ ಇಷ್ಟೊಂದು ಸಂಖ್ಯೆಯಲ್ಲಿ ಹೊಳೆಗೆ ಆಗಮಿಸಿರಬಹುದು.ಕಳೆದ ವರ್ಷ ಶಾಂಭವಿ ಹೊಳೆಗೆ ಬಂಗುಡೆ ಮೀನುಗಳೂ ಆಗಮಿಸಿದ್ದವು.ಈ ಬಾರಿ ಹೆಜಮಾಡಿಯಲ್ಲಿ ಬೃಹತ್ ಸಂಖ್ಯೆಯಲ್ಲಿ ಬೊಲೆಂಜಿರ್ ಬಂದ ಮರುದಿನವೇ ಶಾಂಭವಿ ಹೊಳೆಯಲ್ಲಿ ಬೊಲೆಂಜಿರ್ ಕಂಡುಬಂದಿತ್ತು.ಆದರೆ ಸೂಕ್ತ ಬಲೆ ಇಲ್ಲದ ಕಾರಣ ಹೆಚ್ಚು ಮೀನು ಹಿಡಿಯಲಾಗಲಿಲ್ಲ ಎಂದಿದ್ದಾರೆ.
ಮಂಗಳೂರಿನ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ರಾಜೇಶ್ ಕೆ.ಎಮ್. ಶನಿವಾರ ಸಂಸ್ಥೆಯ ನುರಿತ ತಂಡದೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಲ್ಲದೆ ಸ್ಥಳೀಯ ಮೀನುಗಾರರಿಂದ ಮಾಹಿತಿ ಸಂಗ್ರಹಿಸಿದರು.ಬಳಿಕ ಸಂಶೋಧನೆಗಾಗಿ ಕೆಲವು ಮೀನುಗಳನ್ನು ಕೊಂಡೊಯ್ದಿದ್ದಾರೆ.ಈ ಸಂದರ್ಭದಲ್ಲಿ ಮೀನುಗಳು ಮರಿ ಇಡುವ ಇಡುತ್ತವೆ.ಮರಿ ಇಡುವ ಸಂದರ್ಭ ಮೀನುಗಳು ಕಡಿಮೆ ಉಪ್ಪಿನಾಂಶ ಇರುವ ಜಾಗಗಳನ್ನು ಹುಡುಕುತ್ತಾ ಹೋಗುತ್ತವೆ.ಹಾಗಾಗಿ ಹೊಳೆಗೆ ಬಂದಿರಬಹುದು.ಸಂಶೋಧನೆಗಾಗಿ ಮೀನುಗಳನ್ನು ಪರಿಶೀಲಿಸಿದ್ದು ಅವೆಲ್ಲವೂ ಮೊಟ್ಟೆ ಇಡುವ ಮೀನುಗಳೇ ಆಗಿದ್ದವು ಎಂದಿದ್ದಾರೆ.