ಶಶಿಕಲಾರವರಿಗೆ ಪಿಎಚ್‍ಡಿ ಡಾಕ್ಟರೇಟ್

ಪಡುಬಿದ್ರಿ: ಇಲ್ಲನ ಕಾಡಿಪಟ್ಣ ನಿವಾಸಿ ವಿನಯ ಸಾಲ್ಯಾನ್‍ರವರ ಪತ್ನಿ ಶಶಿಕಲಾರವರು ಮಂಗಳೂರು ವಿವಿಗೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಫಿಲಾಸಫಿ ಆಫ್ ಡಾಕ್ಟರೇಟ್ ಪದವಿ ದೊರಕಿದೆ.

ಮಂಗಳುರು ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯಾಗಿರುವ ಶಶಿಕಲಾರವರು ಮಂಗಳೂರು ವಿವಿ ಸಮಾಜ ಶಾಸ್ತ್ರದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಗೋವಿಂದರಾಜು ಬಿ.ಎಮ್. ಮಾಗದರ್ಶನದಲ್ಲಿ “ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ವಲಸಿಗರ ಸಮಾಜಶಾಸ್ತ್ರೀಯ ಅಧ್ಯಯನ” ಕುರಿತು ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ಮಂಗಳೂರು ವಿವಿಗೆ ಸಲ್ಲಿಸಿದ್ದರು.

ಎಂಎ ಎಂಫಿಲ್ ಪದವೀಧರೆಯಾಗಿರುವ ಡಾ.ಶಶಿಕಲಾರವರು ಎರ್ಮಾಳು ಬಡಾ ರಾಮ ಕೆ.ಕೋಟ್ಯಾನ್-ಬೇಬಿ ದಂಪತಿಯ ಪುತ್ರಿ.