ವಿಪರೀತ ಕುಡಿತದ ಚಟ: ಉತ್ತರ ಕರ್ನಾಟಕದ ವ್ಯಕ್ತಿ ಸಾವು

ಮೂಲ್ಕಿ ವಿಪರೀತ ಕುಡಿತದ ಚಟ ಹೊಂದಿದ್ದ ಉತ್ತರ ಕನ್ನಡ ಮೂಲದ ವ್ಯಕ್ತಿಯೊಬ್ಬರು ಮನೆಯಲ್ಲಿ ಮಲಗಿದ್ದ ವೇಳೆ ಮೃತಪಟ್ಟ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ. ಹಾವೇರಿ ತಾಲೂಕಿನ ಯಂಗಚ್ಚಿ ಗ್ರಾಮ ವಾಸಿ ಬಸವರಾಜ ನೀಲನಗೌಡ ಬರಮಗೌಡ(40) ಮೃತಪಟ್ಟ ವ್ಯಕ್ತಿ.

ಉತ್ತರ ಕರ್ನಾಟಕದ ಐವರು ಒಂದಾಗಿ ಪಡುಬಿದ್ರಿಯ ಕೆಳಗಿನ ಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಬಸವರಾಜ ಗುರುವಾರ ಬೆಳಿಗ್ಗೆ ಕೆಲಸಕ್ಕೆಂದು ತೆರಳಿದ್ದರು. ವಿಪರೀತ ಕುಡಿತದ ಚಟ ಹೊಂದಿದ್ದ ಬಸವರಾಜ ಬೆಳಿಗ್ಗೆ 11 ಗಂಟೆಗೆ ಕೆಲಸದಿಂದ ವಾಪಾಸು ಮನೆಗೆ ಬಂದು ಮಲಗಿದ್ದರು. ಸಹವರ್ತಿಗಳು ಮಧ್ಯಾಹ್ನ ಬಂದು ಪರಿಶೀಲಿಸಿದಾಗ ಅರೆ ಪ್ರಜ್ಞಾವಸ್ತೆಯಲ್ಲಿದ್ದ ಬಸವರಾಜರನ್ನು ಆಸ್ಪತ್ರೆಗೆ ಕರೆದೊಯದಿದ್ದರು. ಅಲ್ಲಿ ಅವರು ಮೃತಪಟ್ಟಿದ್ದು ದೃಢಪಟ್ಟಿದೆ.

ವಿಪರೀತ ಕುಡಿತದ ಚಟ ಹೊಂದಿದ್ದು, ಅನ್ನಾಹಾರ ಸೇವಿಸದ ಹಿನ್ನೆಲೆಯಲ್ಲಿ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.