ವಿದ್ಯಾವಂತರಾಗಿ ಉನ್ನತ ಹುದ್ದೆ ಅಥವಾ ಸ್ವಂತ ಉದ್ದಿಮೆಯ ಕಡೆಗೂ ಗಮನ ಹರಿಸಲು ಪ್ರಯತ್ನಿಸಬೇಕು

ಪಡುಬಿದ್ರಿ; ಯುವ ಜನತೆಗೆ ನಾರಾಯಣ ಗುರುಗಳ ಸಂದೇಶಗಳನ್ನು ಸರಿಯಾದ ರೀತಿಯಲ್ಲಿ ತಿಳಿಸಬೇಕಾದ ಅನಿವಾರ್ಯತೆ ಇದೆ. ಸಮಾನತೆಯ ತತ್ವವನ್ನು ಅರಿತು ಬಾಳುವುದರೊಂದಿಗೆ ಅವಕಾಶಗಳನ್ನು ಬಳಸುವ ಚತುರತೆ ನಮ್ಮಲ್ಲಿರಬೇಕು. ವಿದ್ಯಾವಂತರಾಗಿ ಉನ್ನತ ಹುದ್ದೆ ಅಥವಾ ಸ್ವಂತ ಉದ್ದಿಮೆಯ ಕಡೆಗೂ ಗಮನ ಹರಿಸಲು ಪ್ರಯತ್ನಿಸಬೇಕಾಗಿದೆ ಎಂದು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್ ಹೇಳಿದರು.

ಪಡುಬಿದ್ರಿ ಬಿಲ್ಲವ ಸಂಘದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮ ದಿನೋತ್ಸವ ಸಂದರ್ಭ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷ ವೈ.ಸುಧೀರ್ ಕುಮಾರ್ ವಹಿಸಿ ಶುಭ ಹಾರೈಸಿದರು.

ಸನ್ಮಾನ: ಉಡುಪಿ ತಾಪಂ ಅಧ್ಯಕ್ಷೆಯಾಗಿ ಆಯ್ಕೆಯಾದ ನೀತಾ ಗುರುರಾಜ್, ಡಾ.ರಾಜಶೇಖರ ಕೋಟ್ಯಾನ್, ರಾಜ್ಯ ಮಟ್ಟದ ಡಿಪ್ಲೋಮಾ ಇನ್ ಕೋಅಪರೇಟಿವ್ ಮ್ಯಾನೇಜ್‍ಮೆಂಟ್ ಪರೀಕ್ಷೆಯಲ್ಲಿ 8ನೇ ರ್ಯಾಂಕ್ ವಿಜೇತ ನಿಖಿಲ್ ಕೋಟ್ಯಾನ್, ನಾರಾಯಣ ಗುರುಗಳ ಮೂರ್ತಿ ಮೆರವಣಿಗೆಯ ಸೇವಾಕರ್ತರಾದ ಹೊನ್ನಯ್ಯ ಮತ್ತು ಸರಸ್ವತಿ ದಂಪತಿಯನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ವಿದ್ಯಾರ್ಥಿವೇತನ ವಿತರಣೆ: 10 ಮತ್ತು 12ನೇ ತರಗತಿಯಲ್ಲಿ ಅತ್ಯುತ್ತಮ ಸಾಧನೆಗೈದ ಸಂಘದ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ನಿರ್ದೇಶಕ ಗಿರೀಶ್ ಪಲಿಮಾರು, ಸಂಘದ ಉಪಾಧ್ಯಕ್ಷ ವೈ.ವಿಶ್ವನಾಥ್, ಕಾರ್ಯದರ್ಶಿ ಲಕ್ಷ್ಮಣ ಬಿ.ಅಮೀನ್, ದಾನಿಗಳಾದ ರೇಶ್ಮಾ ರವಿರಾಜ್ ಹೆಜಮಾಡಿ ಮಟ್ಟು, ಮಹಿಳಾ ವಿಭಾಗದ ಅಧ್ಯಕ್ಷೆ ಚಿತ್ರಾಕ್ಷಿ ಕೆ.ಕೋಟ್ಯಾನ್, ಸೇವಾದಳದ ದಳಪತಿ ಪ್ರಸಾದ್ ವೈ.ಕೋಟ್ಯಾನ್ ಉಪಸ್ಥಿತರಿದ್ದರು.

ವೈ.ಸುಧೀರ್ ಕುಮಾರ್ ಸ್ವಾಗತಿಸಿದರು. ಯಶೋದಾ, ನಿಶ್ಮಿತಾ ಪಿ.ಎಚ್. ಸುಜಿತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಲಕ್ಷ್ಮಣ ಅಮೀನ್ ವಂದಿಸಿದರು.
ಫೋಟೋ:15ಎಚ್‍ಕೆ1

ಕ್ಯಾ: ಪಡುಬಿದ್ರಿ ಬಿಲ್ಲವ ಸಂಘದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮ ದಿನೋತ್ಸವ ಸಂದರ್ಭ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್‍ರನ್ನು ಸನ್ಮಾನಿಸಲಾಯಿತು.