ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಪಡುಬಿದ್ರಿ: ಇಲ್ಲಿಗೆ ಸಮೀಪದ ಪಲಿಮಾರು ಲಿಲ್ಲಿ ರಾಮದಾಸ ಪ್ರಭು ಶೈಕ್ಷಣಿಕ ಟ್ರಸ್ಟ್‍ನಿಂದ ಶೈಕ್ಷಣಿಕ ಹಾಗೂ ಆರ್ಥಿಕತೆ ಆಧಾರದಲ್ಲಿ ವಿವಿಧ ವಿಭಾಗಗಳಿಗೆ ನೀಡುವ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸ್ತುತ ವ್ಯಾಸಂಗ ಮುಂದುವರಿಸಿರುವ ಪಲಿಮಾರು, ಬಳ್ಕುಂಜೆ, ಕವತ್ತಾರು, ಕರ್ನಿರೆ, ನಂದಿಕೂರು, ಅಡ್ವೆ, ಸಾಂತೂರು, ಮುದರಂಗಡಿ, ಇನ್ನ, ಬೆಳ್ಮಣ್, ಮುಂಡ್ಕೂರು, ಅತಿಕಾರಿಬೆಟ್ಟು, ಮುಲ್ಲಡ್ಕ, ಉಳೆಪಾಡಿ ವ್ಯಾಪ್ತಿಯ ಏಳು ಮತ್ತು ಹತ್ತನೇ ತರಗತಿ ಹಾಗೂ ಪದವಿ ಪೂರ್ವ, ಪದವಿ, ತಾಂತ್ರಿಕ ಹಾಗೂ ವೈದ್ಯಕೀಯ ವಿಭಾಗದಲ್ಲಿ ಕಲಿಯುತ್ತಿರುವ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

ಪ್ರತಿ ವಿಭಾಗಳಲ್ಲಿಯೂ 75 ಶೇಕಡ ಅಂಕ ಪಡೆದ ವಿದ್ಯಾರ್ಥಿಗಳು ಶಾಲಾ ಮುಖ್ಯಸ್ಥರ ದೃಢೀಕರಣ, ಅಂಕಪಟ್ಟಿ ಛಾಯಾ ಪ್ರತಿ, ಆದಾಯ ಪ್ರಮಾಣ ಪತ್ರದ ನಕಲು ಪ್ರತಿ ಲಗತ್ತಿಸಿ ಪೂರ್ಣ ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ 20ರೊಳಗೆ ಲಿಲ್ಲಿ ರಾಮದಾಸ ಪ್ರಭು ಶೈಕ್ಷಣಿಕ ಟ್ರಸ್ಟ್ (ರಿ) ಪಲಿಮಾರು, ಉಡುಪಿ 574112 ವಿಳಾಸಕ್ಕೆ ಕಳುಹಿಸಬೇಕು. ಅಂಚೆ ಮೂಲಕ ಅರ್ಜಿ ಪಡೆಯಲು ಸ್ವ ವಿಳಾಸ ಹಾಗು ಸೂಕ್ತ ಅಂಚೆ ಚೀಟಿ ಲಗತ್ತಿಸಿದ ಲಕೋಟೆ ಕಳುಹಿಸಬೇಕು. ಒಂದು ಮನೆಯಿಂದ ಓರ್ವ ವಿದ್ಯಾರ್ಥಿಗೆ ಮಾತ್ರ ವಿದ್ಯಾರ್ಥಿವೇತನ ಪಡೆಯಲು ಮಾತ್ರ ಅವಕಾಶವಿದೆ. ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಂಚೆ ಮೂಲಕ ತಿಳಿಸಲಾಗುವುದು. ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಹಾಜರಾಗಿ ಸ್ವತಃ ವಿದ್ಯಾರ್ಥಿವೇತನ ಪಡೆಯಬೇಕು. ಇಲ್ಲವಾದಲ್ಲಿ ಅದನ್ನು ತಡೆಹಿಡಿಯಲಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0820-2555048, 2555087 ಸಂಪರ್ಕಿಸಬಹುದು ಎಂದು ಟ್ರಸ್ಟ್‍ನ ಪ್ರಕಟಣೆ ತಿಳಿಸಿದೆ.