ವಾರ್ಷಿಕೋತ್ಸವವು ಮಕ್ಕಳ ಸುಪ್ತ ಪ್ರತಿಭೆಯನ್ನು ಪುರಸ್ಕರಿಸುವ ದಿನ-ಶಶಿಕಲಾ ಜನಾರ್ಧನ್

ಪಡುಬಿದ್ರಿ: ಮಕ್ಕಳ ಬೆಳವಣಿಗೆಗೆ ಕಾರಣವಾಗುವ ಶಾಲಾ ವಾರ್ಷಿಕೋತ್ಸವವು ಮಕ್ಕಳ ಸುಪ್ತ ಪ್ರತಿಭೆಗಳ ಸಾಧನೆಗಳನ್ನು ಪುರಸ್ಕರಿಸುವ ದಿನ. ಆ ನಿಟ್ಟಿನಲ್ಲಿ ವಿದ್ಯಾ ಪ್ರಸಾರ ವಿದ್ಯಾ ಮಂದಿರ ಶಾಲೆಯು ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳ ಬೆಳವಣಿಗೆಗೆ ಪಡುತ್ತಿರುವ ಪರಿಶ್ರಮ ಶ್ಲಾಘನೀಯ. ಈ ಶಾಲಾ ವಾತಾವರಣವು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಇನ್ಫೋಸಿಸ್ ಸೀನಿಯರ್ ಮ್ಯಾನೇಜರ್ ಶಶಿಕಲಾ ಜನಾರ್ದನ್ ಹೇಳಿದರು.

ಅವರು ಶುಕ್ರವಾರ ಹೆಜಮಾಡಿ ವಿದ್ಯಾಪ್ರಸಾರ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಸಮಾರಂಭವನ್ನು ಉದ್ಘಾಟಿಸಿ, ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ವಿದ್ಯೆ ಎಂಬುದು ಹೊಳೆಯಂತೆ. ಪ್ರಯತ್ನ ಪೂರ್ವಕವಾಗಿ ದಾಟಲು ಯತ್ನಿಸಿದಲ್ಲಿ ಮಾತ್ರ ಯಶಸ್ಸಿನ ದಡ ಸೇರಲು ಸಾಧ್ಯವಾಗುತ್ತದೆ. ಅದಾಗ ನೀವು ಸಾಧಕರಾಗಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಮತ್ತು ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಳ್ಳಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಇಲ್ಲಿನ ಶಾಲಾ ಮಕ್ಕಳ ಮುತುವರ್ಜಿಯಿಂದಲೇ ಈ ಶಾಲೆಯು ಇನ್ನಷ್ಟು ಹಸುರೀಕರಣಗೊಂಡು ಶಾಲಾಭಿಮಾನವನ್ನು ಮೂಡಿಸಿಕೊಳ್ಳಿರಿ ಎಂದರು.

ಮುಕ್ಕಳು ಜವಾಬ್ದಾರಿಯುತ ಸಾಧಕರಾಗ ಬೇಕಾದಲ್ಲಿ ಮನೆಯಲ್ಲಿಯೇ ಮಕ್ಕಳಿಗೆ ಜವಾಬ್ದಾರಿಯನ್ನು ಕಲಿಸಬೇಕಾದ ಹೆತ್ತವರು, ಗುರು-ಹಿರಿಯರಿಗೆ, ಸಹಪಾಠಿಗಳಿಗೆ ಗೌರವ ಕೊಡುವುದನ್ನು ರೂಢಿಸಿರಿ ಎಂದು ಪೆÇೀಷಕರಿಗೆ ಕಿವಿ ಮಾತನ್ನು ಹೇಳಿದರು. ವಿದ್ಯಾರ್ಥಿಗಳಲ್ಲಿ ನನ್ನ ಶಾಲೆ ಎಂಬ ಅಭಿಮಾನ ಮೂಡಿಸುವಂತಹ ಹೊಣೆಗಾರಿಕೆ ಅಧ್ಯಾಪಕರದ್ದು ಎಂದರು.
ಹೆಚ್‍ಕೆವಿಪಿ ಫೌಂಡೇಶನ್ ಅಧ್ಯಕ್ಷ ವಿನೋದ್ ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮುಂಬಯಿ ಕ್ಸಿನಾಕ್ಸ್ ಕನ್ಸಲ್ಟೆನ್ಸಿ ಸೀನಿಯರ್ ವಿ.ಪಿ. ಫಿನಾನ್ಸ್ ಮತ್ತು ಕಂಪೆನಿ ಸೆಕ್ರೆಟರಿ ರವೀಂದ್ರ ಪುತ್ರನ್ ಸಹಾಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ದಯಾನಂದ ಹೆಜಮಾಡಿ, ಕೋಶಾಧಿಕಾರಿ ಭೋಜರಾಜ್ ಕರ್ಕೇರಾ, ಬ್ಯಾಂಕ್ ಆಫ್ ಬರೋಡದ ನಿವೃತ್ತ ಪ್ರಬಂಧಕ ಶ್ರೀನಿವಾಸ್ ಕೋಟ್ಯಾನ್ ಉಪಸ್ಥಿತರಿದ್ದರು.

ಪ್ರಾಂಶುಪಾಲೆ ರಾಜೇಶ್ವರೀ ಸ್ವಾಗತಿಸಿದರು. ಶಾಲಾ ಸಂಚಾಲಕ ಜಯಶೀಲ ಬಂಗೇರ ವಾರ್ಷಿಕ ವರದಿ ನೀಡಿದರು. ಸುರೇಖಾ, ವಿನುತಾ, ಸಂಗೀತಾ, ಸಹನಾ, ಪವಿತ್ರಾ ಬಹುಮಾನಿತರನ್ನು ಪರಿಚಯಿಸಿದರು. ನಿಶ್ಮಿತಾ ವಂದಿಸಿದರು. ಸುಕೇಶಿಣೀ, ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.