ಲಯನ್ಸ್ ಪಡುಬಿದ್ರಿಗೆ ಜಿಲ್ಲಾ ಗವರ್ನರ್ ಭೇಟಿ:ವಿವಿಧ ಕಾರ್ಯಕ್ರಮಗಳ ಉದ್ಘಾಟನೆ

ಪಡುಬಿದ್ರಿ: ಲಯನ್ಸ್ ಜಿಲ್ಲೆ 317-ಸಿಯ ಜಿಲ್ಲಾ ಗವರ್ನರ್ ಡಾ.ತಲ್ಲೂರು ಶಿವರಾಮ ಶೆಟ್ಟಿ ತಮ್ಮ ಅಧಿಕೃತ ಭೇಟಿಯ ಅಂಗವಾಗಿ ಪಡುಬಿದ್ರಿ ಲಯನ್ಸ್ ಕ್ಲಬ್‍ಗೆ ಭೇಟಿ ನೀಡಿದ ಸಂದರ್ಭ ಪಡುಬಿದ್ರಿ ಲಯನ್ಸ್‍ನಿಂದ ನಡೆಸಲಾದ ವಿವಿಧ ಕಾರ್ಯಗಳನ್ನು ಉದ್ಘಾಟಿಸಿದರು.

ರಸ್ತೆ ಸುರಕ್ಷತೆ ಬಗ್ಗೆ ಲಯನ್ಸ್ ಶಾಲೆ ಮತ್ತು ಬೋರ್ಡ್ ಶಾಲೆ ಬಳಿ ಅಳವಡಿಸಲಾದ ಸೈನ್‍ಬೋರ್ಡ್,ಪಡುಬಿದ್ರಿ ದೇವಳ ಬಳಿ ಅಳವಡಿಸಲಾದ ರತೆ ನಾಮಫಲಕಗಳನ್ನು ಉದ್ಘಾಟಿಸಿದರು.ಸ್ಥಳೀಯ ಅಂಗನವಾಡಿಗೆ ಲಯನ್ಸ್ ವತಿಯಿಂದ ವಿದ್ಯುತ್ ಸಂಪರ್ಕ ನೀಡಲಾಗಿದ್ದು,ಅದಕ್ಕೆ ಡಾ ತಲ್ಲೂರು ಚಾಲನೆ ನೀಡಿದರು.ಇದೇ ಸಂದರ್ಭ ಬಡ ವಿದ್ಯಾರ್ಥಿನಿಗೆ ಧನಸಹಾಯ ವಿತರಿಸಲಾಯಿತು.ಡಯಾಬಿಟೀಸ್ ತಡೆಗಟ್ಟುವಿಕೆ ಬಗ್ಗೆ ಭಿತ್ತಿಪತ್ರ ಹಂಚಲಾಯಿತು.

ಅವರನ್ನು ಪಡುಬಿದ್ರಿ ಲಯನ್ಸ್ ಶಾಲೆಯಲ್ಲಿ ಸ್ವಾಗತಿಸಲಾಯಿತು.ಶಾಲೆಯ ಎಲ್ಲಾ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿದರು.

ಸಂಜೆ ಹೋಟೆಲ್ ಅಮರ್ ಕಂಫಟ್ರ್ಸ್‍ನ ಆಮಂತ್ರಣ ಸಭಾಂಗಣದಲ್ಲಿ ನಡೆದ ಚಾರ್ಟರ್ ನೈಟ್ ಸಮಾರಂಭದಲ್ಲಿ ಲಯನ್ಸ್ ಸದಸ್ಯರನ್ನುದ್ದೇಶಿಸಿ ಅವರು ಮಾತನಾಡಿದರು.

ಸನ್ಮಾನ: ಇದೇ ಸಂದರ್ಭ ಪಡುಬಿದ್ರಿ ಲಯನ್ಸ್ ವತಿಯಿಂದ ಡಾ.ತಲ್ಲೂರು ಶಿವರಾಮ ಶೆಟ್ಟಿ-ಗಿರಿಜಾ ದಂಪತಿಯನ್ನು ಸನ್ಮಾನಿಸಲಾಯಿತು.ಕೃಷಿಕ ಶೇಖ್ ಹುಸೈನ್,ಪತ್ರಿಕೆ ಮತ್ತು ಹಾಲು ವಿತರಕರಾದ ಗಣೇಶ್ ಭಟ್ ಮತ್ತು ಶ್ರೀಕಾಂತ್ ಶೆಣೈರವರನ್ನು ಲಯನ್ಸ್ ವತಿಯಿಂದ ಸನ್ಮಾನಿಸಲಾಯಿತು.

ಪಡುಬಿದ್ರಿ ಲಯನ್ಸ್ ಅಧ್ಯಕ್ಷ ಮಿಥುನ್ ಆರ್.ಹೆಗ್ಡೆ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.ಲಯನ್ಸ್ ಜಿಲ್ಲಾ ಸಹಾಯಕ ಗವರ್ನರ್ ಎನ್.ಎಮ್.ಹೆಗ್ಡೆ,ರೀಜನ್ ಚೇರ್‍ಮೆನ್ ಪಿ.ಜಿ.ಆಚಾರ್ಯ,ಝೋನ್ ಚೇರ್‍ಮೆನ್ ಸುಧಾ ಆರ್.ನಾವಡ, ನಿಕಟ ಪೂರ್ವಾಧ್ಯಕ್ಷ ಮ್ಯಾಕ್ಸಿಮ್ ಡಿಸೋಜಾ, ಕೋಶಾಧಿಕಾರಿ ಪಿ.ಸದಾಶಿವ ಆಚಾರ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ಲಕ್ಷ್ಮಣ್ ಡಿ.ಪೂಜಾರಿ ವಂದಿಸಿದರು.