ರಕ್ತದಾನ ಪೂರ್ವಭಾವಿಯಾಗಿ ಸೈಕಲ್ ರ್ಯಾಲಿ

ಮೂಲ್ಕಿ : ಮನುಕುಲದ ಅತೀ ಶ್ರೇಷ್ಠ ದಾನ ರಕ್ತದಾನವಾಗಿದ್ದು ಈ ಮೂಲಕ ಜೀವ ಉಳಿಸಿದ ಸಂತೋಷದೊಂದಿಗೆ ರಕ್ತದಾನಿಗೂ ಆರೋಗ್ಯ ಲಭ್ಯವಾಗುವ ಅತ್ಯುತ್ತಮ ಸೇವಾ ಕಾರ್ಯವಾಗಿದೆ ಎಂದು ಭಾರತೀಯ ಕೆಥೋಲಿಕ್ ಯುವ ಸಂಚಲನದ ಮೂಲ್ಕಿ ಘಟಕದ ಸಚೇತಕ ರಿಚಾರ್ಡ್ ಪುರ್ತಾದೊ ಹೇಳಿದರು.

ಭಾರತೀಯ ಕೆಥೋಲಿಕ್ ಯುವ ಸಂಚಲನದ ಮೂಲ್ಕಿ ಘಟಕದ ವತಿಯಿಂದ ನಡೆಯಲಿರುವ ಬೃಹತ್ ರಕ್ತದಾನ ಶಿಬಿರದ ಪೂರ್ವಭಾವಿಯಾಗಿ ಜನ ಜಾಗ್ರತಿಗೊಳಿಸಲು ನಡೆದ ಸೈಕಲ್ ರ್ಯಾಲಿ ಉದ್ಘಾಟಿಸಿ ಅವರು ಮಾತನಾಡಿದರು.

ಸೇವಾ ಕಾರ್ಯಕ್ರಮ ಹಾಗೂ ಸಮಾಜಮುಖಿ ಕರ್ತವ್ಯಗಳನ್ನು ನಿರ್ವಹಿಸಲು ಯುವ ಜನತೆ ಆಸಕ್ತರಾಗಿರುವುದು ಬಹಳ ಅಭಿನಂದನೀಯವಾಗಿದ್ದು ಯುವ ಜನತೆ ಸಕ್ರೀಯರಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಐಸಿವೈಎಂ ಸುರತ್ಕಲ್ ವಲಯದ ಅಧ್ಯಕ್ಷ ಪ್ರದೀಪ್ ಫೆರಾವೊ ವಹಿಸಿ ಶುಭ ಹಾರೈಸಿದರು.

ಕಲಾವಿದ ಸೆಲ್ವದೋರ್ ಡಿಸೋಜಾ ರ್ಯಾಲಿಗೆ ಚಾಲನೆ ನೀಡಿದರು. ಐಸಿವೈಎಂ ಮೂಲ್ಕಿ ಘಟಕದ ಅಧ್ಯಕ್ಷ ಸುಮಿತ್ ಕ್ರಾಸ್ತಾ ಸ್ವಾಗತಿಸಿದರು. ಲೋಯ್ಡ್ ಮೂಲ್ಕಿ ನಿರೂಪಿಸಿದರು. ಜೇಮ್ಸ್ ಪಿಂಟೋ ವಂದಿಸಿದರು. ಕಾರ್ಯದರ್ಶೀ ಮೊವಿನ್ ಡಿಸೋಜಾ ಮತ್ತು ಘಟಕದ ಸದಸ್ಯರು ಹಾಜರಿದ್ದರು.

ರ್ಯಾಲಿಯು ಕಾರ್ನಾಡು ಮಾರ್ಗವಾಗಿ ಮೂಲ್ಕಿ ಪೇಟೆ, ಬಪ್ಪನಾಡು, ವಿಜಯಾ ಕಾಲೇಜು ರಸ್ತೆಯಾಗಿ ಸಮಾಪನಗೊಂಡಿತು.